Karna Serial ರೋಚಕ ಟ್ವಿಸ್ಟ್​: ಕರ್ಣನೇ ಮಗ ಎನ್ನೋ ಸತ್ಯ ಸೀತಾಗೂ ತಿಳಿಯಿತು! ಸೀರಿಯಲ್​ ಮುಕ್ತಾಯ?

Published : Aug 18, 2026, 05:28 PM IST

ಕರ್ಣ ಸೀರಿಯಲ್​ನಲ್ಲಿ, ತನ್ನ ಮಗನೆಂದು ರಮೇಶ್‌ಗೆ ಸತ್ಯ ತಿಳಿದರೂ ಹೇಳಲಾಗದ ಸ್ಥಿತಿಯಲ್ಲಿದ್ದಾನೆ. ಇತ್ತ, ಆಸ್ಪತ್ರೆಯಲ್ಲಿರುವ ಕರ್ಣನನ್ನು ನೋಡಲು ಬಂದ ಸೀತಾ, ಅವನನ್ನು ಸ್ಪರ್ಶಿಸಿದಾಗ ತಾಯ್ತನದ ಅನುಭೂತಿ ಪಡೆದು ಆಘಾತಕ್ಕೊಳಗಾಗುತ್ತಾಳೆ. ಈ ಸ್ಪರ್ಶದಿಂದ ಕರ್ಣನಲ್ಲಿ ಚಲನೆ ಕಾಣಿಸಿಕೊಂಡಿದ್ದು, ಮುಂದೇನು?

PREV
16
ರಮೇಶ್​ ತಿಳಿದ ಸತ್ಯ

ಕರ್ಣ ಸೀರಿಯಲ್​ನಲ್ಲಿ (Karna Serial) ಇದಾಗಲೇ ಕರ್ಣನೇ ತನ್ನ ಮಗ ಎನ್ನುವ ಸತ್ಯ ರಮೇಶ್​ಗೆ ತಿಳಿದಿದೆ. ಆದರೆ ಅದನ್ನು ತಿಳಿಯುವ ಮೊದಲೇ ರಮೇಶ್​ ತನ್ನ ಸ್ವಂತ ಮಗನನ್ನೇ ಕೊಲೆಮಾಡಲು ನೋಡಿ ಎಲ್ಲರ ಕಣ್ಣಿನಲ್ಲಿ ಅಪರಾಧಿಯಾಗಿದ್ದಾನೆ.

26
ಯಾರೂ ನಂಬದ ರಮೇಶ್​

ಅವನನ್ನು ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಅವನೇ ತನ್ನ ಮಗ ಎಂದು ಹೇಳುವುದಕ್ಕೂ ಅವನಿಂದ ಸಾಧ್ಯವಾಗುತ್ತಿಲ್ಲ. ತಪ್ಪಿತಸ್ಥ ಭಾವನೆಯಲ್ಲಿ ಕರ್ಣ ಇದ್ದಾನೆ.

36
ಸೀತಾಗೆ ಸತ್ಯದ ಅರಿವು

ಅದೇ ಇನ್ನೊಂದೆಡೆ, ಕರ್ಣನಿಗೆ ತಾನು ಆ್ಯಕ್ಸಿಡೆಂಟ್​ ಮಾಡಿಸಿರುವುದಾಗಿ ನಯನತಾರಾ ಭುವನೇಶ್ವರಿ ಉರ್ಫ್​ ಸೀತಾಗೆ ಹೇಳಿದಾಗ ಅವಳಿಗೆ ಅದ್ಯಾಕೋ ಸಂಕಟವಾಗುತ್ತದೆ. ತನ್ನ ಹಗೆತನ ಏನಿದ್ದರೂ ಕೆಲಸದಲ್ಲಿಯೇ ವಿನಾ ಜೀವ ತೆಗೆಯುವ ಮಟ್ಟಿಗೆ ಅಲ್ಲ ಎಂದು ನಯನತಾರಾ ಮೇಲೆ ಕೈ ಮಾಡಲು ಹೋಗುತ್ತಾಳೆ ಅವಳು.

46
ಆಸ್ಪತ್ರೆಗೆ ಬರುವ ಅಮ್ಮ

ಕೊನೆಗೆ ಕರ್ಣನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ. ತನ್ನ ಕೈಮೀರಿ ಇಂಥದ್ದೊಂದು ನಡೆದು ಹೋಯಿತು ಎಂದು ಮರಗುತ್ತಾಳೆ.

56
ಕರ್ಣನ ಸ್ಪರ್ಶಿಸುತ್ತಿದ್ದಂತೆಯೇ ಶಾಕ್​

ಅದೇ ಸಮಯದಲ್ಲಿ ಕರ್ಣನನ್ನು ಮುಟ್ಟುತ್ತಾಳೆ. ಹೀಗೆ ಆಗುತ್ತಲೇ ಆಕೆಯ ಮೈಯಲ್ಲೆಲ್ಲಾ ರೋಮಾಂಚನವಾಗುತ್ತದೆ. ಅದ್ಯಾವುದೋ ಅಮ್ಮನ ಶಕ್ತಿ ಆಕೆಯಲ್ಲಿ ಜಾಗೃತವಾಗುತ್ತದೆ. ಕಣ್ಣು ಅರಿಯದಿದ್ದರೂ ಕರುಳು ಅರಿಯುತ್ತದೆ ಎನ್ನುತ್ತಾರಲ್ಲ, ಹಾಗೆ ಆಗಿ ಅವಳಿಗೆ ಶಾಕ್​ ಆಗುತ್ತದೆ.

66
ಮುಗಿಯತ್ತಾ ಸೀರಿಯಲ್​

ಅಮ್ಮನ ಸ್ಪರ್ಶ ಆಗುತ್ತಿದ್ದಂತೆಯೇ ಕರ್ಣನಲ್ಲಿ ಚಲನೆ ಕಾಣಿಸುತ್ತದೆ. ಭುವನೇಶ್ವರಿಗೆ ಕರ್ಣನನ್ನು ಮುಟ್ಟುತ್ತಿದ್ದಂತೆಯೇ ಅದೇನೋ ಸಂಕಟ ಉಂಟಾಗುತ್ತದೆ. ಹಾಗಿದ್ದರೆ, ಕರ್ಣನೇ ತನ್ನ ಮಗ ಎನ್ನುವ ಸತ್ಯ ತಿಳಿಯತ್ತಾ? ಸೀರಿಯಲ್​ನಲ್ಲಿ ಇಷ್ಟು ಆದರೆ ಮುಂದೇನು ಇರುತ್ತೆ ಎನ್ನುವ ಕುತೂಹಲ ಸದ್ಯಕ್ಕಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories