Karna: ಪ್ರೀತಿನೋ- ಜವಾಬ್ದಾರಿನೊ? ತಾತನ ಮಾತಂತೆ ಇಬ್ಬರ ನಡುವೆ ಕರ್ಣ ಮಾಡಿದ ಆಯ್ಕೆ ಏನು? ಮುಂದಿನ ನಡೆ ಏನು?

Published : Nov 15, 2025, 12:48 PM IST

ಪ್ರೀತಿಯಾದ ನಿಧಿ ಮತ್ತು ಜವಾಬ್ದಾರಿಯಾದ ನಿತ್ಯಾ ನಡುವೆ ಕರ್ಣ ಸಿಲುಕಿದ್ದಾನೆ. ತನ್ನ ತಾತನ ಸಲಹೆಯಂತೆ, ನಿತ್ಯಾಳ ಗರ್ಭದ ಸತ್ಯವನ್ನು ನಿಧಿಯ ಬಳಿ ಹೇಳಲು ನಿರ್ಧರಿಸುತ್ತಾನೆ. ಈ ಸತ್ಯ ತಿಳಿದರೆ ನಿಧಿಯ ಮುಂದಿನ ನಿರ್ಧಾರ ಏನಾಗಿರಬಹುದು ಎಂಬುದು ಕಥೆಯ ತಿರುವು.

PREV
16
ಎರಡು ದೋಣಿಯ ಪಯಣ

ಕರ್ಣ (karna) ಸದ್ಯ ನಿಧಿ ಎನ್ನುವ ಪ್ರೀತಿ, ನಿತ್ಯಾ ಎನ್ನುವ ಜವಾಬ್ದಾರಿ ನಡುವೆ ಸಿಲುಕಿ ಒದ್ದಾಡುತ್ತಿದ್ದಾನೆ. ಎರಡು ದೋಣಿಯ ಮೇಲೆ ಕಾಲಿಟ್ಟು ಎರಡನ್ನೂ ಉಳಿಸಿಕೊಳ್ಳಲು ಆಗದೇ ಹೋರಾಟ ನಡೆಸಿದ್ದಾನೆ.

26
ತಾತನ ಮುಂದೆ ನೋವು

ತನ್ನೆಲ್ಲಾ ನೋವನ್ನು ತಾತನ ಫೋಟೋದ ಮುಂದೆ ಹೇಳಿಕೊಂಡು ನೀನೇ ನನಗೆ ದಾರಿ ತೋರಬೇಕು ಎಂದಿದ್ದಾನೆ ಕರ್ಣ. ಏನು ಮಾಡಬೇಕು ಎನ್ನುವುದೇ ತಿಳಿಯುತ್ತಿಲ್ಲ ಎಂದಿದ್ದಾನೆ.

36
ನಿತ್ಯಾ-ನಿಧಿ ನಡುವೆ

ನಿಧಿಯ ಬಳಿ ಹೋದರೆ, ನಿತ್ಯಾ ಹೊಟ್ಟೆಯಲ್ಲಿ ಇರುವ ಮಗು ಅನಾಥವಾಗುತ್ತದೆ, ಹಾಗೆಂದು ನಿತ್ಯಾಳ ಬಳಿ ಹೋದರೆ ನಿಧಿಯ ಪ್ರೀತಿ ಕಳೆದುಕೊಳ್ಳಬೇಕಾಗುತ್ತದೆ, ಏನು ಮಾಡುವುದು ಎಂದೇ ತಿಳಿಯುತ್ತಿಲ್ಲ ಎಂದಿದ್ದಾನೆ.

46
ದಾರಿ ತೋರಿದ ತಾತ

ಆಗ ತಾತ ಆತನಿಗೆ ಕಾಣಿಸಿಕೊಂಡಿದ್ದು, ದಾರಿ ಹೇಳಿದ್ದಾನೆ. ನೀನು ಎರಡು ದೋಣಿಯ ಮೇಲೆ ಕಾಲಿಡುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ. ಇದರಿಂದ ನಿನಗೇ ತೊಂದರೆಯಾಗುತ್ತದೆ ಎಂದಿದ್ದಾನೆ.

56
ತಾತನ ಮಾತು

ನಿನ್ನ ಪ್ರೀತಿ ಬೇಕು ಎಂದರೆ, ಎಲ್ಲವನ್ನೂ ನಿಧಿಯ ಎದುರಿಗೆ ಹೇಳಿಬಿಡು. ಆ ಸತ್ಯ ತಿಳಿದಾಗ ಆಕೆ ಏನು ನಿರ್ಧಾರ ತೆಗೆದುಕೊಳ್ಳುತ್ತಾಳೆಯೋ ನೋಡು. ಎಲ್ಲವನ್ನೂ ಅವಳಿಗೆ ಬಿಟ್ಟುಬಿಡು ಎಂದಿದ್ದಾನೆ.

66
ಮುಂದಿನ ನಡೆ ಏನು?

ತಾತನ ಮಾತಿನಂದ ನಿತ್ಯಾಳ ಸತ್ಯವನ್ನು ನಿಧಿಯ ಬಳಿ ಹೇಳುವ ಮನಸ್ಸು ಮಾಡಿದ್ದಾನೆ ಕರ್ಣ. ನಿಧಿಗೆ ಸತ್ಯ ಹೇಳುತ್ತಾನಾ? ಒಂದು ವೇಳೆ ತನ್ನ ಅಕ್ಕನ ಒಡಲ ರಹಸ್ಯ ನಿಧಿಗೆ ತಿಳಿದರೆ ಆಕೆಯ ಮುಂದಿನ ನಡೆ ಏನು ಎನ್ನುವ ಕುತೂಹಲ ಸದ್ಯದ್ದು.

Read more Photos on
click me!

Recommended Stories