ನಿಧಿ ಪ್ರೀತಿ ಮತ್ತು ನಿತ್ಯಾಳ ಮದುವೆಯ ಸಂಕಷ್ಟದಲ್ಲಿರುವ ಕರ್ಣನಿಗೆ 'ಅಣ್ಣಯ್ಯ' ಧಾರಾವಾಹಿಯ ಪಾರು ಸಹಾಯ ಮಾಡಲು ಮುಂದಾಗಿದ್ದಾಳೆ. ಈ ಮಹಾಸಂಗಮದ ವಿಶೇಷ ಸಂಚಿಕೆಯಲ್ಲಿ, ಮಾರಿಗುಡಿಯ ಮುಂದೆ ಕರ್ಣನ ಸಮಸ್ಯೆಗೆ ಪರಿಹಾರ ಸಿಗುವುದರ ಜೊತೆಗೆ ಹಲವು ಸತ್ಯಗಳು ಬಯಲಾಗಲಿವೆ.
ಕರ್ಣ ಮತ್ತು ನಿಧಿ ಒಂದಾಗಬೇಕು ಎನ್ನುವುದು ವೀಕ್ಷಕರ ಆಸೆ. ಆದರೆ ನಿತ್ಯಾಳ ಹೊಟ್ಟೆಯಲ್ಲಿ ಇರುವ ಮಗುವನ್ನು ಉಳಿಸಿಕೊಳ್ಳಲು ಕರ್ಣ ತನ್ನ ಪ್ರೀತಿಯನ್ನು ತ್ಯಾಗ ಮಾಡಬೇಕಾದ ಸ್ಥಿತಿ ಬಂದಿದೆ. ಆದರೆ ಕರ್ಣನ ತಾತ, ಎಲ್ಲಾ ವಿಷಯವನ್ನು ನಿಧಿಗೆ ಹೇಳಿ ಮುಂದಿನ ದಾರಿ ಅವಳಿಗೇ ಬಿಟ್ಟುಬಿಡು ಎಂದು ದಾರಿ ತೋರಿದ್ದಾನೆ.
27
ಕರ್ಣನ ಮುಂದಿನ ನಡೆ
ಕರ್ಣ ಮುಂದೇನು ಮಾಡುವುದು ಎಂದು ತಿಳಿಯದಾಗಿದೆ. ಈಗ ಅವನಿಗೆ ದಾರಿ ತೋರಿದ್ದಾಳೆ ಅಣ್ಣಯ್ಯ ಸೀರಿಯಲ್ ಪಾರು! ಹೌದು. Karna ಮತ್ತು Annayya ಸೀರಿಯಲ್ ಮಹಾಸಂಗಮ ನಡೆಯುತ್ತಿದೆ.
37
ಕರ್ಣ-ಅಣ್ಣಯ್ಯ ಸಂಗಮ
ಒಂದೆಡೆ ಅಣ್ಣಯ್ಯ ಸೀರಿಯಲ್ನಲ್ಲಿ ಪಾರುವಿನ ಅಪ್ಪ ಮಾಡ್ತಿರೋ ಕುತಂತ್ರ ಹಾಗೂ ಕರ್ಣದಲ್ಲಿ ನಿಧಿ ಮತ್ತು ಕರ್ಣನ ಸತ್ಯ ಎಲ್ಲವೂ ಮಾರಿಗುಡಿಯ ಮುಂದೆ ಬಯಲಾಗುವ ಸಮಯ ಬಂದಿದೆ.
ಕರ್ಣ ಮತ್ತು ನಿಧಿ ಪ್ರೀತಿ ಮಾಡ್ತಿರೋ ವಿಷಯ, ಯಾವುದೇ ಸುಳಿಗೆ ಸಿಕ್ಕು ನಿತ್ಯಾಳನ್ನು ಮದುವೆಯಾಗಬೇಕಾಗಿ ಬಂದ ಪ್ರಸಂಗ ಎಲ್ಲವನ್ನೂ ಕರ್ಣ ಪಾರು ಬಳಿ ಹೇಳಿಕೊಂಡಿದ್ದಾನೆ. ಈ ವಿಷಯವನ್ನು ಪಾರು ಶಿವುಗೆ ಹೇಳಿದಾಗ ಪ್ರೀತಿ ಮಾಡುವವರು ಒಂದಾಗಬೇಕು ಎಂದಿದ್ದಾನೆ.
57
ಅಪ್ಪನ ಸಂಚು
ಅದೇ ಇನ್ನೊಂದೆಡೆ, ಪಾರುನ ಕುತಂತ್ರಿ ಅಪ್ಪ ಇವರಿಬ್ಬರನ್ನೂ ಮುಗಿಸಲು ಸಂಚು ರೂಪಿಸಿದ್ದಾನೆ. ಆದರೆ ಶಿವು ಮತ್ತು ಕರ್ಣ ಸೇರಿ ಎಲ್ಲರನ್ನೂ ಹೊಡೆದುರುಳಿಸಿದ್ದಾರೆ.
67
ಶಿವುಗೆ ಸತ್ಯ ತಿಳಿಯೋ ಹೊತ್ತು
ಅಲ್ಲಿಗೆ ಶಿವುವಿಗೆ ಸತ್ಯದ ಅರಿವು ಆಗುವ ಸಮಯವೂ ಬಂದಿದೆ. ಇತ್ತ ಕರ್ಣನ ಸಮಸ್ಯೆಗೂ ಪರಿಹಾರ ಸಿಗಲಿದೆ. ಒಟ್ಟಿನಲ್ಲಿ ಈ ಮಹಾಸಂಗಮ ರೋಚಕವಾಗಿದೆ.
77
ಸತ್ಯದ ಅನಾವರಣ
ಒಂದು ಗಂಟೆಗಳ ಮಹಾಸಂಗಮದಲ್ಲಿ ಮಾರಿಗುಡಿಯ ಮುಂದೆ ಹಲವು ವಿಷಯಗಳನ್ನು, ಹಲವು ಸತ್ಯಗಳು ಬಹಿರಂಗಗೊಳ್ಳಲಿವೆ.