Karna Serial: ಅರೆಸ್ಟ್‌ ಆದ ಕರ್ಣನನ್ನು ಕಾಪಾಡಲು ಬಂದ್ರು ನಾಲ್ವರು ಹೀರೋಯಿನ! ನಿಧಿ, ನಿತ್ಯಾ ಕಥೆ ಏನು?

Published : Feb 20, 2026, 10:51 PM IST

ಕರ್ಣ ಧಾರಾವಾಹಿಯಲ್ಲಿ ರಮೇಶ್‌ ಮಾಡಿದ ಕುತಂತ್ರದಿಂದ ಮೂವರು ರೋಗಿಗಳು ನಿಧನರಾಗಿದ್ದರು. Expire Medicine ತಿಂದು, ರೋಗಿಗಳು ಸತ್ತಿದ್ದಾರೆ. ಇದಕ್ಕೆಲ್ಲ ಕಾರಣ ಏನು? ಏನಾಯ್ತು ಎಂದು ಕರ್ಣ ಚೆಕ್‌ ಮಾಡಲು ನೋಡಿದ್ದಾನೆ. ಆದರೂ ಕೂಡ ಸಂಜಯ್‌, ನಯನತಾರಾ, ರಮೇಶ್‌ ಅವಕಾಶ ಕೊಟ್ಟಿಲ್ಲ.

PREV
15
ಆಸ್ಪತ್ರೆ ಮುಂದೆ ತಳ್ಳಾಟ, ನೂಕಾಟ

ಕರ್ಣ ಎಷ್ಟೇ ಹೇಳಿದರೂ ಕೂಡ, ಯಾರೂ ಅವನ ಮಾತು ಕೇಳುತ್ತಿಲ್ಲ. ರಮೇಶ್‌ ಕೂಡ ದುಡ್ಡು ಕೊಟ್ಟು ಒಂದಿಷ್ಟು ಜನರನ್ನು ಕರೆಸಿದ್ದಾನೆ. ಇದರಿಂದ ಇಡೀ ಆಸ್ಪತ್ರೆ ಮುಂದೆ ದೊಡ್ಡ ತಳ್ಳಾಟ, ನೂಕಾಟ ನಡೆದಿದೆ.

25
ಕುತಂತ್ರಿಗಳಿಗೆ ಖುಷಿ

ಇನ್ನು ಕರ್ಣ ಈ ರೀತಿ ಮಾಡಿರೋದಿಕ್ಕೆ ಸಾಧ್ಯವೇ ಇಲ್ಲ ಎಂದು ನಿತ್ಯಾ, ನಿಧಿ ತಲೆಬಿಸಿಮಾಡಿಕೊಂಡಿದ್ದಾರೆ. ಕುತಂತ್ರಿಗಳು ಮಾತ್ರ ಖುಷಿಯಿಂದ ಇದ್ದಾರೆ. ಇನ್ನು ಕರ್ಣನನ್ನು ಅರೆಸ್ಟ್‌ ಕೂಡ ಮಾಡಿದ್ದಾರೆ. ಮುಂದೆ ಏನಾಗುವುದು ಎಂಬ ಕುತೂಹಲ ಇತ್ತು. ಈಗ ಹೊಸ ಪ್ರೋಮೋ ರಿಲೀಸ್‌ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ.

35
ಆಸ್ಪತ್ರೆ ಸೇರಿದ ಅಜ್ಜಿ

ನಿತ್ಯಾ ಹಾಗೂ ನಿಧಿ ಸೇರಿಕೊಂಡು ಕರ್ಣನನ್ನು ನಿರಪರಾಧಿ ಎಂದು ಸಾಬೀತುಪಡಿಸಲು ಪಣ ತೊಟ್ಟಿದ್ದಾರೆ. ಕರ್ಣನಿಗೆ ಹೀಗಾಯ್ತು ಎಂದು ಅಜ್ಜಿ ಆಸ್ಪತ್ರೆ ಸೇರಿದ್ದಾಳೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಇವೆ.

45
ನಾಲ್ವರು ಹೀರೋಯಿನ್ಸ್‌ ಬಂದ್ರು

ಈಗ ಅಮೃತಧಾರೆ ಧಾರಾವಾಹಿ ಮಲ್ಲಿ, ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಶ್ರಾವಣಿ, ಅಣ್ಣಯ್ಯ ಧಾರಾವಾಹಿ ರಾಣಿ, ಬ್ರಹ್ಮಗಂಟು ಧಾರಾವಾಹಿ ದೀಪಾ ಕೂಡ ಪೊಲೀಸ್‌ ಠಾಣೆಗೆ ಬಂದಿದ್ದಾರೆ. ಅಲ್ಲಿ ಎಲ್ಲರೂ ಸೇರಿಕೊಂಡು ಹೋರಾಟ ಮಾಡಲು ಮುಂದಾಗಿದ್ದಾರೆ.

55
ಮುಂದೆ ಏನಾಗುವುದು?

ಈ ಮಹಿಳಾ ಮಣಿಗಳು ಹೋರಾಟ ಮಾಡಿ, ಕರ್ಣನನ್ನು ಬಿಡಿಸಲು ರೆಡಿಯಾಗಿದ್ದಾರೆ. ಕರ್ಣ ಯಾವುದೇ ತಪ್ಪು ಮಾಡಿಲ್ಲ. ಅವನು ಬಚಾವ್‌ ಆಗ್ತಾನೆ ಎನ್ನಲಾಗಿದೆ. ವೀಕ್ಷಕರು ಕೂಡ ಕರ್ಣನಿಗೆ ಏನೂ ಆಗೋದಿಲ್ಲ ಎಂದು ನಂಬಿದ್ದಾರೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories