Karna Serial: ನಿಧಿಗೆ ನಂಬಲಾಗದ ಸುದ್ದಿ ಕೊಟ್ಟ ಕರ್ಣನ ತಂದೆ ರಮೇಶ್;‌ ಅಯ್ಯೋ..ಇನ್ನೇನ್‌ ಕಾದಿದ್ಯೋ!

Published : Sep 20, 2025, 03:59 PM IST

ಕರ್ಣ ಧಾರಾವಾಹಿಯಲ್ಲಿ ನಿಧಿ ಮೇಲೆ ಕರ್ಣನಿಗೆ ಲವ್‌ ಆಗಿದೆ. ಆದರೆ ಅವನು ಇನ್ನೂ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿಲ್ಲ. ಕರ್ಣನನ್ನು ಕಂಡರೆ ಪ್ರಾಣಬಿಡೋ ನಿಧಿ ಸಮಯ ಸಿಕ್ಕಾಗೆಲ್ಲ ಅವನ ಹೊಟ್ಟೆ ಉರಿಸುವ ಕೆಲಸ ಮಾಡುತ್ತಾಳೆ. ಈಗ ಅವಳಿಗೆ ರಮೇಶ್‌ ಕುಣಿದು ಕುಪ್ಪಳಿಸೋ ನ್ಯೂಸ್‌ ಕೊಟ್ಟಿದ್ದಾನೆ. 

PREV
15
ಅವಮಾನ ಮಾಡುತ್ತಿದ್ದ ರಮೇಶ್‌

ಆರಂಭದಲ್ಲಿ ಕರ್ಣ ಬೀದಿಯಲ್ಲಿ ಬಿದ್ದವನು, ನನ್ನ ಮಗ ಅಲ್ಲ ಅಂತ ರಮೇಶ್ ಸಿಕ್ಕಾಪಟ್ಟೆ ಅವಮಾನ ಮಾಡಿದ್ದನು. ಈಗ ಅವನು ಬದಲಾಗಿದ್ದಾನೆ, ಕರ್ಣನನ್ನು ಮಗ ಅಂತ ಒಪ್ಪಿಕೊಂಡು, ಪ್ರೀತಿಯಿಂದ ಕಾಣುತ್ತಿದ್ದಾನೆ. ಈಗ ನಿಧಿ, ಕರ್ಣನ ಲವ್‌ಸ್ಟೋರಿಗೆ ರಮೇಶ್‌ ಎಂಟ್ರಿಯಾಗಿದೆ.

25
ಕರ್ಣನ ತಂದೆ ಬದಲಾಗಿದ್ದು ನಿಜವೇ?

ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿರುವ ವಿಷಯ ಕರ್ಣನಿಗೂ, ಅವನ ಅತ್ತೆ ನಯನತಾರಾಗೂ ಗೊತ್ತಿದೆ. ಅವರಿಬ್ಬರು ಆರಂಭದಲ್ಲಿ ಕರ್ಣನನ್ನು ತುಳಿಯೀ ಪ್ರಯತ್ನ ಮಾಡಿದ್ದರು. ಈಗ ರಮೇಶ್‌ ಬದಲಾಗಿದ್ದಾನೆ, ಇದು ನಿಜವೋ? ನಾಟಕವೋ ಎಂದು ಮುಂದಿನ ದಿನಗಳಲ್ಲಿ ಬಯಲಾಗಬೇಕಿದೆ.

