Karna Serial: ಎಲ್ಲ ಖುಷಿಯಿಂದ ಇರ್ಬೇಕಿದ್ರೆ, ಈ ಥರ ಮಾಡಿದ್ರೆ ಚೆನ್ನಾಗಿರಲ್ಲ: ಡೈರೆಕ್ಟರ್‌ಗೆ ವಾರ್ನಿಂಗ್

Published : Dec 26, 2025, 10:04 PM IST

Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ತೇಜಸ್‌ ಮರಳಿ ಬಂದಾಗಿದೆ, ನಿತ್ಯಾ ಹಾಗೂ ತೇಜಸ್‌ ಮದುವೆ ಮಾಡಿಸಬೇಕು ಎಂದು ಕರ್ಣ ರೆಡಿಯಾಗಿದ್ದಾನೆ. ಅಷ್ಟರೊಳಗಡೆ ನಿತ್ಯಾ ಮಗುವಿಗೆ ತೊಂದರೆ ಆಗುವ ಸಂದರ್ಭ ಬಂದಿದೆ. ಹಾಗಾದರೆ ಮುಂದೆ ಏನಾಗಲಿದೆ? 

PREV
15
ಕರ್ಣ ಒಳ್ಳೆಯವನು ಎಂದ ತೇಜಸ್

ಕರ್ಣನೇ ನಮ್ಮನ್ನು ಕಿಡ್ನ್ಯಾಪ್‌ ಮಾಡಿಸಿದ್ದಾನೆ, ಅವನೇ ನನ್ನ ಹಾಗೂ ನಿತ್ಯಾಳನ್ನು ದೂರ ಮಾಡಿದ್ದಾನೆ ಎಂದು ತೇಜಸ್‌ ನಂಬಿಕೊಂಡಿದ್ದನು. ಆಮೇಲೆ ಅವನಿಗೆ ಕರ್ಣ ಒಳ್ಳೆಯವನು ಎನ್ನೋ ಸತ್ಯ ಗೊತ್ತಾಗಿದೆ. ನಾನು ಅಪ್ಪ ಆಗ್ತಿದ್ದೇನೆ, ಕರ್ಣ ಮದುವೆ ನಾಟಕ ಮಾಡಿ ನಿತ್ಯಾಳನ್ನು ಉಳಿಸಿದ ಎನ್ನೋದು ತೇಜಸ್‌ಗೆ ಗೊತ್ತಾಗಿದೆ.

25
ತೇಜಸ್‌ ಹಾಗೂ ನಿತ್ಯಾ ಮದುವೆ

ಆದಷ್ಟು ಬೇಗ ತೇಜಸ್‌ ಹಾಗೂ ನಿತ್ಯಾಳ ಮದುವೆ ಮಾಡಿದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ. ನಿತ್ಯಾ ಹಾಗೂ ತೇಜಸ್‌ ಚೆನ್ನಾಗಿ ಬದುಕುತ್ತಾರೆ, ನಿತ್ಯಾ ಹೊಟ್ಟೆಯಲ್ಲಿರುವ ಮಗುಗೆ ನಿಜವಾದ ತಂದೆಯ ಪ್ರೀತಿ ಕೂಡ ಸಿಗುವುದು, ನಿತ್ಯಾ ಕೂಡ ಖುಷಿಯಲ್ಲಿ ಇರುತ್ತಾಳೆ ಎಂದು ಕರ್ಣ ಅಂದುಕೊಂಡಿದ್ದನು, ಆದರೆ ಈ ಯೋಜನೆಗೆ ಕಲ್ಲು ಬೀಳುವ ಎಲ್ಲ ಲಕ್ಷಣ ಕಾಣುತ್ತಿದೆ.

