ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಕ್ಕೆ ಸೇರ್ಪಡೆ

Published : Feb 20, 2026, 05:54 PM IST

ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬರಲ್ಲ, ಆಗಲ್ಲ ಎನ್ನುತ್ತಿದ್ದ ಬಿಗ್ ಬಾಸ್ ಕಿರೀಟ ಗೆದ್ದ ಸ್ಪರ್ಧಿ ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷ ಸೇರಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ. 

PREV
16
ರಾಜಕೀಯ ಪ್ರವೇಶಿಸಿದ ಬಿಗ್ ಬಾಸ್ ವಿನ್ನರ್‌

ಬಿಗ್ ಬಾಸ್ ಮನೆಯೊಳಗೆ ಜನಪ್ರಿಯಗಾರುವ ಸ್ಪರ್ಧಿಗಳು, ಟ್ರೋಫಿ ಗೆದ್ದ ಸ್ಪರ್ಧಿಗಳಿಗೆ ರಾಜಕೀಯ ಎಂಟ್ರಿ ಯಾವಾಗ ಅನ್ನೋ ಪ್ರಶ್ನೆ ಇದ್ದೇ ಇರುತ್ತೆ. ಇದು ಇತ್ತೀಚೆಗೆ ಬಿಗ್ ಬಾಸ್ ಟ್ರೋಫಿ ಗೆದ್ದ ಗಿಲ್ಲಿ ನಟನಿಗೂ ಕೇಳಲಾಗಿದೆ. ಆದರೆ ಬಹುತೇಕ ಬಿಗ್ ಬಾಸ್ ಸ್ಪರ್ಧಿಗಳು ರಾಜಕೀಯದಿಂದ ದೂರ ಉಳಿಯುತ್ತಾರೆ. ಹೀಗೆ ಬಿಗ್ ಬಾಸ್ ಸ್ಪರ್ಧಿ ರಾಜಕೀಯದಿಂದ ದೂರ, ಆಗಿಬರಲ್ಲ ಎನ್ನುತ್ತಲೇ ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷ ಸೇರಿಕೊಂಡಿದ್ದಾರೆ.

26
ಪಕ್ಷ ಸೇರಿದ ಬೆನ್ನಲ್ಲೇ ಸುದ್ದಿಗೋಷ್ಠಿ

ಹೌದು, ಬಿಗ್ ಬಾಸ್ ವಿನ್ನರ್ , ನಟ ಹಾಗೂ ನಿರ್ದೇಶಕ ಅಖಿಲ್ ಮಾರಾರ್ ಇದೀಗ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ. ಬಿಗ್ ಬಾಸ್ ಮಲೆಯಾಳಂ 5ನೇ ಆವೃತ್ತಿ ಗೆದ್ದ ಅಖಿಲ್ ಮಾರಾರ್, ಎನ್‌ಡಿಎ ಮಿತ್ರಪಕ್ಷವಾಗಿರುವ ಕೇರಳದ ಟ್ವೆಂಟಿ20 ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಟ್ವೆಂಟಿ20 ಪಕ್ಷದ ಚೀಫ್ ಕೋಆರ್ಡಿನೇಟರ್ ಸಾಬು ಎಂ. ಜೇಕಬ್ ಜೊತೆ ಸುದ್ದಿಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದಾರೆ.

36
ವಿಧಾನಸಭೆ ಚುನಾವಣೆಗೆ ಸ್ಪರ್ಧೆ

ಟ್ವೆಂಟಿ20 ಪಕ್ಷಕ್ಕೆ ಅನೇಕ ಪ್ರತಿಭಾವಂತರು ಸೇರುತ್ತಿದ್ದಾರೆ ಎಂದು ಸಾಬು ಹೇಳಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಎನ್‌ಡಿಎ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದರು. ಇತ್ತ ಅಖಿಲ್ ಮಾರಾರ್ ನಿರ್ಧಾರ

