ಶೂಟಿಂಗ್‌ ಸೆಟ್‌ನಲ್ಲಿ Karna Serial ಕರ್ಣ-ನಿಧಿ ಕದ್ದುಮುಚ್ಚಿ ರೊಮಾನ್ಸ್‌: ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದು ಹೀಗೆ ನೋಡಿ

Published : Feb 17, 2026, 07:39 PM IST

ಕರ್ಣ ಸೀರಿಯಲ್‌ನಲ್ಲಿ ಕರ್ಣ ಮತ್ತು ನಿಧಿ ಜೋಡಿಯ ಪ್ರೀತಿಯ ಗುಟ್ಟು ಇನ್ನೂ ರಹಸ್ಯವಾಗಿಯೇ ಇದೆ. ಆದರೆ, ಅಭಿಮಾನಿಗಳು ಮೆಚ್ಚಿರುವ ಇವರಿಬ್ಬರ ರೊಮ್ಯಾಂಟಿಕ್ ದೃಶ್ಯಗಳ ಶೂಟಿಂಗ್ ಹೇಗೆ ನಡೆಯುತ್ತದೆ ಎನ್ನುವ ತೆರೆಮರೆಯ ವಿಡಿಯೋವೊಂದು ವೈರಲ್ ಆಗಿದೆ. 

PREV
16
ಲವ್‌ ಗುಟ್ಟು

ಕರ್ಣ ಸೀರಿಯಲ್‌ (Karna Serial)ನಲ್ಲಿ ಇದುವರೆಗೂ ಕರ್ಣ ಮತ್ತು ನಿಧಿಯ ಲವ್‌ ಗುಟ್ಟು ಬಹಿರಂಗಗೊಂಡಿಲ್ಲ. ಕಳ್ಳತನದಿಂದ ಇಬ್ಬರೂ ಮೀಟ್‌ ಆಗುತ್ತಿದ್ದಾರೆ.

26
ಕೆಮೆಸ್ಟ್ರಿಗೆ ಫಿದಾ

ಆದರೆ, ಈ ಜೋಡಿಯ ಕೆಮೆಸ್ಟ್ರಿಯನ್ನು ಅಭಿಮಾನಿಗಳಂತೂ ಸಕತ್‌ ಮೆಚ್ಚಿಕೊಂಡಿದ್ದಾರೆ. ಸೀರಿಯಲ್‌ ಎಂದರೆ ಹಾಗೇನೇ. ಒಂದು ಜೋಡಿ ಸಕತ್‌ ಇಷ್ಟ ಆಗಿಬಿಟ್ಟಿತು ಎಂದರೆ ನಿಜ ಜೀವನದಲ್ಲಿಯೂ ಅವರು ಒಂದಾಗಲಿ ಎಂದು ಹಾರೈಸುವವರೇ ಹಲವರು. ಅದೇ ರೀತಿ ಕರ್ಣ ಮತ್ತು ನಿಧಿ ಜೋಡಿಯ ಮೇಲೂ ಅಭಿಮಾನಿಗಳಿಗೂ ಫು‌ಲ್‌ ಲವ್‌ ಶುರುವಾಗಿದೆ.

36
ಕದ್ದುಮುಚ್ಚಿ ಪ್ರೀತಿ

ಅದೇ ಇನ್ನೊಂದೆಡೆ, ಸೀರಿಯಲ್‌ನಲ್ಲಿ, ಕರ್ಣ ಮತ್ತು ನಿಧಿ ಕದ್ದುಮುಚ್ಚಿ ಪ್ರೀತಿ ಮಾಡುವುದನ್ನು ನೋಡುವುದು ಎಂದರೆ ಸೀರಿಯಲ್‌ ಪ್ರೇಮಿಗಳಿಗೆ ಎಲ್ಲಿಲ್ಲದ ಪ್ರೀತಿ.

46
ಕರ್ಣ ಮತ್ತು ನಿಧಿ ರೊಮಾನ್ಸ್‌

ಇದೀಗ ಕರ್ಣ ಮತ್ತು ನಿಧಿ ರೊಮಾನ್ಸ್‌ ಶೂಟಿಂಗ್‌ ಹೇಗೆ ನಡೆದಿದೆ ಎನ್ನುವ ವಿಡಿಯೋ ವೈರಲ್‌ ಆಗಿದೆ. ಶೂಟಿಂಗ್‌ ಸೆಟ್‌ನಲ್ಲಿ ಒಂದು ದೃಶ್ಯ ಮಾಡುವಾಗ, ಅದರ ಹಲವಾರು ಟೇಕ್‌ಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದೇ ರೀತಿ ಕರ್ಣ ಮತ್ತು ನಿಧಿಯ ಲವ್‌ಸ್ಟೋರಿಗೂ ಹಲವಾರು ಟೇಕ್‌ಗಳನ್ನು ತೆಗೆದುಕೊಂಡಿದ್ದು ಅದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

56
ಶೂಟಿಂಗ್‌ ಸೆಟ್‌ ವಿಡಿಯೋ

ಹಲವರಿಗೆ ಶೂಟಿಂಗ್‌ ಸೆಟ್‌ನಲ್ಲಿ ಏನು ನಡೆಯುತ್ತದೆ ಎನ್ನುವುದು ತಿಳಿದಿರುವುದಿಲ್ಲ. ಕ್ಯಾಮೆರಾಮನ್‌ಗಳು ಆ ದೃಶ್ಯಗಳನ್ನು ಹೇಗೆ ಸೆರೆ ಹಿಡಿಯುತ್ತಾರೆ, ಅದು ಕ್ಯಾಮೆರಾ ಕಣ್ಣಿನಲ್ಲಿ ಹೇಗೆ ಕಾಣುತ್ತದೆ ಎನ್ನುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.

66
ಕಿರಣ್‌ ರಾಜ್‌- ಭವ್ಯಾ ಗೌಡ

ಅಂದಹಾಗೆ ಕರ್ಣ ಪಾತ್ರದಲ್ಲಿ ನಟ ಕಿರಣ್‌ ರಾಜ್‌ ಹಾಗೂ ನಿಧಿ ಪಾತ್ರದಲ್ಲಿ ಭವ್ಯಾ ಗೌಡ ನಟಿಸುತ್ತಿದ್ದಾರೆ. ಇವರ ಜೋಡಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಇವರಿಬ್ಬರೂ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.

bannihiremathofficial ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ ನೋಡಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories