Karna Serial Today Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಖುಷಿ ಹಾಳು ಮಾಡಲು ರಮೇಶ್ ಏನು ಬೇಕೋ ಅದನ್ನೆಲ್ಲ ಮಾಡುತ್ತಿದ್ದಾನೆ. ತೇಜಸ್ ತಂದೆ-ತಾಯಿ ಜೊತೆ ಸೇರಿ ನಾಟಕ ಮಾಡಿ, ಆಮೇಲೆ ಅವರನ್ನು ಕೂಡ ಕಿಡ್ನ್ಯಾಪ್ ಮಾಡಿಸಿದ್ದನು, ಈಗ ಕರ್ಣ-ನಿತ್ಯಾ ಮದುವೆ ನಾಟಕ ಮಾಡಿರೋದು ಇವರಿಗೆ ಗೊತ್ತಿಲ್ಲ.
ಕರ್ಣ ಹಾಗೂ ನಿಧಿ ಪ್ರೀತಿ ಮಾಡುತ್ತಿದ್ದು, ಮದುವೆ ಆಗುವ ಕನಸು ಕಂಡಿದ್ದರು. ಅತ್ತ ನಿಧಿ ಅಕ್ಕ ನಿತ್ಯಾ, ತೇಜಸ್ ಜೊತೆ ಮದುವೆ ಆಗಲು ರೆಡಿಯಾಗಿದ್ದಳು. ಕರ್ಣನ ತಂದೆ ಎನಿಸಿಕೊಂಡವನು ತೇಜಸ್‌ನನ್ನು ಕಿಡ್ನ್ಯಾಪ್ ಮಾಡಿಸಿ, ಮದುವೆ ತಡೆದನು. ನಿತ್ಯಾ ಮದುವೆ ಆಗಿಲ್ಲ ಅಂದ್ರೆ ಅವಳ ಅಜ್ಜಿ ಬದುಕೋದಿಲ್ಲ ಅಂತ ಕರ್ಣನೇ ನಿತ್ಯಾಳನ್ನು ಮದುವೆ ಆಗುವ ನಾಟಕ ಮಾಡಿದ್ದನು.
26
ತೇಜಸ್‌ಗೋಸ್ಕರ ಹುಡುಕಾಟ
ಕರ್ಣ-ನಿತ್ಯಾ ಮದುವೆ ನಾಟಕ ಮಾತ್ರ ಕರ್ಣನ ತಾಯಿ ಮಾಲತಿಗೆ ಮಾತ್ರ ಗೊತ್ತಿದೆ. ಕರ್ಣ ತನ್ನಿಂದ ದೂರ ಆದ ಅಂತ ನಿಧಿ ಕೂಡ ಅಳುತ್ತಿದ್ದಾಳೆ. ಇನ್ನೊಂದು ಕಡೆ ತೇಜಸ್ ಎಲ್ಲಿ ಹೋದ? ಏನಾದ ಅಂತ ನಿತ್ಯಾ ಕೂಡ ಬೇಸರದಲ್ಲಿದ್ದಳು. ತೇಜಸ್ ಚಿಕ್ಕಮಗಳೂರಿನಲ್ಲಿದ್ದಾನೆ ಅಂತ ರಮೇಶ್ ಫೋನ್‌ನಲ್ಲಿ ಮಾತನಾಡಿರೋದು ಮಾಲತಿ ಕಿವಿಗೆ ಬಿದ್ದಿತ್ತು. ಅದನ್ನು ಅವಳು ಕರ್ಣನಿಗೆ ಹೇಳಿದ್ದಳು. ಈಗ ಹನಿಮೂನ್ ನೆಪವೊಡ್ಡಿ ಕರ್ಣ, ನಿತ್ಯಾ ಇಬ್ಬರೂ ತೇಜಸ್‌ನನ್ನು ಹುಡುಕಲು ಹೊರಟಿದ್ದಾರೆ.
36
ದುಷ್ಟ ರಮೇಶ್‌ನಿಂದಲೇ ಎಲ್ಲ ಹಾಳಾಯ್ತು
ಕರ್ಣ, ನಿತ್ಯಾ ಚೆನ್ನಾಗಿದ್ದಾರೆ, ಹನಿಮೂನ್‌ಗೆ ರೆಡಿಯಾದರು ಅಂತ ರಮೇಶ್ ಹಾಗೂ ಅವನ ತಂಗಿ ನಯನತಾರಾ ಸಿಟ್ಟಿನಲ್ಲಿದ್ದಾರೆ. ತೇಜಸ್ ಮಾತ್ರ ಕರ್ಣ-ನಿಧಿಗೆ ಸಿಗಬಾರದು ಎಂದು ಅವರು ಪ್ಲ್ಯಾನ್ ಮಾಡುತ್ತಿದ್ದಾರೆ. ದುಷ್ಟ ರಮೇಶ್ ಮಾತ್ರ ಯಾವ ಕೆಲಸ ಮಾಡೋದಕ್ಕೂ ಕೂಡ ರೆಡಿ ಇದ್ದಾನೆ.
ಈಗ ತೇಜಸ್ ಬದುಕಬಾರದು ಎಂದು ಅವನು ಫೋನ್‌ನಲ್ಲಿ ಹೇಳಿದ್ದಾನೆ. ಈ ವಿಷಯವನ್ನು ಮಾಲತಿ ಕರ್ಣನಿಗೆ ಹೇಳಬೇಕು ಎನ್ನುವಷ್ಟರಲ್ಲಿ ರಮೇಶ್ ತಡೆದಿದ್ದಾನೆ. ಮಾಲತಿ ಕತ್ತನ್ನು ರಮೇಶ್ ಹಿಸುಕಿ ಸಾಯಿಸಬೇಕು ಎನ್ನುವಷ್ಟರಲ್ಲಿ ಅಲ್ಲಿಗೆ ನಿಧಿ ಆಗಮನವಾಗಿದೆ. ಆದರೆ ತೇಜಸ್ ಕಥೆ ಏನು?
56
ತೇಜಸ್ ಸತ್ತೋದ್ರೆ ಏನಾಗುವುದು?
ತೇಜಸ್ ಸತ್ತರೆ ಮಾತ್ರ ಕರ್ಣ, ನಿಧಿ, ನಿತ್ಯಾ ಬದುಕು ನಿಜಕ್ಕೂ ದುರಂತ ಆಗುವುದು. ನಿತ್ಯಾ ಹೊಟ್ಟೆಯಲ್ಲಿರುವ ಮಗು ಅನಾಥ ಆಗಬಾರದು ಎನ್ನೋದು ಕರ್ಣನ ಉದ್ದೇಶ. ಹೀಗಾಗಿ ಅವನು ನಿಧಿಯಿಂದ ದೂರ ಆಗಿ, ನಿತ್ಯಾಗೆ ಗಂಡನಾಗಿ, ನಿತ್ಯಾ ಮಗುವಿಗೆ ತಂದೆಯಾಗಿ ಇರುತ್ತಾನಾ ಎಂಬ ಪ್ರಶ್ನೆ ಮೂಡಿದೆ.
66
ಮುಂದೆ ಏನಾಗಬಹುದು?
ತೇಜಸ್ ಸದ್ಯಕ್ಕೆ ಸಾಯೋದು ಡೌಟ್. ಅವನು ಮತ್ತೆ ನಿತ್ಯಾ ಮುಂದೆ ಬಂದು, ನನ್ನ ಕಿಡ್ನ್ಯಾಪ್‌ಗೆ ಕರ್ಣನೇ ಕಾರಣ ಎಂದು ಹೇಳಬಹುದು. ಒಟ್ಟಿನಲ್ಲಿ ಇನ್ನೊಂದಿಷ್ಟು ಟ್ವಿಸ್ಟ್, ಡ್ರಾಮಾ ಕೂಡ ನಡೆಯಬಹುದು. ಆದರೆ ನಿಧಿ, ನಿತ್ಯಾ, ಕರ್ಣನ ಸ್ಥಿತಿ ಯಾರಿಗೂ ಬರಬಾರದಪ್ಪಾ..