Kiran Raj Birthday: ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ಕರ್ಣ’ ಧಾರಾವಾಹಿ ನಟಿ ರಿಯಾ ಕೊಟ್ರು ಸರ್ಪೈಸ್… ನಟ ಫುಲ್ ಖುಷ್

Published : Jul 06, 2026, 03:33 PM IST

Kiran Raj Birthday: ಕನ್ನಡ ಕಿರುತೆರೆಯ ಸ್ಟಾರ್ ನಟ ಕಿರಣ್ ರಾಜ್ ಇತ್ತೀಚೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದು, ನಟನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಕರ್ಣ ಸೀರಿಯಲ್ ನಟಿ ಸರ್ಪ್ರೈಸ್ ಕೊಟ್ಟಿದ್ದಾರೆ. ಇದನ್ನು ನೋಡಿ ಕಿರಣ್ ರಾಜ್ ಸಿಕ್ಕಾಪಟ್ಟೆ ಖುಷಿ ಪಟ್ಟು ಏನು ಹೇಳಿದ್ದಾರೆ ಗೊತ್ತಾ?

PREV
16
ಕಿರಣ್ ರಾಜ್ ಹುಟ್ಟುಹಬ್ಬ

ಕನ್ನಡ ಕಿರುತೆರೆಯ ಸ್ಟಾರ್ ನಟ ಹಾಗೂ ‘ಕರ್ಣ’ ಧಾರಾವಾಹಿ ನಾಯಕ ಕಿರಣ್ ರಾಜ್ ಜುಲೈ 5ರಂದು ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೂಡ ಸಂಭ್ರಮದಿಂದ ವಿಶ್ ಮಾಡಿದ್ದಾರೆ. ಕರ್ಣ ಸೀರಿಯಲ್ ತಂಡ ಕೂಡ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

26
ಕರ್ಣ ಧಾರಾವಾಹಿ ನಟಿ ಕೊಟ್ರು ಸರ್ಪೈಸ್

‘ಕರ್ಣ’ ಧಾರಾವಾಹಿಯಲ್ಲಿ ರಿಯಾ ಪಾತ್ರದ ಮೂಲಕ ಎಂಟ್ರಿ ಕೊಟ್ಟು, ಇದೀಗ ಸಂಜಯ್ ಪತ್ನಿ ಪಾತ್ರದಲ್ಲಿ ಮಿಂಚುತ್ತಿರುವ ರಿಯಾ ಆಲಿಯಾ ಅಂಕಿತಾ ಜಯರಾಮ್ ಅವರು ಕಿರಣ್ ರಾಜ್ ಹುಟ್ಟುಹಬ್ಬದ ದಿನ ಅವರಿಗೆ ಸರ್ಪ್ರೈಸ್ ಆಗಿ ಏನೋ ಮಾಡಿದ್ದು, ಅದನ್ನು ನೋಡಿ ಕಿರಣ್ ರಾಜ್ ಸಿಕ್ಕಾಪಟ್ಟೆ ಖುಷಿ ಪಟ್ಟು ಏನು ಹೇಳಿದ್ದಾರೆ ಗೊತ್ತಾ?

36
ಅಂಕಿತಾ ಜಯರಾಮ್ ಪೋಸ್ಟ್

ನಟಿ ಅಂಕಿತಾ ಜಯರಾಮ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಿರಣ್ ರಾಜ್ ಜೊತೆಗಿನ ವಿಡಿಯೋವೊಂದನ್ನು ಶೇರ್ ಮಾಡಿ, Happiest birthday ಕಿರಣ್ ರಾಜ್ ಅಣ್ಣ. ಇಂದು ಕರ್ಣ ಧಾರಾವಾಹಿಯ ಸೆಟ್ ನಲ್ಲಿ ನಮ್ಮ ಹೀರೋ ಕಿರಣ್ ರಾಜ್ ಅಣ್ಣನ ಹುಟ್ಟು ಹಬ್ಬದ ಸಂಭ್ರಮಾಚರಣೆ ಎಂದು ಬರೆದುಕೊಂಡು ವಿಶೇಷ ಮಾಹಿತಿ ತಿಳಿಸಿದ್ದಾರೆ.

