ಸೀರಿಯಲ್​ ಬಿಟ್ಟು ಓಲಾ ಡ್ರೈವರ್​ ಆದ್ರಾ ನಟ ಕಿರಣ್​ ರಾಜ್​? ಏನಿದು 'ಕರ್ಣ'ನ ಹೊಸ ಅವತಾರ

Published : Jul 06, 2026, 06:46 PM IST

'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ಅವರು ತಮ್ಮ ಸಮಾಜ ಸೇವೆಯಿಂದ ನಿಜ ಜೀವನದ ಕರ್ಣ ಎನಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ಆಟೋ ಓಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಅಭಿಮಾನಿಗಳು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

PREV
16
ನಿಜ ಜೀವನದ ಕರ್ಣ

ಕರ್ಣ ಸೀರಿಯಲ್​ ಕರ್ಣ ಉರ್ಫ್​ ನಟ ಕಿರಣ್​ ರಾಜ್​ (Kiran Raj) ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್​ ರಾಜ್​ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ.

26
ಅಗತ್ಯ ವಸ್ತು ವಿತರಣೆ

ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

36
ಟಿಆರ್​ಪಿ ಕಿಂಗ್​

ಅಷ್ಟಕ್ಕೂ, ಕಿರಣ್ ರಾಜ್ ಅವರನ್ನು ಟಿಆರ್​ಪಿ ಕಿಂಗ್​ ಎಂದೇ ಹೇಳಲಾಗುತ್ತದೆ. ಕರ್ಣ ಸೀರಿಯಲ್​ನಲ್ಲಿಯೂ ಅವರು ಇದನ್ನು ಮೆಂಟೇನ್​ ಮಾಡಿಕೊಂಡು ಬಂದಿದ್ದಾರೆ. ಅವರ ನಟನೆ, ಅಭಿವ್ಯಕ್ತಿಶೀಲ ಕಣ್ಣುಗಳು ಮತ್ತು ಸಂಭಾಷಣೆ, ಕರ್ಣನ ಆಂತರಿಕ ಸಂಘರ್ಷ ಎಲ್ಲವುಗಳಲ್ಲಿಯೂ ನಟ ತಮ್ಮ ಪಾತ್ರದಲ್ಲಿ ಮೋಡಿ ಮಾಡಿದ್ದಾರೆ.

46
ಆಟೋ ಓಡಿಸಿದ ಕಿರಣ್ ರಾಜ್​

ಇದೀಗ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ನಟ ಆಟೋ ಓಡಿಸುತ್ತಿರುವ ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿರುವ ನಟ ಆಟೋ ಓಡಿಸುತ್ತಿದ್ದಾರೆ. ಹಿಂದೆ ಕುಳಿತ ಪ್ರಯಾಣಿಕರೊಬ್ಬರಿಗೆ ಓಟಿಪಿ ಕೇಳಿದ್ದಾರೆ. ಅಷ್ಟಕ್ಕೂ ಹಿಂದೆ ಕುಳಿತವರು ಕರ್ಣ ಸೀರಿಯಲ್​ನಲ್ಲಿ ಅವರ ಅಮ್ಮನ ಪಾತ್ರ ಮಾಡುತ್ತಿರುವ ನಟಿಯೇ.

56
ಎಕ್ಸ್​ಪರ್ಟ್​ ಎಂದು ತೋರಿಸಿದ್ರು!

ಆಟೋ ಓಡಿಸುವ ಮೂಲಕ, ತಾವು ಆಟೋ ಓಡಿಸುವುದರಲ್ಲಿಯೂ ಎಕ್ಸ್​ಪರ್ಟ್​ ಎಂದು ತೋರಿಸಿಕೊಟ್ಟಿದ್ದಾರೆ ಕಿರಣ್​ ರಾಜ್​. ಓಟಿಪಿ ಕೇಳಿದ ಕಾರಣದಿಂದ ಜನರು ಸೀರಿಯಲ್​ ಬಿಟ್ಟು, ಓಲಾ, ಊಬರ್​, ರ್ಯಾಪಿಡೋ ಚಾಲಕ ಆಗಿಬಿಟ್ರಾ ನಟ ಎಂದು ನಟನ ಕಾಲೆಳೆಯುತ್ತಿದ್ದಾರೆ.

66
ನಟನ ಹಿನ್ನೆಲೆ

ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್‌ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories