Karimani Serial Climax Episode: ಕರಿಮಣಿ ಧಾರಾವಾಹಿ ಕೊನೇ ಎಪಿಸೋಡ್‌ ಫೋಟೋ ಹಂಚಿಕೊಂಡ ಕಲಾವಿದರು

Published : Jul 27, 2025, 04:17 PM IST

ಕರಿಮಣಿ ಧಾರಾವಾಹಿಯು ಅಂತ್ಯ ಆಗಲಿದೆ. ಇಂದು ಈ ಧಾರಾವಾಹಿಯ ಕೊನೆಯ ಎಪಿಸೋಡ್‌ ಪ್ರಸಾರ ಆಗಲಿದೆ. ಈಗ ಕಲಾವಿದರು ಸೋಶಿಯಲ್‌ ಮೀಡಿಯಾದಲ್ಲಿ ಕರಿಮಣಿ ಧಾರಾವಾಹಿ ಬಗ್ಗೆ ಭಾವುಕ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. 

PREV
111

ನಟಿ ಸ್ಪಂದನಾ ಸೋಮಣ್ಣ ಅವರು “ಈ ಪೋಸ್ಟ್ ಮಾಡಿ ವಿದಾಯ ಹೇಳಲು ನನಗೆ ಇಷ್ಟವಿಲ್ಲ, ಆದರೂ ಪೋಸ್ಟ್‌ ಮಾಡುತ್ತಿರುವೆ. ಇಂದು "ಕರಿಮಣಿ" ಧಾರಾವಾಹಿಯ ಕೊನೆಯ ಎಪಿಸೋಡ್‌ನ ಪ್ರಸಾರದ ದಿನವಾಗಿದೆ, ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಪ್ರಾಜೆಕ್ಟ್‌. ನಾನು ಸಂಪೂರ್ಣವಾಗಿ ಆನಂದಿಸಿದ ಪಾತ್ರವಿದು. ಮೊದಲ ಲುಕ್ ಟೆಸ್ಟ್‌ನಿಂದಲೇ ನಾನು ತುಂಬಾ ಉತ್ಸುಕನಾಗಿದ್ದೆ, ಇಂದಿಗೂ ಕೊನೆಯ ಸಂಚಿಕೆಯನ್ನು ನೋಡಲು ಉತ್ಸುಕನಾಗಿದ್ದೇನೆ” ಎಂದಿದ್ದಾರೆ.

211

"ಕರಿಮಣಿ" ಗೊಂದಲದ ಮಧ್ಯೆ ನನ್ನ ಮನೆಯಾಗಿತ್ತು. ನೀವೆಲ್ಲರೂ ನನಗೆ ನೀಡಿದ ಎಲ್ಲ ಪ್ರೀತಿ, ಸಹಕಾರಕ್ಕೆ ಧನ್ಯವಾದ ಎಂಬುದು ತುಂಬಾ ಚಿಕ್ಕ ಪದವಾಗಿದೆ. ಆದರೆ "ಕರಿಮಣಿ" ಧಾರಾವಾಹಿಗೆ ಅತ್ಯುತ್ತಮ ಅಭಿಮಾನಿ ಸಮೂಹವಿದೆ ಎಂದಿದ್ದಾರೆ ಸ್ಪಂದನಾ ಸೋಮಣ್ಣ.

311

“ನೀವು, ಪ್ರೇಕ್ಷಕರು, ಅಭಿಮಾನಿಗಳು "ಕರಿಮಣಿ" ಧಾರಾವಾಹಿಯನ್ನು ತುಂಬ ವಿಶೇಷವಾಗಿಸಿದ್ದೀರಿ. ನನ್ನ ಕಲಾವಿದರ ಗುಂಪು, ನೀವು ಎಲ್ಲರೂ ಅತ್ಯುತ್ತಮರು. ಎಲ್ಲರೂ ಆಯಾ ಪಾತ್ರವನ್ನು ಜೀವಂತವಾಗಿ ಬದುಕಿದ್ದೀರಿ. ನಾನು ಎಲ್ಲರಿಂದಲೂ ತುಂಬಾ ಕಲಿತಿದ್ದೇನೆ” ಎಂದಿದ್ದಾರೆ ಸ್ಪಂದನಾ ಸೋಮಣ್ಣ.

411

ನಟಿ ಅನುಷಾ ರಾವ್‌ ಅವರು “ಕರಿಮಣಿ ಧಾರಾವಾಹಿ ಒಂದು ಅದ್ಭುತ ಪ್ರಯಾಣವಾಗಿತ್ತು! ಪ್ರೀತಿ ಮತ್ತು ಬೆಂಬಲ, ಮತ್ತು ನನ್ನ ವಿಷಯದಲ್ಲಿ ದ್ವೇಷವೂ ಇದ್ದಿರಬಹುದು ಎಂದು ಭಾವಿಸುತ್ತೇನೆ! ಎಲ್ಲವೂ ಯೋಗ್ಯವಾಗಿತ್ತು. ನಾವು ನಿಮ್ಮನ್ನು ರಂಜಿಸಿದ್ದೇವೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ.

511

ಕರಿಮಣಿ ಧಾರಾವಾಹಿಯಲ್ಲಿ ಅರುಂಧತಿಯೇ ಬ್ಲ್ಯಾಕ್‌ರೋಸ್‌ ಎನ್ನೋದು ಕರ್ಣನಿಗೂ, ಮನೆಯವರಿಗೂ ಗೊತ್ತಾಗಿದೆ. ಇನ್ನು ಯಾವತ್ತೂ ತಪ್ಪು ಮಾಡದಿರೋ ಥರ ಕರ್ಣ ಅವಳಿಗೆ ಶಿಕ್ಷೆ ಕೊಡಲು ರೆಡಿಯಾಗಿದ್ದಾನೆ. ಇಂದು ಕರ್ಣನಿಗೆ ಸಾಹಿತ್ಯ ಪ್ರೇಮ ನಿವೇದನೆ ಮಾಡಲಿದ್ದಾಳೆ. ಈ ಮೂಲಕ ಧಾರಾವಾಹಿ ಅಂತ್ಯ ಆಗಲಿದೆ.

611

ಕರಿಮಣಿ ಧಾರಾವಾಹಿ ಆರಂಭದ ಎಪಿಸೋಡ್‌ಗಳಿಂದಲೂ ಸಾಹಿತ್ಯ ತಂದೆ ಕೋಮಾದಲ್ಲಿದ್ದಾರೆ. ಅವರು ಬದುಕಿ ಬರ್ತಾರಾ? ಇಲ್ಲವಾ ಎಂದು ಕಾದು ನೋಡಬೇಕಿದೆ. 

711

ಇಡೀ ಕುಟುಂಬ ಖುಷಿಯಿಂದ ಬದುಕುವುದು. ಕರ್ಣನನ್ನು ಸಾಹಿತ್ಯ ಕೂಡ ಒಪ್ಪಿಕೊಳ್ಳುತ್ತಾಳೆ. ಹೀಗಾಗಿ ಕರ್ಣ ಕೂಡ ಫುಲ್‌ ಖುಷಿಯಾಗ್ತಾನೆ. 

811

ಅಂದಹಾಗೆ ಭರತ್‌ ಹಾಗೂ ಸಿಂಚನಾಗೆ ಮದುವೆ ಮಾಡಿಸ್ತಾರಾ? ಅವರಿಗೆ ಬೇರೆ ಸಂಗಾತಿ ಹುಡುಕಿಕೊಳ್ತಾರಾ ಎಂದು ಕಾದು ನೋಡಬೇಕಿದೆ. 

911

ಸಾಹಿತ್ಯ ಪಾತ್ರದಲ್ಲಿ ಸ್ಪಂದನಾ ಸೋಮಣ್ಣ, ಕರ್ಣ ಪಾತ್ರದಲ್ಲಿ ಅಶ್ವಿನ್‌ ಎಚ್‌, ಅರುಂಧತಿ ಪಾತ್ರದಲ್ಲಿ ಅನುಷಾ ರಾವ್‌ ಅವರು ನಟಿಸುತ್ತಿದ್ದಾರೆ. 

1011

ನಟಿ ಸ್ಪಂದನಾ ಸೋಮಣ್ಣ ಅವರು ಕರ್ಣನ ಮನೆಯಲ್ಲಿ ತೆಗೆಸಿಕೊಂಡ ಫೋಟೋ ಇದು. ಧಾರಾವಾಹಿಯ ಕೊನೆಯ ದಿನದ ಎಪಿಸೋಡ್‌ ಶೂಟಿಂಗ್‌ ಇದು. 

1111

ಕನ್ನಡ ಸಿನಿಮಾಗಳಲ್ಲಿ ಮಿಂಚುತ್ತಿದ್ದ ಸ್ಪಂದನಾ ಸೋಮಣ್ಣ ಅವರಿಗೆ ಇದು ಮೊದಲ ಧಾರಾವಾಹಿಯಾಗಿತ್ತು. 

Read more Photos on
click me!

Recommended Stories