46
ರಿಯಾ ಕರ್ಣನಿಗೆ ಕೊಟ್ಟಿದ್ದೇನು ನೋಡಿ

ಹುಟ್ಟುಹಬ್ಬಕ್ಕೆ ಎಲ್ಲರೂ ಕೇಕ್ ತಂದು ಕಟ್ ಮಾಡೋದು ವಾಡಿಕೆ.... ಆದರೆ ಸ್ವಲ್ಪ ಡಿಪರೆಂಟ್ ಇರಲಿ ಅಂತ ನಾನೇ ತಯಾರು ಮಾಡಿರೋ ಸಿಹಿ ಏನು ಅಂತ ನೋಡಿ, Keeping it raw cuz felt cute. ಎಂದು ಅಂಕಿತಾ ಬರೆದುಕೊಂಡಿದ್ದಾರೆ. ಅಂದ ಹಾಗೆ ಕಿರಣ್ ರಾಜ್ ಗಾಗಿ ರಿಯಾ ಮಾಡಿ ತಂದಿದ್ದು ಕ್ಯಾರೆಟ್ ಹಲ್ವಾ? ಅದನ್ನು ತಿಂದು ಕಿರಣ್ ಏನು ಹೇಳಿದ್ರು ನೋಡಿ.

56
ಕಿರಣ್ ರಾಜ್ ಗಾಗಿ ತಮ್ಮ ಕೈಯಾರೆ ಹಲ್ವಾ ತಯಾರಿಸಿದ ಅಂಕಿತಾ

ವಿಡಿಯೋದಲ್ಲಿ ಕಾಣಿಸಿರುವಂತೆ ಅಂಕಿತಾ ಕಿರಣ್ ಅವರಿಗೆ ಹ್ಯಾಪಿ ಬರ್ತ್ ಡೇ ಒನ್ಸ್ ಅಗೈನ್ ಎನ್ನುತ್ತಾ, ನಾನು ಓದೋದಕ್ಕೆ ಬಿಟ್ಟು, ಬೇರೆ ಯಾವುದಕ್ಕೂ ಎದ್ದೇಳಲ್ಲ, ಇವತ್ತು ನನ್ನ ಕೈಯಾರೆ ಹಲ್ವಾ ತಯಾರಿಸಿದ್ದೀನಿ ಎಂದಿದ್ದಾರೆ, ಅದಕ್ಕೆ ಕಿರಣ್ ರಾಜ್ ಇದು ಟಾಪ್ ಕ್ಲಾಸ್ ಗಾಜರ್ ಹಲ್ವಾ, ಸ್ವೀಟ್ ಆಗಿದೆ, ಅವತ್ತು ಇರ್ಲಿಲ್ಲ, ಸಖತ್ ಆಗಿದೆ ಎಂದು ಹೊಗಳಿದ್ದಾರೆ.

66
ಡಬ್ಬಿ ನಂಗೆ ಅಲ್ವಾ ಎಂದ ಕಿರಣ್ ರಾಜ್

ಇನ್ನು ಅಂಕಿತಾ ತಾವೇ ಕೈಯಾರೆ ಹಲ್ವಾ ತಿನ್ನಿಸಿದ ಮೇಲೆ, ಕಿರಣ್ ಇದು ಫುಲ್ ನಂಗೇ ಅಲ್ವಾ ಎಂದಿದ್ದಾರೆ. ಅಂಕಿತಾ ಹೌದು ಎಂದಿದ್ದಕ್ಕೆ ಕಿರಣ್, ಎಸ್ ಡಬ್ಬಿ ನಾಳೆ ಕೊಡ್ತೀನಿ ಎನ್ನುತ್ತಾ, ಮುದ್ದಾದ ನಗು ಬೀರುತ್ತಾ, ಡಬ್ಬಿ ಮುಚ್ಚಿಟ್ಟು, ಮತ್ತೆ ಜೋರಾಗಿ ನಕ್ಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories