ಮಕ್ಕಳ ದಿನಾಚರಣೆಯಂದು ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಅವರ ಮಕ್ಕಳ ವಿಡಿಯೋ ತೋರಿಸಿ ಸರ್ಪ್ರೈಸ್ ನೀಡಲಾಯಿತು. ಆದರೆ, ಜೈಲಿನಲ್ಲಿದ್ದ ಮಾಳು ನಿಪನಾಳ ಅವರಿಗೆ ತಮ್ಮ ಮಕ್ಕಳ ವಿಡಿಯೋ ನೋಡಲು ಸಾಧ್ಯವಾಗದ ಕಾರಣ, ಅವರು ತೀವ್ರವಾಗಿ ನೊಂದು ಕಣ್ಣೀರು ಹಾಕಿದರು.
ನವೆಂಬರ್ 14 ಮಕ್ಕಳ ದಿನಾಚರಣೆಯ ಪ್ರಯುಕ್ತ ಸ್ಪರ್ಧಿಗಳಿಗೆ ಬಿಗ್‌ಬಾಸ್ ಸರ್ಪ್ರೈಸ್ ನೀಡಿದ್ದರು. ಕಳಪೆ-ಉತ್ತಮ ಆಯ್ಕೆ ಪ್ರಕ್ರಿಯೆ ಬಳಿಕ ಮಕ್ಕಳನ್ನು ಬಿಟ್ಟು ಬಿಗ್‌ಬಾಸ್ ಮನೆಗೆ ಬಂದಿರುವ ಪೋಷಕರಿಗೆ ಸಿಹಿ ಸುದ್ದಿ ನೀಡಲಾಗಿತ್ತು. ಆದ್ರೆ ಸಿಹಿ ಸುದ್ದಿ ಮಾತ್ರ ಮಾಳುಗೆ ಮಾತ್ರ ಸಿಗಲಿಲ್ಲ. ಇದರಿಂದ ನೊಂದ ಮಾಳು ಮುಖದ ಮೇಲೆ ಟವೆಲ್ ಹಾಕಿಕೊಂಡು ಕಣ್ಣೀರು ಹಾಕಿದರು.
25
ಮಕ್ಕಳ ವಿಡಿಯೋ
ಮೊದಲಿಗೆ ಮನೆಯ ಕ್ಯಾಪ್ಟನ್ ಆಗಿರುವ ರಘು ಅವರ ಮಗನ ವಿಡಿಯೋ ಪ್ಲೇ ಆಯ್ತು. ತಂದೆಯ ಹುಟ್ಟುಹಬ್ಬಕ್ಕೆ ಮುಂಚಿತವಾಗಿಯೇ ವಿಶ್ ಮಾಡಿ ಚೆನ್ನಾಗಿ ಆಟವಾಡುವಂತೆ ಶುಭ ಹಾರೈಸಲಾಯ್ತು. ನಂತರ ಜಾನ್ವಿ, ಕಾಕ್ರೋಚ್ ಸುಧಿ, ಅಶ್ವಿನಿ ಗೌಡ ಅವರ ಮಕ್ಕಳ ವಿಡಿಯೋ ಸಹ ತೋರಿಸಲಾಯ್ತು.
35
ಕಳಪೆಯಾಗಿರುವ ಮಾಳು ನಿಪನಾಳ
ಈ ಎಲ್ಲಾ ವಿಡಿಯೋಗಳು ಪ್ಲೇ ಆಗುತ್ತಿರುವ ಸಂದರ್ಭದಲ್ಲಿ ಕಳಪೆಯಾಗಿರುವ ಮಾಳು ನಿಪನಾಳ, ಜೈಲಿನಲ್ಲಿದ್ದರು. ಅಲ್ಲಿಂದಲೇ ಎಲ್ಲಾ ಮಕ್ಕಳ ವಿಶ್ ಕೇಳಿಸಿಕೊಳ್ಳುತ್ತ ಭಾವುಕರಾಗಿದ್ದವು. ಇಬ್ಬರು ಮಕ್ಕಳ ತಂದೆಯಾಗಿರುವ ಮಾಳು ಅವರು ತನ್ನ ಮುದ್ದು ಕಂದಮ್ಮಗಳನ್ನು ನೋಡಲು ಆಗಲಿಲ್ಲ. ಮಾಳು ಮಕ್ಕಳ ಮಕ್ಕಳ ವಿಡಿಯೋ ಪ್ಲೇ ಆಗುತ್ತಿದ್ದಂತೆ ರಘು ಜೈಲಿನತ್ತ ಹೋಗುತ್ತಾರೆ. ಲಾಕ್ ತೆಗೆದು ಮಾಳು ಅವರನ್ನು ಕರೆದುಕೊಂಡು ಬರುತ್ತಾರೆ.
ಜೈಲಿನಿಂದ ಮನೆಯೊಳಗೆ ಬರುವಷ್ಟರಲ್ಲಿ ಮಾಳು ಮಕ್ಕಳ ವಿಡಿಯೋ ಮುಗಿದಿರುತ್ತದೆ. ಎಲ್ಲಾ ಸ್ಪರ್ಧಿಗಳು ಎಷ್ಟೇ ರಿಕ್ವೆಸ್ಟ್ ಮಾಡಿದರೂ ಬಿಗ್‌ಬಾಸ್ ಮಕ್ಕಳ ವಿಡಿಯೋವನ್ನು ಮರುಪ್ರಸಾರ ಮಾಡಲ್ಲ. ಸ್ವಲ್ಪ ಸಮಯ ವೇಟ್ ಮಾಡಿದರೂ ಮಕ್ಕಳ ವಿಡಿಯೋ ಪ್ಲೇ ಆಗದಿದ್ದಾಗ ಜೈಲಿನೊಳಗೆ ಹೋಗಿ ಮಾಳು ಕಣ್ಣೀರು ಹಾಕುತ್ತಾರೆ.
ಇನ್ನುಳಿದ ಸ್ಪರ್ಧಿಗಳು ಮಾಳು ಬಳಿ ಹೋಗಿ ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಾರೆ. ಮಕ್ಕಳಿಬ್ಬರು ನೋಡಲು ಒಂದೇ ರೀತಿಯಾಗಿದ್ದರು. ಹಳದಿ ಬಟ್ಟೆ ಧರಿಸಿದ್ದರು. ಒಬ್ಬ ಸೋಫಾದ ಮೇಲೆ ಕುಳಿತಿದ್ದ, ಮತ್ತೊಬ್ಬ ಏನೋ ಮಾತನಾಡಲು ಪ್ರಯತ್ನಿಸುತ್ತಿದ್ದ ಎಂದು ಹೇಳು ಮಾಳು ದುಖಃ ಕಡಿಮೆ ಮಾಡಲು ಪ್ರಯತ್ನಿಸುತ್ತಾರೆ. ಆದ್ರೆ ಬಿಗ್‌ಬಾಸ್ ಹೀಗ್ಯಾಕೆ ಮಾಡಿದ್ರು ಎಂದು ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.