ಭೀಮನ ಅಮಾವಾಸ್ಯೆಯಂದು ಪಾದಪೂಜೆ ಮಾಡಿದ್ದಕ್ಕೆ, ಪತ್ನಿ ಮಧು ಗೌಡ ಕೇಳಿದ ಗಿಫ್ಟ್‌ ಕೊಟ್ಟ ಯುಟ್ಯೂಬರ್‌ ನಿಖಿಲ್!

Published : Jul 27, 2025, 08:30 AM IST

ಕರ್ನಾಟಕದಲ್ಲಿ ಯುಟ್ಯೂಬರ್‌ ಮಧು ಗೌಡ ಹಾಗೂ ನಿಖಿಲ್‌ ಜೋಡಿ ಭಾರೀ ಫೇಮಸ್.‌ ಕನ್ನಡ ನಾಡಿನಲ್ಲಿ ಒಂದು ವಾರಗಳ ಕಾಲ ಅದ್ದೂರಿಯಾಗಿ ಮದುವೆಯಾಗಿರೋ ಈ ಜೋಡಿ ಭೀಮನ ಅಮಾವಾಸ್ಯೆ ಆಚರಿಸಿಕೊಂಡಿದೆ. ಆ ವೇಳೆ ಮಧು ಕೇಳಿದ ಗಿಫ್ಟ್‌ನ್ನೇ ನಿಖಿಲ್‌ ನೀಡಿದ್ದಾರೆ. 

PREV
15

ಯುಟ್ಯೂಬರ್‌ ಮಧು ಹಾಗೂ ನಿಖಿಲ್‌ ಮದುವೆಯಾಗಿ ಒಂದು ವರ್ಷ ಆಗುತ್ತ ಬಂತು. ಕರ್ನಾಟಕದಲ್ಲಿ ಬಹಳ ಅದ್ದೂರಿಯಾಗಿ ಮದುವೆಯಾಗಿರೋ ಯುಟ್ಯೂಬ್‌ ಜೋಡಿಯಿದು. ತನ್ನ ಸ್ನೇಹಿತೆ ನಿಶಾಳ ಅಣ್ಣನನ್ನೇ ಮಧು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿಗೆ ಇದು ಮೊದಲ ಭೀಮನ ಅಮಾವಾಸ್ಯೆ ಆಗಿತ್ತು.

25

ಭೀಮನ ಅಮಾವಾಸ್ಯೆ ದಿನ ಪತಿಯ ಆಯುಷ್ಯ, ಆರೋಗ್ಯಕ್ಕಾಗಿ ದೇವರ ಬಳಿ ಬೇಡಿಕೊಂಡು ಗಂಡನ ಪಾದ ಪೂಜೆ ಮಾಡುತ್ತಾರೆ. ಮದುವೆಯಾಗದೆ ಇರೋರು ಭೀಮನಂಥ ಗಂಡ ಸಿಗಲಿ ಎಂದು ಬೇಡಿಕೊಳ್ಳುತ್ತಾರೆ.

ಪತ್ನಿ ತನ್ನ ಕಾಲು ತೊಳೆದು ಪೂಜೆ ಮಾಡಿದ ಬಳಿಕ ಪತಿಯು ಅವಳಿಗೆ ಸುಮಂಗಲಿ ಭವ ಎಂದು ಆಶೀರ್ವಾದ ಮಾಡುತ್ತಾನೆ. ಅನೇಕರು ಈ ಪೂಜೆಯನ್ನು ಮಾಡುವುದುಂಟು. ಅಂತೆಯೇ ಮಧು ಕೂಡ ನಿಖಿಲ್‌ ಕಾಲು ತೊಳೆದು ಪೂಜೆ ಮಾಡಿದ್ದಾರೆ.

35

ಮೊದಲ ಭೀಮನ ಅಮಾವಾಸ್ಯೆ ಆಗಿದ್ದಕ್ಕೆ ಮಧುಗೆ ನಿಖಿಲ್‌ ಏನು ಗಿಫ್ಟ್‌ ಬೇಕು ಎಂದು ಕೇಳಿದ್ದಾರೆ. ಆದರೆ ಮಧು ಮಾತ್ರ ತನಗೆ ಏನೂ ಬೇಡ ಎಂದು ಹೇಳಿದ್ದಾರೆ. ಆದರೂ ಕೇಳದೆ ಅವರನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾರೆ.

45

ವಾಚ್‌, ಬಟ್ಟೆ, ಗೋಲ್ಡ್‌ ನಡುವೆ ಯಾವುದು ಬೇಕು ಎಂದು ಆಯ್ಕೆ ಮಾಡಿಕೋ ಎಂದು ನಿಖಿಲ್‌ ಆಪ್ಶನ್‌ ನೀಡಿದ್ದರು. ಆದರ ಮಧು ಮಾತ್ರ ಇದ್ಯಾವುದೂ ಬೇಡ ಎಂದು ಹೇಳಿದ್ದರು. ನನ್ನ ಬಳಿ ಎಲ್ಲವೂ ಇದೆ, ನನಗೆ ಇವು ಯಾವುದೂ ಬೇಡ ಎಂದು ಮಧು ಸಾಕಷ್ಟು ಬಾರಿ ಹೇಳಿದ್ದರು. ಆದರೂ ನಿಖಿಲ್‌ ಕೇಳಿರಲಿಲ್ಲ.

55

ನಿಖಿಲ್‌ ಒತ್ತಾಯಕ್ಕೆ ಮಣಿದು ಮಧು ಗೋಲ್ಡ್‌ ಶಾಪ್‌ಗೆ ಹೋಗಿದ್ದಾರೆ. ಆದರೆ ಅವರು ಬಂಗಾರ ಖರೀದಿ ಮಾಡದೆ, ಬೆಳ್ಳಿ ಫ್ರೇಮ್‌ ಖರೀದಿ ಮಾಡಿದ್ದಾರೆ. ದೇವರ ಮನೆಯಲ್ಲಿ ಎಲ್ಲ ಬೆಳ್ಳಿ ಐಟಮ್‌ಗಳು ಇವೆ, ಆದರೆ ಬೆಳ್ಳಿ ಫ್ರೇಮ್‌ ಇರೋ ಫೋಟೋ ಬೇಕಿತ್ತು ಎಂದು ಮಧು ಹೇಳಿದ್ದಾರೆ. ಅದಕ್ಕೆ ನಿಖಿಲ್‌ ಒಪ್ಪಿದ್ದಾರೆ.

Read more Photos on
click me!

Recommended Stories