ಕೆಲವು ವೀಕ್ಷಕರು ಭಾಗ್ಯ ಪರ ಧ್ವನಿ ಎತ್ತಿದ್ದು, ಎಷ್ಟು ಕಷ್ಟ ಕೊಡುತ್ತಿರ ಈ ಭಾಗ್ಯಗೆ, ಆ ಕೋಣ ತಾಂಡವ ಇಂದ ಮೊದಲು ನೆಮ್ಮದಿ ಇಲ್ಲ, ಡಿವೋರ್ಸ್ ಆದ ಮೇಲು ನೆಮ್ಮದಿ ಇಲ್ಲ, ಭಾಗ್ಯ ಹೊಸ ಜೀವನ ಶುರು ಮಾಡಿ ಆರಂ ಆಗಿ ಇರುತ್ತಾಳೆ ಅಂತ ಅಂದ್ರೆ, ಆ ಕೋಣ ದಿಂದ ನೆಮ್ಮದಿ ಇಲ್ಲ, ಮಗಳಿಂದ ನೆಮ್ಮದಿ ಇಲ್ಲ, ಸಾಕು ಈ ಸೀರಿಯಲ್ ಮುಗಿಸಿ ಎಂದಿದ್ದಾರೆ. ಇನ್ನೊಬ್ಬರು ಕಾಮೆಂಟ್ ಮಾಡಿ ಇಷ್ಟು ದಿನ ತಾಂಡವ್ ಗೆ ಭಾಗ್ಯ ಬೇಕಿರಲಿಲ್ಲ.ಇನ್ನೊಬ್ಬಳನ್ನು ಕಟ್ಟಿಕೊಂಡ.ಇವಾಗ ಆದಿ ಭಾಗ್ಯ ಮದುವೆ ಆಗಿ ಬಿಡುತ್ತಾರೆ ಅಂತ ನಾಟಕ ಮಾಡುತ್ತಾ ಬಂದ, ಯಾಕೇನಮ್ಮ ಭಾಗ್ಯಾ,,,, ಆದಿ ಜೊತೆ ಮರು ಮದುವೆ ಆದ್ರೇ ತಪ್ಪೇನಿದೆ, ಪವಿತ್ರ ಸ್ನೇಹ ಆದಿ ಭಾಗ್ಯದು. ಮದುವೆ ಆಗಲಿ. ಇನ್ನಾದರೂ ನೆಮ್ಮದಿಯಾಗಿ ಇರಲಿ ಬಿಡಿ. ಮಕ್ಕಳಿಗೆ, ಹೆತ್ತವರಿಗೆ , ಅತ್ತೆ ಮಾವನಿಗೆ ಒಳ್ಳೇ ಮಗ ಆಗಲಿಲ್ಲ, ಒಳ್ಳೇ ತಂದೆ ಆಗಲಿಲ್ಲ, ಒಳ್ಳೇ ಅಳಿಯ ನೂ ಆಗಿಲ್ಲಾ ಎಂದಿದ್ದಾರೆ.