Karna Serial: ಅಂತೂ ಇಂತೂ ಕರ್ಣನಿಗೆ ಪ್ರೀತಿ ಬಂತು! ಈಗ ಶುರುವಾಗತ್ತೆ ನಿಜವಾದ ಕಥೆ!

Published : Aug 20, 2025, 11:02 AM IST

ಕರ್ಣ ಧಾರಾವಾಹಿಯಲ್ಲಿ ಕರ್ಣನಿಗೆ ಲವ್‌ ಆಗಿದೆ. ಹೌದು, ಬಹಳ ದಿನಗಳಿಂದ ಕರ್ಣ ಸರ್‌ ಕಂಡರೆ ನಿಧಿಗೆ ತುಂಬ ಇಷ್ಟ. ಯಾವಾಗಲೂ ಅವನ ಹಿಂದೆ ಇವಳು ಓಡಾಡುತ್ತಿದ್ದಳು. ಈಗ ಕರ್ಣನಿಗೆ ಲವ್‌ ಆಗಿದೆ.  

PREV
16

ನೀನು ಕರ್ಣನಿಂದ ದೂರ ಇರು ಅಂತ ಕರ್ಣನ ತಂದೆ ರಮೇಶ್‌, ನಿಧಿಗೆ ಎಚ್ಚರಿಕೆ ಕೊಟ್ಟಿದ್ದರು. ಆರಂಭದಲ್ಲಿ ಕಣ್ಣೀರು ಹಾಕಿದ ಅವಳು ಆಮೇಲೆ ಸಮಾಧಾನಪಟ್ಟುಕೊಂಡಳು. ಈಗ ಕರ್ಣನಿಗೆ ಕಾವಲುಗಾರನಾಗಿ ಇರಬೇಕು ಅಂತ ಅಂದುಕೊಂಡಿದ್ದಾಳೆ. ಕರ್ಣ ಸರ್‌ ಮನೆಯಲ್ಲಿ ಅವರಿಗೆ ಬೆಲೆ ಇಲ್ಲ, ಗೌರವ ಇಲ್ಲ, ಎಲ್ಲರೂ ಹೀನಾಯವಾಗಿ ನೋಡ್ತಾರೆ ಅಂತ ಅವಳಿಗೆ ಅರ್ಥ ಆಗಿದೆ. ಇದನ್ನೆಲ್ಲ ಸರಿ ಮಾಡೋಕೆ ನಿಧಿ ರೆಡಿ ಆಗಿದ್ದಾಳೆ.

26

ಕರ್ಣನನ್ನು ನೋಡೋಕೆ ಅವಳು ಅವನ ಮನೆಗೆ ಬಂದಿದ್ದಾಳೆ. ಅಷ್ಟೇ ಅಲ್ಲದೆ ಅವನ ರೂಮ್‌ಗೂ ಕೂಡ ಬಂದಳು, ಆಗ ಕರ್ಣ ಯಾರಿಗೂ ನಿಧಿ ಕಾಣಬಾರದು ಅಂತ ತುಂಬ ಟ್ರೈ ಮಾಡಿದ್ದನು. ಈ ಎಪಿಸೋಡ್‌ ಅನೇಕರಿಗೆ ಇಷ್ಟ ಆಗಿದೆ.

36

ಕರ್ಣ ಈಗ ಎಲ್ಲೇ ಹೋದರೂ ಅಲ್ಲಿ ಅವನಿಗೆ ನಿಧಿ ಕಾಣುತ್ತಿದ್ದಾಳೆ. ಯಾರನ್ನೇ ನೋಡಿದರೂ ಕೂಡ ಅವನಿಗೆ ನಿಧಿ ನೋಡಿದ ಹಾಗೆ ಆಗುತ್ತಿದೆ. ಇದನ್ನು ನೋಡಿ ನನಗೆ ಏನಾಗ್ತಿದೆ ಎಂದು ಆಶ್ಚರ್ಯಪಡುತ್ತಿದ್ದಾನೆ. ಈಗ ಕರ್ಣನಿಗೆ ನಿಧಿ ಮೇಲೆ ಲವ್‌ ಆಗಿದೆ.

46

ಲವ್‌ ವಿಷಯವನ್ನು ಕರ್ಣ ನಿಧಿಗೆ, ನಿಧಿ ಕರ್ಣನಿಗೆ ಪರಸ್ಪರ ಹೇಳಿಕೊಳ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕರ್ಣ ಯಾರನ್ನು ಮದುವೆ ಆಗ್ತಾನೆ ಎಂದು ಕಾದು ನೋಡಬೇಕಿದೆ.

56

ಈ ಲವ್‌ ಸ್ಟೋರಿ ನೋಡಿ ವೀಕ್ಷಕರು, “ಅಂತೂ ಇಂತೂ ನಮ್ಮ ಕರ್ಣ ಸರ್‌ಗೆ ನಿಧಿ ಮೇಲೆ ಪ್ರೀತಿ ಶುರುವಾಯಿತು, ಚೆನ್ನಾಗಿದೆ ಅಲ್ವಾ? ನಿಧಿ ಕರ್ಣ ಕಣ್ಣಾ ಮುಚ್ಚಾಲೆ ಆಟ ಬೊಂಬಾಟ್, ಕರ್ಣ ಮತ್ತು ನಿಧಿಯನ್ನು ಹೀಗೆ ನೋಡೋಕೆ ಇಷ್ಟ ಆಗುತ್ತೆ, ಇವತ್ತಿನ ಎಪಿಸೋಡ್ ತುಂಬಾ ಚೆನ್ನಾಗಿತ್ತು. ನಮ್ ಕರ್ಣನಿಗೆ ಸರಿಯಾದ ಜೋಡಿ ಅಂದ್ರೆ ಅದು ನಿಧಿ. ಇವತ್ತಿನ ಎಪಿಸೋಡ್ ನಿಜಕ್ಕೂ ಕ್ಯೂಟ್, ಎಂಜಾಯಬಲ್. ಕರ್ಣ ನಿಧಿ ಜೋಡಿ ನಿಜಕ್ಕೂ ಟೋಟಲ್ ಟ್ರೀಟ್. ಬರಹಗಾರ, ಡೈರೆಕ್ಟರ್ & ಕ್ಯಾಸ್ಟ್ರಾ ಟೀಮ್‌ಗೆ ಬಿಗ್ ಹ್ಯಾಟ್ಸ್ ಆಫ್” ಎಂದಿದ್ದಾರೆ.

66

ಕರ್ಣ ಪಾತ್ರದಲ್ಲಿ ಕಿರಣ್‌ ರಾಜ್‌, ನಿಧಿ ಪಾತ್ರದಲ್ಲಿ ಭವ್ಯಾ ಗೌಡ, ನಿತ್ಯಾ ಪಾತ್ರದಲ್ಲಿ ನಮ್ರತಾ ಗೌಡ ಅವರು ನಟಿಸುತ್ತಿದ್ದಾರೆ. ಉಳಿದಂತೆ ಟಿ ಎಸ್‌ ನಾಗಾಭರಣ, ಸಿಮ್ರನ್‌, ವೀಣಾ ರಾವ್‌, ಗಾಯತ್ರಿ ಪ್ರಭಾಕರ್‌, ಆಶಾ ರಾಣಿ ಮುಂತಾದವರು ನಟಿಸುತ್ತಿದ್ದಾರೆ.

Read more Photos on
click me!

Recommended Stories