ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ ದೆವ್ವ ಆಗ್ತಾಳ… Bhagyalakshmi ಧಾರಾವಾಹಿಯಲ್ಲಿ ಹಾರರ್ ಟ್ವಿಸ್ಟ್!

Published : Feb 17, 2026, 05:58 PM IST

Bhagyalakshmi serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಸದ್ಯ ನಡೆಯುತ್ತಿರುವ ಕಥೆ ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ಆತ್ಮ*ಹತ್ಯೆ ಮಾಡಲು ಹೊರಟಿರುವ ಶ್ರೇಷ್ಠ ಇನ್ನು ಮುಂದೆ ದೆವ್ವ ಆಗಿ ಕಾಣಿಸಿಕೊಳ್ಳಲಿದ್ದಾಳೆ ಎನ್ನಲಾಗುತ್ತಿದೆ. ಇದೆಷ್ಟು ನಿಜಾ? ಏನು ಕಥೆ ತಿಳಿಯೋಣ.

PREV
16
ಭಾಗ್ಯಲಕ್ಷ್ಮೀ ಸೀರಿಯಲ್

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳಿಗೆ ಕಷ್ಟಗಳು ತಪ್ಪುವುದೇ ಇಲ್ಲವೇನೋ ಎಂದು ಅನಿಸುವಷ್ಟು, ಪದೇ ಪದೇ ಆಕೆಯ ಜೀವನದಲ್ಲಿ ಕಷ್ಟಗಳು ಬರತೊಡಗಿವೆ. ಎಲ್ಲಾ ಮುಗಿದು ಇನ್ನೇನು ಭಾಗ್ಯ ಮತ್ತು ಆದಿ ಒಂದಾಗಬೇಕು ಎನ್ನುವಾಗಲೇ ಭಾಗ್ಯ ಬಾಳಲ್ಲಿ ತಾಂಡವ್ ರೀ ಎಂಟ್ರಿಯಾಗಿದೆ.

26
ನಿಜವಾಗಲೂ ತಾಂಡವ್ ಬದಲಾದ್ನಾ?

ಭಾಗ್ಯ ಮನಸಲ್ಲಿ ಆದಿ ಮೇಲೆ ಪ್ರೀತಿ ಮೂಡುವ ಹೊತ್ತಿಗೆ, ತಾಂಡವ್ ವಾಪಾಸ್ ಬಂದು, ಭಾಗ್ಯ ಕಾಲಿಗೆ ಬಿದ್ದು ತಾನು ಇಲ್ಲಿವರೆಗೆ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಾನೆ. ಮನೆಗೆ ಬಂದು ಎಲ್ಲರಲ್ಲೂ ಕ್ಷಮಿಸಿ ಎಂದು ಅತ್ತು ಕರೆದಿದ್ದಾನೆ. ಆದರೆ ತಾಂಡವ್ ಬದಲಾಗಿದ್ದಾನೆ ಅನ್ನೋದನ್ನು ಮಾತ್ರ ಯಾರಿಗೂ ನಂಬೋದಕ್ಕೂ ಸಾಧ್ಯ ಆಗ್ತಿಲ್ಲ.

36
ಮತ್ತೆ ಮನೆಗೆ ಬಂದ ತಾಂಡವ್

ಅಪ್ಪ ಏನೇ ಮಾಡಿದರೂ ಸಹ ತನ್ವಿಗೆ ಮಾತ್ರ ಅಪ್ಪನ ಮೇಲೆ ಇನ್ನಿಲ್ಲದ ಪ್ರೀತಿ, ಹಾಗಾಗಿ ಅಮ್ಮನಲ್ಲಿ ಕಾಡಿ ಬೇಡಿ, ಅಪ್ಪನನ್ನು ಮನೆಯಲ್ಲಿ ಉಳಿಸಿಕೊಳ್ಳುವ ಹಠ ಹಿಡಿದು, ಕೊನೆಗೂ ಆತ ಮನೆಗೆ ಬರುವಂತೆ ಮಾಡಿದ್ದಾಳೆ ತನ್ವಿ. ಭಾಗ್ಯ ತಾಯಿ ಸುನಂದ ಹಾಗೂ ತನ್ವಿ ಬಿಟ್ಟು, ಮನೆಯಲ್ಲಿ ಬೇರೆ ಯಾರೂ ಸಹ ತಾಂಡವ್ ಈ ನಡೆಯನ್ನು ಒಪ್ಪುತ್ತಿಲ್ಲ, ಭಾಗ್ಯಳಿಗೆ ತಾಂಡವ್ ನೋಡಿದಾಗಲೆಲ್ಲಾ ನೋವುಗಳೆ ನೆನಪಾಗುತ್ತಿದೆ.

46
ಆತ್ಮಹತ್ಯೆ ಮಾಡಿಕೊಂಡ ಶ್ರೇಷ್ಠಾ

ಇದಿಷ್ಟು ನಡೆಯುತ್ತಿದ್ದರೆ, ಇನ್ನೊಂದೆಡೆ ಶ್ರೇಷ್ಠಾಗೆ ತಾನು ಇಷ್ಟಪಟ್ಟು ಮದುವೆಯಾದ ತಾಂಡವ್ ನನ್ನನ್ನು ಬಿಟ್ಟು ಮತ್ತೆ, ಭಾಗ್ಯ ಹಿಂದೆ ಹೋಗಿರುವುದನ್ನು ನೋಡಿ, ಆ ಕೋಪವನ್ನು ಸಹಿಸಿಕೊಳ್ಳಲಾರದೆ, ಕಟ್ಟಡದ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ದೃಶ್ಯ ಇದೀಗ ಪ್ರಸಾರವಾಗಿದೆ. ಹಾಗಾದ್ರೆ ನಿಜವಾಗ್ಲೂ ಶ್ರೇಷ್ಠಾ ಆತ್ಮಹತ್ಯೆ ಮಾಡಿಕೊಂಡಳಾ?

56
ದೆವ್ವ ಆಗಿ ಬಂದು ಕಾಟ ಕೊಡ್ತಾಳೆ ಶ್ರೇಷ್ಠಾ

ವೀಕ್ಷಕರು ಹೇಳುವಂತೆ ಶ್ರೇಷ್ಠಾ ಸಾಯೋದೆ ಇಲ್ಲ. ಒಂದ ಆದಿ ಬಂದು ಶ್ರೇಷ್ಠಾಳನ್ನು ರಕ್ಷಿಸುತ್ತಾನೆ. ಇಲ್ಲಾ ಅಂದ್ರೆ, ಶ್ರೇಷ್ಠಾ ಸತ್ತು ಮತ್ತೆ ದೆವ್ವವಾಗಿ ಬಂದು ಭಾಗ್ಯ ಜೀವನದಲ್ಲಿ ಮುಳ್ಳಾಗುತ್ತಾಳೆ. ತಾನು ಸತ್ತರೂ ಭಾಗ್ಯಳನ್ನು ನೆಮ್ಮದಿಯಾಗಿರಲು ಶ್ರೇಷ್ಠ ಬಿಡೋದೆ ಇಲ್ಲ ಎಂದು ಹೇಳುತ್ತಿದ್ದಾರೆ ಜನ. ಹಾಗಿದ್ರೆ ದೆವ್ವವಾಗಿ ಎಂಟ್ರಿ ಕೊಡೋದು ನಿಜಾನ.

66
ಲಕ್ಷ್ಮೀ ಬಾರಮ್ಮದಲ್ಲಿ ದೆವ್ವ

ಈ ಹಿಂದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಗೆ ಹಾರರ್ ಟ್ವಿಸ್ಟ್ ಕೊಡಲಾಗಿತ್ತು. ಅದು ವರ್ಕೌಟ್ ಕೂಡ ಆಗಿತ್ತು. ಹಾಗಾಗಿ ಇದೀಗ ಭಾಗ್ಯಲಕ್ಷ್ಮೀಗೂ ಕೂಡ ಹಾರರ್ ಟಚ್ ಕೊಡುವ ಸಾಧ್ಯತೆ ಕೂಡ ಇದೆ. ಶ್ರೇಷ್ಠಾ ದೆವ್ವ ಆದರೆ ಕಥೆಯಲ್ಲಿ ಮತ್ತಷ್ಟು ಟ್ವಿಸ್ಟ್ ಗಳನ್ನು ಕಾಣಿಸಿಕೊಳ್ಳಲಿವೆ. ಮುಂದೆ ಏನಾಗುತ್ತೆ ಅನ್ನೋದನ್ನು ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories