‘ಆದಿ ಲಕ್ಷ್ಮೀ ಪುರಾಣ’ದಲ್ಲಿ ನಾಯಕ-ನಾಯಕಿಗಿಂತಲೂ ವೀಕ್ಷಕರಿಗೆ ಹೆಚ್ಚು ಇಷ್ಟವಾಗ್ತಿದೆ ಈ ಪಾತ್ರ!

Published : Jan 28, 2026, 03:16 PM IST

Adi Lakshmi Purana serial: ಇವರು ಏನೇ ಮಾಡಿದರೂ ಚೆನ್ನ ಎಂಬಂತಾಗಿದೆ ವೀಕ್ಷಕರಿಗೆ. ಕಾಮೆಂಟ್ಸ್‌ ಸೆಕ್ಷನ್ ನೋಡಿದರೆ ನಾಯಕಿ ಲಕ್ಷ್ಮೀಗಿಂತ ಇವರ ಬಗ್ಗೆಯೇ ಹೊಗಳಿಕೆಯ ಮಾತುಗಳು ಕೇಳಿಬರುತ್ತಿವೆ. ಇವರಿಗೋಸ್ಕರ ಈ ಸೀರಿಯಲ್ ನೋಡ್ತಿರೋದು ಎಂದು ವೀಕ್ಷಕರು ಕಾಮೆಂಟ್ ಮಾಡಿರುವುದನ್ನ ನೀವಿಲ್ಲಿ ನೋಡಬಹುದು.

PREV
17
ಸಂಜೀವನ ಮದುವೆ

ಕಳೆದ ತಿಂಗಳಿನಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಆದಿ ಲಕ್ಷ್ಮೀ ಪುರಾಣ’ ಸಹ ಮೆಲ್ಲಗೆ ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಾಯಕಿ ಲಕ್ಷ್ಮೀಯ ಅಣ್ಣ ಸಂಜೀವನ ಮದುವೆ ಕಾರ್ಯಗಳನ್ನು ತೋರಿಸುತ್ತಲೇ ಧಾರಾವಾಹಿ ಪ್ರಾರಂಭವಾಯ್ತು.

27
ಎದುರಾಯ್ತು ಸಾಕಷ್ಟು ವಿಘ್ನಗಳು

ಸಂಜೀವನ ಮದುವೆಯಾಗುತ್ತಿರುವ ಅಮೃತಾಗೆ ಈ ಮದುವೆ ಇಷ್ಟವಿರಲಿಲ್ಲ. ಆದರೆ ತಾತನ ಅಭಿಲಾಷೆಯ ಮೇರೆಗೆ ಅಂತೂ ಈ ಮದುವೆ ಆಯ್ತು. ಆದರೆ ಮದುವೆ ಎಲ್ಲರಂದುಕೊಂಡಷ್ಟು ಸುಲಭವಾಗಿ ನೆರವೇರಲಿಲ್ಲ. ಸಾಕಷ್ಟು ವಿಘ್ನಗಳು ಎದುರಾಯ್ತು.

37
ಈ ಮದುವೆ ಇಷ್ಟವಿರಲಿಲ್ಲ

ಈ ಮದುವೆ ಸುಸೂತ್ರವಾಗಿ ನಡೆಯಲು ಕಾರಣ ಲಕ್ಷ್ಮೀ. ಇದು ನಾಯಕ ಆದಿಗೆ ಬಹಳ ಚೆನ್ನಾಗಿ ಗೊತ್ತು. ಆದರೆ ಆದಿಗೆ ಈ ಮದುವೆ ಇಷ್ಟವಿರಲಿಲ್ಲ. ಆದಿಗೆ ಮಾತ್ರವಲ್ಲ, ಮನೆಯ ಬಹುತೇಕರಿಗೆ ಮದುವೆ ಇಷ್ಟವಿರಲಿಲ್ಲ. ಹಾಗಾಗಿ ತಪ್ಪಿಸಲು ಸಾಕಷ್ಟು ಪ್ರಯತ್ನಗಳೂ ನಡೆದವು.