35
ಸಂಜಯ್‌, ರಮೇಶ್ ಕುತಂತ್ರ ಬಿಡಲ್ಲ

‌ಕರ್ಣ ಹಾಗೂ ನಿಧಿಯ ಖುಷಿಯನ್ನು ಹಾಳು ಮಾಡೋದು ಸಂಜಯ್‌, ರಮೇಶ್‌ಗೆ ಇಷ್ಟ. ಹೀಗಾಗಿಯೇ ತೇಜಸ್‌ನನ್ನು ಕಿಡ್ನ್ಯಾಪ್‌ ಮಾಡಿಸಿದರು, ನಿತ್ಯಾ-ಕರ್ಣ ಮದುವೆ ಆಗಬೇಕು ಅಷ್ಟೇ ಅಲ್ಲದೆ ನಿತ್ಯಾ, ನಿಧಿ, ಕರ್ಣ ಮೂವರು ಕಣ್ಣೀರು ಹಾಕಬೇಕು, ನಿತ್ಯವೂ ಅಳುತ್ತಲೇ ಇರಬೇಕು ಎಂದು ಈ ರೀತಿ ಪ್ಲ್ಯಾನ್‌ ಮಾಡಿದ್ದರು. ಆದರೆ ನಿತ್ಯಾ, ಕರ್ಣ ಮದುವೆ ಆಗಿಲ್ಲ, ನಿತ್ಯಾ ಹೊಟ್ಟೆಯಲ್ಲಿ ಮಗು ಇದೆ ಎನ್ನೋದು ಈ ಕೇಡಿಗಳಿಗೆ ಶಾಕ್‌ ಉಂಟಾಗಿದೆ.

45
ನಿತ್ಯಾ ಮಗು ಏನಾಗಲಿದೆ?

ಸಂಜಯ್‌ ಕುತಂತ್ರದಿಂದ ನಿತ್ಯಾಳಿಗೆ ಗರ್ಭಪಾತ ಆಗುವಂಥ ಜ್ಯೂಸ್‌ ಕುಡಿಸಿದ್ದಲ್ಲದೆ, ಅವಳ ಫೋನ್‌ ತಗೊಂಡು ಬಂದು, ರೂಮ್‌ ಲಾಕ್‌ ಮಾಡಿಟ್ಟಿದ್ದಾನೆ. ನಿತ್ಯಾ ಹೊಟ್ಟೆನೋವಿನಿಂದ ಅಳುತ್ತಿದ್ದಾಳೆ. ಆಮೇಲೆ ಕರ್ಣ, ನಿಧಿ ಅವಳ ರೂಮ್‌ಗೆ ಬಂದು ಬಾಗಿಲು ತಟ್ಟಿದ್ದಾರೆ. ನಿತ್ಯಾಳನ್ನು ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಲೂಬಹುದು.

55
ಮುಂದೆ ಏನಾಗಲಿದೆ?

ನಿತ್ಯಾ ಮಗು ಸತ್ತರೆ ವೀಕ್ಷಕರಿಗೆ ಬೇಸರ ಆಗಬಹುದು. ಮಗುವನ್ನು ಸಾಯಿಸಬೇಡಿ, ಆಮೇಲೆ ಚೆನ್ನಾಗಿರಲ್ಲ ಎಂದು ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. 

ಇನ್ನೊಂದು ಕಡೆ ಕರ್ಣ ಒಂದಿಷ್ಟು ಪ್ರಯತ್ನಪಟ್ಟು ನಿತ್ಯಾಳ ಮಗುವನ್ನು ಉಳಿಸಿದರೂ ಆಶ್ಚರ್ಯವಿಲ್ಲ. ನಿತ್ಯಾ ಒಂದು ವೇಳೆ ತನ್ನ ಮಗುವನ್ನು ಕಳೆದುಕೊಂಡರೆ, ಅದಿಕ್ಕೆ ಕರ್ಣನೇ ಕಾರಣ ಎಂದು ಕೂಡ ನಂಬಿದರೂ ಕೂಡ, ದ್ವೇಷ ಮಾಡಿದರೂ ಆಶ್ಚರ್ಯವಿಲ್ಲ. ಯಾರಿಗೆ ಏನೇ ಆದರೂ ಕರ್ಣನಿಗೆ ಸಮಸ್ಯೆ ಆಗುವುದು, ಅವನನ್ನೇ ಹೊಣೆ ಮಾಡುತ್ತಾರೆ. ಹೀಗಾಗಿ ಕರ್ಣನಿಗೆ ತೊಂದರೆ ಆದರೂ ಆಶ್ಚರ್ಯವಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories