ಅಮೃತಧಾರೆ ಧಾರಾವಾಹಿಯಲ್ಲಿ, ಆಲ್ಬಂ ಮೂಲಕ ಗೌತಮ್ ತನ್ನ ಅಪ್ಪ ಎಂಬ ಸತ್ಯವನ್ನು ಆಕಾಶ್ ಕಂಡುಕೊಂಡಿದ್ದಾನೆ. ತಂದೆ-ಮಗನ ಭಾವನಾತ್ಮಕ ಪುನರ್ಮಿಲನದಿಂದ ಭೂಮಿಕಾ ಸಂತಸಗೊಂಡರೆ, ಗೌತಮ್ ಮತ್ತು ಆಕಾಶ್ ಒಟ್ಟಿಗೆ ಇರುವುದನ್ನು ನೋಡಿದ ಮಿಂಚುಗೆ ನೋವಾಗಿದೆ, ಇದು ಕಥೆಯಲ್ಲಿ ಹೊಸ ಸಂಘರ್ಷವನ್ನು ಸೃಷ್ಟಿಸಿದೆ.
ಅಮೃತಧಾರೆಯ (Amruthadhaare) ಯಲ್ಲಿ ಯಾರೂ ಊಹಿಸದ ರೋಚಕ ತಿರುವು ಪಡೆದುಕೊಂಡಿದೆ. ಭೂಮಿಕಾ ಮತ್ತು ಗೌತಮ್ರನ್ನು ಒಂದು ಮಾಡಿ ಎಂದು ವೀಕ್ಷಕರು ಗೋಗರೆಯುತ್ತಲೇ ಇದ್ದರು. ಆ ಆಸೆ ಈಡೇರುವ ಕಾಲ ಕೂಡಿ ಬಂದಿದೆ.
28
ಅಮೃತ ಘಳಿಗೆ
ಹೌದು. ಕೊನೆಗೂ ಆ ಅಮೃತ ಘಳಿಗೆ ಕೂಡಿ ಬಂದಿದೆ. ಆಕಾಶ್ಗೆ ಗೌತಮ್ನೇ ತನ್ನ ಅಪ್ಪ ಎನ್ನುವ ಸತ್ಯ ಗೊತ್ತಾಗಿದೆ. ಮನೆಯಲ್ಲಿ ಇರುವ ಸೂಟ್ಕೇಸ್ನಲ್ಲಿ ಇದ್ದ ಆಲ್ಬಂ ನೋಡಿದ್ದಾನೆ ಆಕಾಶ್. ಅದರಲ್ಲಿ ಗೌತಮ್ ಮತ್ತು ಭೂಮಿಕಾ ಮದುವೆ ಫೋಟೋ ಕಂಡಿದೆ.
38
ಗೌತಮ್ನೇ ಅಪ್ಪ
ಆಗ ಗೌತಮ್ನೇ ತನ್ನ ಅಪ್ಪ ಎನ್ನುವ ಸತ್ಯ ತಿಳಿದಿದೆ. ಓಡಿ ಹೋಗಿ ಅಪ್ಪಾ ಎನ್ನುತ್ತಾ ಗೌತಮ್ನನ್ನು ಅಪ್ಪಿಕೊಂಡಿದ್ದಾನೆ. ಇದನ್ನು ನೋಡಿ ಗೌತಮ್ಗೆ ಅಚ್ಚರಿಯಾಗಿದ್ರೆ, ಭೂಮಿಕಾ ಖುಷಿಯಲ್ಲಿ ಇದ್ದಾಳೆ.
ತಾನು ಗೌತಮ್ನಿಂದ ದೂರ ಇದ್ದರೆ, ಅವರು ಖುಷಿಯಾಗಿರುತ್ತಾರೆ ಎಂದು ಭೂಮಿಕಾ ಅಂದುಕೊಂಡಿದ್ದು ಸುಳ್ಳಾಗಿತ್ತು. ತಾನಿಲ್ಲದೇ ಗೌತಮ್ ಬದುಕಲ್ಲ ಎನ್ನುವ ಅರಿವಾಗುತ್ತಿದ್ದಂತೆಯೇ ಪಶ್ಚಾತ್ತಾಪ ಪಟ್ಟಿದ್ದಳು. ಈ ಘಟನೆ ಅವಳಿಗೆ ಖುಷಿ ಕೊಟ್ಟಿದೆ.
58
ಮಿಂಚು ಕೈಯಲ್ಲೂ ಆಲ್ಬಂ
ಆದರೆ ಅದೇ ಇನ್ನೊಂದೆಡೆ, ಮಿಂಚುಗೂ ಮನೆಯಲ್ಲಿ ಆಲ್ಬಂ ಸಿಕ್ಕಿದೆ. ಅದರಲ್ಲಿ, ಆಕೆ ಗೌತಮ್ ಮತ್ತು ಆಕಾಶ್ ಒಟ್ಟಿಗೇ ಇರುವುದನ್ನು, ಇಬ್ಬರೂ ಖುಷಿಯಲ್ಲಿ ಆಟ ಆಡುವುದನ್ನೆಲ್ಲಾ ನೋಡಿದ್ದಾಳೆ. ಇದನ್ನು ನೋಡಿ ಆಕೆಗೆ ನೋವಾಗಿದೆ.
68
ಮಿಂಚು ಮನೆ ಬಿಟ್ಟು ಹೋಗುತ್ತಾಳಾ?
ಅಪ್ಪ ಆಕಾಶ್ನನ್ನು ತನಗಿಂತ ಹೆಚ್ಚು ಪ್ರೀತಿ ಮಾಡುತ್ತಿದ್ದಾನೆ ಎಂದು ಅನ್ನಿಸಿರುವ ರೀತಿಯಲ್ಲಿ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಹಾಗಿದ್ದರೆ ಇದೇ ಬೇಸರದಿಂದ ಮಿಂಚು ಮನೆ ಬಿಟ್ಟು ಹೋಗುತ್ತಾಳಾ ಎನ್ನುವ ಸಂದೇಹ ಕೂಡ ಕಾಡುತ್ತಿದೆ.
78
ಹಾಗೆ ಮಾಡ್ಬೇಡಿ ಅಂತಿರೋ ವೀಕ್ಷಕರು
ಇದನ್ನು ನೋಡಿದ ವೀಕ್ಷಕರು ಪ್ಲೀಸ್ ಹಾಗೆ ಮತ್ತೆ ಮಾಡಬೇಡಿ. ಅಪ್ಪ-ಮಗ ಒಂದಾಗಿರುವ ಖುಷಿಯ ನಡುವೆಯೇ, ಮಿಂಚು ಮನೆ ಬಿಟ್ಟು ಹೋಗುವ ಹಾಗೆ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದಾರೆ.
88
ರೋಚಕತೆ
ಒಟ್ಟಿನಲ್ಲಿ ಅಮೃತಧಾರೆ, ಹೊಸ ತಿರುವಿನ ಜೊತೆ ರೋಚಕತೆಯನ್ನು ಉಂಟು ಮಾಡುತ್ತಿದೆ. ಇಬ್ಬರೂ ಒಂದಾಗಿ, ಶಕುಂತಲಾ ಮತ್ತು ಜೈದೇವ್ಗೆ ಬುದ್ಧಿ ಕಲಿಸಲಿ ಎನ್ನುತ್ತಿದ್ದಾರೆ.