35
ರಮೇಶ್‌ ಬಳಿ ಪ್ರೀತಿ ಹಂಚಿಕೊಂಡ ಕರ್ಣ

ಮನೆಗೆ ಬಂದ ಕರ್ಣನ ಮುಖದಲ್ಲಿ ಬೇಸರ ಇರೋದು ರಮೇಶ್‌ಗೆ ಗೊತ್ತಾಗಿದೆ. ನೋವು ನುಂಗಿ ನಗುತ್ತಿದ್ದ ಕರ್ಣನ ಮುಖದಲ್ಲಿ ಬರೀ ಬೇಸರ ಕಾಣ್ತಿದೆ ಎಂದು ರಮೇಶ್‌ ಹೇಳಿದ್ದಾನೆ. ಆಗ ಕರ್ಣ, “ನನಗೆ ಗೊತ್ತಿಲ್ಲದಂತೆ ನಿಧಿ ಮೇಲೆ ಲವ್‌ ಆಗಿದೆ. ನಿಧಿ ವಿಷಯದಲ್ಲಿ ನಾನು ನಿಮಗೆ ಮಾತು ಕೊಟ್ಟಿದ್ದೆ, ಆದರೆ ಅದನ್ನು ನಾನೇ ಮುರಿಯುತ್ತಿದ್ದೇನೆ ಅಂತ ಅನಿಸ್ತಿದೆ” ಎಂದು ಹೇಳಿದ್ದಾನೆ. ಆಗ ರಮೇಶ್‌, “ಗೊತ್ತಿಲ್ಲದೆ ಹುಟ್ಟಿಕೊಳ್ಳೋದು ಪ್ರೀತಿ. ನೀವಿಬ್ಬರು ಒಂದಾಗ್ತೀರಾ, ಒಂದಾಗಬೇಕು. ನಾನು ನಿಮಗೆ ಮಾತು ಕೊಡ್ತೀನಿ” ಎಂದು ಹೇಳಿದ್ದಾನೆ.

45
ನಿಧಿಗೆ ಸತ್ಯ ಗೊತ್ತಾಯ್ತು

ಈಗ ಅವನು ಮೆಡಿಕಲ್‌ ಕಾಲೇಜಿಗೆ ಬಂದು, ನಿಧಿಯನ್ನು ಭೇಟಿ ಮಾಡಿದ್ದಾನೆ. “ನನ್ನಿಂದ ನಿನ್ನ ಮನಸ್ಸಿಗೆ ಬೇಸರವಾಗಿದೆ ಅಂತ ಗೊತ್ತಿದೆ. ನನ್ನನ್ನು ದಯವಿಟ್ಟು ಕ್ಷಮಿಸಿಬಿಡು” ಅಂತ ನಿಧಿ ಬಳಿ ರಮೇಶ್‌ ಹೇಳಿದ್ದಾನೆ. ಆಗ ನಿಧಿ, “ನಿಮ್ಮ ಮೇಲೆ ನನಗೆ ಯಾವುದೇ ಬೇಸರವಿಲ್ಲ” ಅಂತ ಹೇಳಿದ್ದಾಳೆ. ಆಗ ರಮೇಶ್‌, “ಎಷ್ಟೇ ಅಂದರೂ ನೀನು ಕರ್ಣ ಇಷ್ಟಪಟ್ಟ ಹುಡುಗಿ ಅಲ್ವಾ” ಎಂದು ಹೇಳಿದ್ದಾನೆ. ಆಗ ನಿಧಿಗೆ ಕರ್ಣನಿಗೆ ನನ್ನ ಕಂಡರೆ ಇಷ್ಟ ಎನ್ನೋದು ಗೊತ್ತಾಗಿದೆ. ಕರ್ಣ ತನ್ನನ್ನು ಇಷ್ಟಪಡ್ತಿದ್ದಾನೆ ಎನ್ನೋ ವಿಷಯ ತಿಳಿದು ಕುಣಿದು ಕುಪ್ಪಳಿಸಿದ್ದಾನೆ.

55
ಕರ್ಣನಿಗೆ ವಾರ್ನ್‌ ಮಾಡಿದ ನಿತ್ಯಾ

ನಿಧಿಯಿಂದ, ನಮ್ಮಿಂದ ದೂರ ಇರಿ ಅಂತ ನಿತ್ಯಾ ಕರ್ಣನಿಗೆ ವಾರ್ನಿಂಗ್‌ ಮಾಡಿದ್ದಾಳೆ. ಕಾಡಿನಲ್ಲಿ ಕರ್ಣ, ನಿಧಿ ಅಮಲು ಬರುವಂತೆ ನಡೆದುಕೊಂಡಿದ್ದು, ಯಾರೋ ಅಟ್ಯಾಕ್‌ ಮಾಡಿದ್ದು ನಿತ್ಯಾಗೆ ಗೊತ್ತಾಗಿದೆ. ಆದರೆ ಅಮಲು ಬರುವ ಹಣ್ಣು ತಿಂದು, ಏನು ಮಾತಾಡಿದ್ದೇವೆ, ಏನು ಎನ್ನೋದು ಗೊತ್ತಾಗಿಲ್ಲ. ಒಟ್ಟಿನಲ್ಲಿ ಈ ಗೊಂದಲ ಮುಂದೆ ಏನೇನು ಮಾಡುವುದೋ ಏನೋ! 

Read more Photos on
click me!

Recommended Stories