47
ಅರ್ಥ ಮಾಡಿಸಿದ ಲಕ್ಷ್ಮೀ

ಮದುವೆಯಾದ ನಂತರ ಸಂಜೀವನ ಹೆಂಡತಿ ಅಮೃತಾಗೆ ಅಸಮಾಧಾನ ಇತ್ತು. ಸಂಜೀವನ ನೋಡಿದರೆ ಆಗುತ್ತಿರಲಿಲ್ಲ. ಆದರೆ ಯಾವಾಗ ಅಣ್ಣನ ಬಗ್ಗೆ ಲಕ್ಷ್ಮೀ ಅರ್ಥ ಮಾಡಿಸಿದಳೋ ಆಗ ಅಮೃತಗೆ ನಿಧಾನವಾಗಿ ಸಂಜೀವನ ಮೇಲೆ ಗೌರವ ಶುರುವಾಗಿದೆ.

57
ಮೆಚ್ಚುಗೆ ವ್ಯಕ್ತಪಡಿಸಿದ ವೀಕ್ಷಕರು

ಅಷ್ಟೇ ಅಲ್ಲ, ಶ್ರೀಮಂತ ಕುಟುಂಬದಿಂದ ಬಂದ ಅಮೃತಾ ನಿಧಾನವಾಗಿ ಸಂಜೀವನ ಹಳ್ಳಿ ಮನೆ, ವಾತವರಣಕ್ಕೆ ಒಗ್ಗಿಕೊಳ್ಳುತ್ತಿದ್ದಾಳೆ. ಏತನ್ಮಧ್ಯೆ ಅಮೃತ ಬಗ್ಗೆ ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

67
ವೀಕ್ಷಕರ ಕಾಮೆಂಟ್

ಅಮೃತಾ ಏನೇ ಮಾಡಿದರೂ ಚೆನ್ನ ಎಂಬಂತಾಗಿದೆ ವೀಕ್ಷಕರಿಗೆ. ಒಮ್ಮೆ ಕಾಮೆಂಟ್ಸ್‌ ಸೆಕ್ಷನ್ ನೋಡಿದರೆ ನಾಯಕಿ ಲಕ್ಷ್ಮೀಗಿಂತ ಅಮೃತ ಬಗ್ಗೆಯೇ ಹೊಗಳಿಕೆಯ ಮಾತುಗಳು ಕೇಳಿಬರುತ್ತಿವೆ. ಅಮೃತಾ ಬೆಸ್ಟ್, ಅಮೃತಾ ನಕ್ಕರೆ ಚೆನ್ನ, ಅಮೃತಾಗೋಸ್ಕರ ನಾವು ಈ ಸೀರಿಯಲ್ ನೋಡ್ತಿರೋದು ಎಂದು ವೀಕ್ಷಕರು ಕಾಮೆಂಟ್ ಮಾಡಿರುವುದನ್ನ ನೀವಿಲ್ಲಿ ನೋಡಬಹುದು.

77
ಲಕ್ಷ್ಮೀ ವಿವಾಹ ಪೂರ್ವ ಸಮಾರಂಭ

ಸದ್ಯ ಧಾರಾವಾಹಿಯಲ್ಲಿ ಲಕ್ಷ್ಮೀ ವಿವಾಹ ಪೂರ್ವ ಸಮಾರಂಭ ನಡೆಯುತ್ತಿದ್ದು, ಈ ಮದುವೆಯ ಜವಬ್ದಾರಿಯನ್ನು ದುರದ್ದೇಶದಿಂದಲೇ ಆದಿ ವಹಿಸಿಕೊಂಡಿದ್ದಾನೆ. ಆದರೆ ಕೊನೆ ಗಳಿಗೆಯಲ್ಲಿ ಈ ಮದುವೆ ನಿಲ್ಲುವ ಎಲ್ಲಾ ಸೂಚನೆಗಳು ಕಾಣಿಸುತ್ತಿದ್ದು, ಮುಂದೇನಾಗಬಹುದು ಎಂಬ ಕಾತುರ ಎಲ್ಲರಿಗೂ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories