Bigg Boss ಎನ್ನುವುದು ಒಂದು ರಿಯಾಲಿಟಿ ಶೋ. ಈ ಶೋ ಗೆಲ್ಲಲು ಸ್ಪರ್ಧಿಗಳು ಮನೆಯೊಳಗಡೆ ಕೂತು ಆಡೋದು ಒಂದುಕಡೆಯಾದರೆ, ಹೊರಗಡೆ ಅವರ ಕುಟುಂಬ ಅಥವಾ ಪಿಆರ್‌ಗಳು ಮಾಡೋ ತಂತ್ರ ಬೇರೆಯದೇ ಇರುತ್ತದೆ. ಈಗ ಗಿಲ್ಲಿ ನಟನ ಪಿಆರ್ ಟೀಂ ಬಗ್ಗೆ ರಜತ್ ಅವರು ಎಷಿಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ.
“ಗಿಲ್ಲಿ ನಟ ಹೆಂಗೆ ಅಂದ್ರೆ ಮನಸಲ್ಲೇನು ಇಟ್ಕೊಳಲ್ಲ. ಏನು ಅನಿಸತ್ತೋ ಅದನ್ನೇ ಮಾತಾಡ್ತಾನೆ. ಅದು ಬೇರೆಯವರಿಗೆ ಡ್ರಾಮಾ ಅಂತ, ಮನೇಲಿ ಇರೋರಿಗೆ ಡ್ರಾಮಾ ಅಂತ ಕಾಣಿಸಬಹುದು, ಮತ್ತೊಂದು ಮಗದೊಂದು ಮಾಡಬಹುದು. ದಯವಿಟ್ಟು ಅವನ PRO ಟೀಮ್ ಇರ್ತಾರೆ ಅಲ್ವಾ? ಅದು ಯಾರಿಗೆ ಕೊಟ್ಟವನೋ ಗೊತ್ತಿಲ್ಲ. ಅವರು ಸ್ವಲ್ಪ ಹುಷಾರಾಗಿರಬೇಕು ಅಷ್ಟೇ. ಗಿಲ್ಲಿಗೆ ತುಂಬಾ ಒಳ್ಳೆ ಹೆಸರಿದೆ, ತುಂಬಾ ಚೆನ್ನಾಗಿ ಆಡ್ತಾ ಇದ್ದಾನೆ” ಎಂದಿದ್ದಾರೆ.
25
ಗಿಲ್ಲಿಗೂ ತಂದೆ-ತಾಯಿ ಇದ್ದಾರೆ
“ಗಿಲ್ಲಿ ನಟನ ಆಟವನ್ನು ಆ ಪಿಆರ್ ಆಡಕ್ಕೆ ಬಿಡ್ಲಿ. ಗಿಲ್ಲಿಗೂ ಒಂದು ತಾಯಿ, ತಂದೆ ಇರ್ತಾರೆ, ಒಂದು ಫ್ಯಾಮಿಲಿ ಇರುತ್ತದೆ. ಅದೇ ತರ ಎಲ್ಲರಿಗೂ ಇರ್ತಾರೆ, ಅದರ ಬಗ್ಗೆ ಮಾತಾಡಬಾರದು, ಅವನು ಪಿಆರ್ ನನ್ನ ಮುಂದೆ ಬಂದು ಮಾತಾಡಿದ ಅಂದ್ರೆ ನನಗೆ ಗೊತ್ತು ಹೆಂಗೆ ಮಾತಾಡಬೇಕು ಅಂತ” ಎಂದು ರಜತ್ ಹೇಳಿದ್ದಾರೆ.
35
ನಮಗೂ ಬಾಯಿ ಇದೆ
“ನೀನು ಪಿಆರ್ ಕೆಲಸ ಕೊಟ್ಟಿದ ತಕ್ಷಣ ನೀನು ಏನು ಏನೋ ಮಾತಾಡಬಹುದು ಅಂದ್ರೆ ನಮಗೂ ಮಾತುಗಳು ಇಲ್ವಾ? ನಮಗೂ ಬಾಯಿ ಇದೆ, ಮಾತಾಡೋಕೆ ಬರುತ್ತದೆ. ಆದರೆ ಬೇರೆಯವರಿಗೆ ನೆಗೆಟಿವ್ ಕಾಮೆಂಟ್ಸ್ ಹಾಕಿಸೋದು ಸರಿ ಅಲ್ಲ” ಎಂದು ರಜತ್ ಹೇಳಿದ್ದಾರೆ.
ರಜತ್ ಇನ್‌ಸ್ಟಾಗ್ರಾಮ್ ಕಾಮೆಂಟ್ಸ್ ಬಾಕ್ಸ್ ಆಫ್ ಆಯ್ತು
ಗಿಲ್ಲಿ ಫ್ಯಾನ್ಸ್‌ಗೆ ಸಿಟ್ಟು ಬರೋತರ ನೀವು ಗಿಲ್ಲಿಯನ್ನು ಒಳಗಡೆ ನಡೆಸಿಕೊಂಡ್ರಿ. ಹೀಗಾಗಿ ನಿಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಕಾಮೆಂಟ್ ಸೆಕ್ಷನ್ ಆಫ್ ಆಗಿತ್ತು ಎಂಬ ಪ್ರಶ್ನೆಯನ್ನು ಕೇಳಿದಾಗ ರಜತ್ ಅವರು, “ನನಗೆ ಪಾಸಿಟಿವ್ ಅಥವಾ ನೆಗೆಟಿವ್ ಏನೇ ಇರಲಿ, ಪ್ರಚಾರದಲ್ಲಿರಬೇಕು. ನಾನು ಕಾಮೆಂಟ್ಸ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಪಿಆರ್‌ಗೆ ಏನು ಹೇಳ್ತೀನಿ ಅಂದ್ರೆ ನೀನು ಪಿಆರ್ ಕೆಲಸ ಮಾಡು, ನಿಯತ್ತಾಗಿ ಮಾಡು ತೊಂದರೆ ಇಲ್ಲ. ಆದರೆ ಎಲ್ಲರಿಗೂ ತಾಯಿ ಇರ್ತಾರೆ, ತಂದೆ ಇರ್ತಾರೆ, ಹೆಂಡತಿ ಇರ್ತಾರೆ ಮಕ್ಕಳು ಇರ್ತಾರೆ. ಅದನ್ನು ನೋಡ್ಕೊಂಡು ಮಾಡು” ಎಂದು ಹೇಳಿದ್ದಾರೆ.
55
ಆ ಪಿಆರ್ ನನ್ ಮುಂದೆ ಬಂದು ಮಾತಾಡ್ತಾನಾ?
“ಪಿಆರ್ ಕೆಲಸದ ಜೀವನ ಇದರಿಂದನೇ ಇರೋದು, ತೊಂದರೆ ಇಲ್ಲ ಮಾಡು, ನನ್ನ ಮುಂದೆ ಬಂದು ಮಾತಾಡ್ತಾನಾ? ಅಷ್ಟಿಲ್ಲ ಅಂದಾಗ ಎಷ್ಟು ಮಾತಾಡಬೇಕು, ಅಷ್ಟೇ ಮಾತಾಡಬೇಕು. ಗಿಲ್ಲಿ ಚೆನ್ನಾಗಿ ಆಡ್ತಾನೆ ಅವನ ಹೆಸರು ಕೆಡಿಸೋದು ಬೇಡ. ನಿಜವಾದ ಗಿಲ್ಲಿ ಫ್ಯಾನ್ಸ್ ಒಳ್ಳೆಯವರು. ನಮಗೂ ಬಾಯಿ ಇದೆ, ನಮಗೂ ಇವರಿಗಿಂತ ಮಾತುಗಳು ಚೆನ್ನಾಗಿ ಬರುತ್ತೆ . ಆ ಮಾತುಗಳು ಒಂದು ತೂಕ ಇರಬೇಕು ಅಷ್ಟೇ” ಎಂದು ರಜತ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.