Karna Serial ನಟ ಕಿರಣ್​ ರಾಜ್ ​ಬಂಪರ್​ ಆಫರ್​: ಸುಲಭದ ರೆಸಿಪಿ ಹೇಳಿ ಸರ್​ಪ್ರೈಸ್​ ಪಡೆಯಿರಿ- ಡಿಟೇಲ್ಸ್​ ಇಲ್ಲಿದೆ

Published : Feb 24, 2026, 04:54 PM IST

ಕರ್ಣ ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ 'Passport and Pan with Kiran Raj' ಎಂಬ ಹೊಸ ಕಾರ್ಯಕ್ರಮ ಆರಂಭಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳಿಂದ ಸುಲಭವಾದ ಅಡುಗೆ ರೆಸಿಪಿಗಳನ್ನು ಕೇಳಿದ್ದು, ಅತಿ ಹೆಚ್ಚು ಲೈಕ್ಸ್ ಪಡೆದ ರೆಸಿಪಿಗೆ ಸರ್‌ಪ್ರೈಸ್ ನೀಡಲಿದ್ದಾರೆ.

PREV
16
ಜೈಲುಪಾಲಾದ ಕರ್ಣ

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್​ (Karna Serial) ಸದ್ಯ ಟಾಪ್​ ಸೀರಿಯಲ್​ಗಳಲ್ಲಿ ಒಂದೆನಿಸಿದೆ. ಇದರಲ್ಲಿ ಕರ್ಣ ಆಗಿ ನಟಿಸ್ತಿರೋ ನಟನ ಹೆಸರು ಕಿರಣ್​ ರಾಜ್​. ಈ ಸೀರಿಯಲ್​ನಲ್ಲಿ ಅಗತ್ಯಕ್ಕಿಂತ ತುಸು ಹೆಚ್ಚೇ ಒಳ್ಳೆಯವನು ಎನ್ನಿಸಿಕೊಂಡು ಕೆಲವೊಮ್ಮೆ ಇರಿಟೇಟ್​ ಮಾಡುತ್ತಿದ್ದ ಕರ್ಣ, ಇದೀಗ ತಿರುಗಿ ಬಿದ್ದು ಭೇಷ್​ ಎನ್ನಿಸಿಕೊಂಡಿದ್ದಾನೆ. ಆದರೆ ಇದೀಗ ವಿಲನ್​ಗಳ ಕುತಂತ್ರದಿಂದ ಜೈಲು ಪಾಲಾಗಿದ್ದಾನೆ!

26
ಫ್ಯಾನ್ಸ್​ ಅಚ್ಚುಮೆಚ್ಚಿನ ನಟ

ಅದೇನೇ ಇದ್ದರೂ ಕಿರಣ್​ ರಾಜ್​ ಅವರ ನಟನೆಗೆ ಮನಸೋಲದವರೇ ಇಲ್ಲ. ಇವರು ಇದಾಗಲೇ ಸೀರಿಯಲ್​ ಮಾತ್ರವಲ್ಲದೇ ಸಿನಿಮಾಗಳಲ್ಲಿ ನಟಿಸಿಯೂ ಸೈ ಎನ್ನಿಸಿಕೊಂಡಿದ್ದಾರೆ. ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. 1993ರ ಜುಲೈ 5ರಂದು ಹುಟ್ಟಿರುವ ನಟನಿಗೆ ಈಗ 32 ವರ್ಷ ವಯಸ್ಸು.

36
ಸುಲಭದ ರೆಸಿಪಿ ಕೇಳಿದ ಕರ್ಣ

ಸದಾ ಫಿಟ್​ನೆಸ್​, ಡಯೆಟ್​ ಫುಡ್​ ಎಂದೆಲ್ಲಾ ಆರೋಗ್ಯ ಕಾಪಾಡಿಕೊಂಡಿರೋ ಕರ್ಣ ಅರ್ಥಾತ್​ ಕಿರಣ್​ ರಾಜ್​ (Karna Serial Kiran Raj) ಅವರು ಇದೀಗ ಸುಲಭದ ರೆಸಿಪಿ ಮಾಡುವವರಿಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟಿದ್ದಾರೆ. ಡಯೆಟ್​ ಫುಡ್​ ತಿಂದೂ ತಿಂದೂ ಬೇಜಾರು ಆಗಿದೆ. ಆದ್ದರಿಂದ ಸಿಂಪಲ್​ ಆಗಿ ಮಾಡುವ ಹೆಚ್ಚು ಸಾಮಗ್ರಿ ಇಲ್ಲದ ಅಡುಗೆ ಬಗ್ಗೆ ಹೇಳಿ ಎಂದಿದ್ದಾರೆ.

46
ನಟನಿಂದ ಸರ್​ಪ್ರೈಸ್​

ಯಾರ ಅಡುಗೆಗೆ ಅತಿ ಹೆಚ್ಚು ಲೈಕ್ಸ್​ ಬರುತ್ತದೆಯೋ ಅವರಿಗೆ ಸರ್​ಪ್ರೈಸ್​ ಇದೆ. ಜೊತೆಗೆ ಅದನ್ನು ನಾನು ಟ್ರೈ ಮಾಡುತ್ತೇನೆ ಎಂದಿರುವ ಕಿರಣ್​ ರಾಜ್​ ಇದಕ್ಕೆ ಅವರು ಹೆಸರು ಕೊಟ್ಟಿದ್ದು, Passport and Pan with Kiran Raj ಎಂದು ಹೆಸರಿಸಿದ್ದಾರೆ. ಇದಾಗಲೇ ಹಲವಾರು ಮಂದಿ ಸುಲಭದ ರೆಸಿಪಿ ಹಾಕುತ್ತಿದ್ದಾರೆ.

56
ಇಲ್ಲಿ ಶೇರ್ ಮಾಡಿ

ನಿಮಗೂ ಸುಲಭದಲ್ಲಿ ಮಾಡುವ ರೆಸಿಪಿ ಬಂದ್ರೆ, ಕಿರಣ್​ ರಾಜ್​ ಅವರ instagram ಅಧಿಕೃತ ಖಾತೆ itskiranraj ಗೆ ಹೋಗಿ ಅಡುಗೆ ಬಗ್ಗೆ ಬರೆಯಬಹುದು. itskiranraj ಮುಂದೆ ಬ್ಲೂಟಿಕ್​ ಇರುವುದನ್ನು ಕನ್​ಫರ್ಮ್​ ಮಾಡಿಕೊಳ್ಳಿ. ಇದು ಅವರ ಅಧಿಕೃತ ಖಾತೆ.

66
ನಟನ ಕುರಿತು...

ಇನ್ನು ನಟನ ಕುರಿತು ಹೇಳುವುದಾದರೆ, ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್​ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್‌ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories