ಕಾಕ್ರೋಚ್ ಸುಧಿಗೆ ಕೇಳಿದ್ರೆ ಚಂದ್ರಪ್ರಭಾ I Love You ಅಂತ ಹೇಳೋದಾ?

Published : Oct 11, 2025, 04:03 PM IST

Bigg Boss Kannada Clips ಬಿಗ್‌ಬಾಸ್ ಸೀಸನ್ 12ರ ಮೊದಲ ಕಳಪೆ ಪ್ರದರ್ಶನಕ್ಕಾಗಿ ಮಂಜು ಭಾಷಿಣಿ ಮತ್ತು ಯಾಶಿಕಾ ಶೆಟ್ಟಿ ಜೈಲು ಸೇರಿದ್ದಾರೆ. ಜೈಲಿನಲ್ಲಿದ್ದ ಯಾಶಿಕಾ ಜೊತೆ ತಮಾಷೆ ಮಾಡುವಾಗ ಚಂದ್ರಪ್ರಭ 'ಐ ಲವ್ ಯು' ಎಂದಿದ್ದಾರೆ.

PREV
15
ಬಿಗ್‌ಬಾಸ್ ಸೀಸನ್ 12

ಬಿಗ್‌ಬಾಸ್ ಸೀಸನ್ 12ರ ಮೊದಲ ಕಳಪೆಯಾಗಿ ಮಂಜು ಭಾಷಿಣಿ ಮತ್ತು ಯಾಶಿಕಾ ಶೆಟ್ಟಿ ಜೈಲು ಸೇರಿದ್ದಾರೆ. ಬಿಗ್‌ಬಾಸ್ ನೀಡಿರುವ ಸಮವಸ್ತ್ರ ಧರಿಸಿ ಇಬ್ಬರು ಸ್ಪರ್ಧಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. ಇವರಿಬ್ಬರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಚಂದ್ರಪ್ರಭ ಐ ಲವ್ ಯು ಎಂದು ಹೇಳಿದ್ದಾರೆ.

25
Yashika Sudhee

ಜೈಲುಪಾಲಾಗಿರುವ ಸ್ಪರ್ಧಿಗಳಿಗೆ ಬೇಸರವಾಗಬಾರದು ಎಂದು ಇತರೆ ಸ್ಪರ್ಧಿಗಳು ಜೈಲಿನ ಹೊರಗೆ ಕುಳಿತು ತಮಾಷೆ ಮಾಡುತ್ತಿರುತ್ತಾರೆ. ಇದೇ ರೀತಿ ಒಳಗೆ ಮಂಜು ಭಾಷಿಣಿ ಮತ್ತು ಯಾಶಿಕಾ ಇದ್ರೆ, ಹೊರಗಡೆ ಸತೀಶ್, ಚಂದ್ರಪ್ರಭ ಮತ್ತು ಕಾಕ್ರೋಚ್ ಸುಧಿ ಕುಳಿತಿದ್ದರು.

35
I am not interested

ನಾನು ಕಥೆಯೊಂದು ಹೇಳುವೆ ಎಂದು ಯಾಶಿಕಾ ಶೆಟ್ಟಿ ಮುಂದೆ ಬರುತ್ತಾರೆ. ಒಂದೂರಿನಲ್ಲಿ I Miss You ಮತ್ತು I Love You ಅಂತಾ ಇಬ್ಬರು ಇರುತ್ತಾರೆ. ಇಬ್ಬರಲ್ಲಿ I Miss You ಊರು ಬಿಟ್ಟು ಹೋದ್ರೆ ಯಾರು ಉಳಿಯುತ್ತಾರೆ ಎಂದು ಕೇಳುತ್ತಾರೆ. ಇದಕ್ಕೆ ಚಂದ್ರಪ್ರಭ I Love You ಅಂತಾರೆ. ಮರು ಉತ್ತರ ನೀಡುವ ಯಾಶಿಕಾ ಶೆಟ್ಟಿ, I am not interested ಎಂದು ಹೇಳಿ ನಗುತ್ತಾರೆ.

45
ನೀವ್ಯಾಕೆ ಉತ್ತರ ನೀಡಿದ್ದೀರಿ?

ನಾನು ಈ ಪ್ರಶ್ನೆಯನ್ನು ಸುಧಿ ಅವರಿಗೆ ಕೇಳಿದ್ದೆ. ನೀವ್ಯಾಕೆ ಉತ್ತರ ನೀಡಿದ್ದೀರಿ ಎಂದು ಯಾಶಿಕಾ ಶೆಟ್ಟಿ ಹುಸಿಕೋಪ ಮಾಡಿಕೊಳ್ಳುತ್ತಾರೆ. ನಂತರ ಇದೇ ರೀತಿಯಲ್ಲಿ ಮತ್ತೊಂದು ಪ್ರಶ್ನೆಯನ್ನು ಕೇಳುತ್ತಾರೆ. ಆ ಪ್ರಶ್ನೆಗೂ ಸುಧಿ ಸೇರಿದಂತೆ ಮೂವರು ಉತ್ತರ ನೀಡುತ್ತಾರೆ. ಇದೆಲ್ಲಾ ನಾವು 3ನೇ ಕ್ಲಾಸ್‌ನಲ್ಲಿ ಗೊತ್ತಿತ್ತು ಎಂದು ಹೇಳುತ್ತಾರೆ.

ಇದನ್ನೂ ಓದಿ: ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್

55
ಕಿಚ್ಚನ ಪಂಚಾಯ್ತಿ

ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿಯೂ ಕಾಕ್ರೋಚ್ ಸುಧಿ ಆಟಕ್ಕೆ ಸುದೀಪ್ ಸಹ ಬೇಸರ ವ್ಯಕ್ತಪಡಿಸಿದ್ದಾರೆ. ನೇರವಾಗಿ ಅವರು ಜೋಕರ್ ರೀತಿ ಕಾಣಿಸುತ್ತಿದ್ದರು ಎಂದು ಯಾಶಿಕಾ ಹೇಳುತ್ತಾರೆ. ಅಸುರ ಅನ್ನೋದು ಕೇವಲ ಅವರ ಮೇಕಪ್‌ಗೆ ಮಾತ್ರ ಸೀಮಿತವಾಗಿತ್ತು ಎಂದು ಜಾನ್ವಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 'ರೇವಂತಿ' ಹೆಸರು ಹೇಳಿ ಸುದೀಪ್​ರನ್ನು ಇಕ್ಕಟ್ಟಿಗೆ ಸಿಲುಕಿಸಿದ Bigg Boss ಮಲ್ಲಮ್ಮ! ಯಾರೀ ರೇವಂತಿ?

Read more Photos on
click me!

Recommended Stories