46
ನಿರ್ಧಾರ ಸಮರ್ಥಿಸಿದ ಬಿಗ್ ಬಾಸ್ ವಿನ್ನರ್

ಬಿಗ್ ಬಾಸ್ ವಿನ್ನರ್ ಅಖಿಲ್ ಮಾರಾರ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ನಾನೊಬ್ಬ ಸ್ವತಂತ್ರ ಚಿಂತನೆಯುಳ್ಳ ವ್ಯಕ್ತಿ. ಕೇರಳದಲ್ಲಿ ಆಡಳಿತ ಬದಲಾಗಬೇಕು ಎಂಬುದು ನನ್ನ ನಿಲುವಾಗಿತ್ತು. ಇದೇ ಕಾರಣಕ್ಕೆ ನಾನು ಹಲವು ಬಾರಿ ಯುಡಿಎಫ್ ಪರವಾದ ನಿಲುವು ತಳೆದಿದ್ದೆ ಎಂದಿದ್ದಾರೆ. ದೂರದೃಷ್ಟಿ ಇರುವ ನಾಯಕರು ಮುಂದೆ ಬರಬೇಕು. ಟ್ವೆಂಟಿ20 ಅಂತಹ ನಿಲುವು ಹೊಂದಿರುವ ಪಕ್ಷ. ನಾನು ಕಾಂಗ್ರೆಸ್‌ನೊಳಗೆ ಇರಬೇಕೋ ಅಥವಾ ಹೊರಗೆ ಇರಬೇಕೋ ಎಂದು ಅವರೇ (ಕಾಂಗ್ರೆಸ್ ನಾಯಕರು) ಯೋಚಿಸಬೇಕಿತ್ತು. ಆದರೆ, ಹಾಗಾಗಲಿಲ್ಲ. ನಾನು ವಿ.ಡಿ. ಸತೀಶನ್ ಅವರನ್ನು ತೀವ್ರವಾಗಿ ಟೀಕಿಸಿದ್ದೇನೆ. ಆದರೂ, ನನಗೆ ಕಾಂಗ್ರೆಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯವಿದೆ. ನಾನು ಯುಡಿಎಫ್ ಜೊತೆ ಅಭ್ಯರ್ಥಿಯಾಗುವ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ" ಎಂದು ಅವರು ತಿಳಿಸಿದರು. 'ಕೇರಳ ಸ್ಟೋರಿ-2' ಟ್ರೈಲರ್ ವಿವಾದದ ಬಗ್ಗೆ ಎನ್‌ಡಿಎ ನಾಯಕತ್ವವೇ ಪ್ರತಿಕ್ರಿಯೆ ನೀಡಬೇಕು ಎಂದೂ ಅಖಿಲ್ ಮಾರಾರ್ ಇದೇ ವೇಳೆ ಹೇಳಿದರು.

56
ಯಾವ ಕ್ಷೇತ್ರದಿಂದ ಬಿಗ್ ಬಾಸ್ ವಿನ್ನರ್ ಕಣಕ್ಕೆ

ಅಖಿಲ್ ಮಾರಾರ್ ಅವರು ಕೊಲ್ಲಂ ಜಿಲ್ಲೆಯ ಒಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಅವರು ಕೊಟ್ಟಾರಕ್ಕರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಟ್ವೆಂಟಿ20 ನಾಯಕರೊಂದಿಗೆ ಚರ್ಚೆ ನಡೆಸಿರುವುದಾಗಿ ಅಖಿಲ್ ಖಚಿತಪಡಿಸಿದ್ದರು.

66
ಕಾಂಗ್ರೆಸ್ಸಿಗ ಎಂದು ಗುರುತಿಸಿದ್ದ ಬಿಗ್ ಬಾಸ್ ವಿನ್ನರ್

ಅಖಿಲ್ ಮಾರಾರ್ ಅವರನ್ನು ಈ ಹಿಂದೆ ಕಾಂಗ್ರೆಸ್ ಬೆಂಬಲಿಗ ಎಂದೇ ಗುರುತಿಸಲಾಗುತ್ತಿತ್ತು. ಅವರು ಯೂತ್ ಕಾಂಗ್ರೆಸ್‌ನಲ್ಲಿ ಸಕ್ರಿಯರಾಗಿದ್ದ ಬಗ್ಗೆಯೂ ಈ ಹಿಂದೆ ವರದಿಗಳಾಗಿದ್ದವು. ಸಮೀಕ್ಷೆಗಳ ಪ್ರಕಾರ, ಕೊಲ್ಲಂನಲ್ಲಿ ಅಖಿಲ್ ಮಾರಾರ್ ಅವರಿಗಿರುವ ಪ್ರಭಾವವನ್ನು ಬಳಸಿಕೊಳ್ಳಲು ಬಿಜೆಪಿ ಕೂಡ ಅವರನ್ನು ಸಂಪರ್ಕಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ವಿ.ಡಿ. ಸತೀಶನ್ ಅವರಂತಹ ನಾಯಕರನ್ನು ಟೀಕಿಸಿದ ಬೆನ್ನಲ್ಲೇ ಅಖಿಲ್ ಇದೀಗ ಟ್ವೆಂಟಿ20 ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್ಸಿಗ ಎಂದು ಗುರುತಿಸಿದ್ದ ಬಿಗ್ ಬಾಸ್ ವಿನ್ನರ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories