Kapil Sharma ತಮ್ಮ ಪತ್ನಿ Ginni Chatrath ಅವರನ್ನು ಫಸ್ಟ್‌ ಮೀಟ್‌ ಮಾಡಿದ್ದು ಹೀಗೆ

Published : Apr 03, 2022, 10:35 AM IST

ಕಾಮಿಡಿನ್‌ ಕಪಿಲ್ ಶರ್ಮಾ (Kapil Sharma) ಅವರಿಗೆ 41 ವರ್ಷ ತುಂಬಿದೆ. ಏಪ್ರಿಲ್ 2, 1981 ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಕಪಿಲ್ ಶರ್ಮ ಭಾರತದ ಫೇಮಸ್‌  ಕಾಮಿಡಿಯನ್‌. ದೊಡ್ಡ ತಾರೆಯರು ತಮ್ಮ ಸಿನಿಮಾಗಳ ಪ್ರಚಾರಕ್ಕೆ ಕಪಿಲ್ ಅವರ ಶೋಗೆ ಬರುತ್ತಾರೆಂದರೆ ಅವರ ಕಾಮಿಡಿ ಶೋಗಳ ಜನಪ್ರಿಯತೆಯನ್ನು ಅಳೆಯಬಹುದು. ಅಂದಹಾಗೆ, ಇದುವರೆಗೆ ಕಪಿಲ್ ಅವರ ಶೋಗೆ  ಕಪಿಲ್ ಸ್ವತಃ ತಮ್ಮ ಹೆಂಡತಿಯನ್ನು ಕಾರ್ಯಕ್ರಮಕ್ಕೆ ಕರೆತಂದಿಲ್ಲ. ಅವರ ಪತ್ನಿ ಗಿನ್ನಿ ಚತ್ರತ್ (Ginni Chatrath) ಜನಮನದಿಂದ ದೂರ ಉಳಿಯಲು ಬಯಸುತ್ತಾರೆ.

PREV
17
Kapil Sharma ತಮ್ಮ ಪತ್ನಿ Ginni Chatrath ಅವರನ್ನು ಫಸ್ಟ್‌ ಮೀಟ್‌ ಮಾಡಿದ್ದು ಹೀಗೆ
Kapil Sharma and his wife Ginni Chitrah

ಗಿನ್ನಿ ಮತ್ತು ಕಪಿಲ್ ಡಿಸೆಂಬರ್ 2018 ರಲ್ಲಿ ಪಂಜಾಬ್‌ನ ಜಲಂಧರ್‌ನಲ್ಲಿ ವಿವಾಹವಾದರು. ಬಾಲಿವುಡ್‌ನ ಹಲವು ಗಣ್ಯರು ಮದುವೆಗೆ ಆಗಮಿಸಿದ್ದರು. ಗಿನ್ನಿ ಮತ್ತು ಕಪಿಲ್ ಈಗ ಇಬ್ಬರು ಮಕ್ಕಳ ತಂದೆಯಾಗಿದ್ದಾರೆ. 
 

27
Kapil Sharma and his wife Ginni Chitrah

ಕಪಿಲ್ ಅವರ ಮಗಳು ಅನೈರಾ ಅವರ ಮೊದಲ ವಿವಾಹ ವಾರ್ಷಿಕೋತ್ಸವದ ಎರಡು ದಿನಗಳ ಮೊದಲು ಡಿಸೆಂಬರ್ 10, 2019 ರಂದು ಜನಿಸಿದರು. ಒಂದು ವರ್ಷದ ನಂತರ ಮಗಳು, ಮಗ ತ್ರಿಶಾನ್ ಫೆಬ್ರವರಿ 2021 ರಲ್ಲಿ  ಜನಿಸಿದನು.
 


 

37
Kapil Sharma and his wife Ginni Chitrah

ಗಿನ್ನಿ ಅವರು ಕಪಿಲ್ ಶರ್ಮಾ ಅವರ ಮೊದಲ ಭೇಟಿಯಾಗಿದ್ದು, ಕಪಿಲ್ ಅವರು ಗಿನ್ನಿಯ ಕಾಲೇಜಿಗೆ ನಾಟಕಕ್ಕೆ ಸಂಬಂಧಿಸಿದಂತೆ ಹೋದಾಗ. 'ಐಪಿಜೆ ಕಾಲೇಜಿನಲ್ಲಿ ಓದುತ್ತಿದ್ದಾಗ ಪಾಕೆಟ್ ಮನಿಗಾಗಿ ನಾಟಕಗಳನ್ನು ನಿರ್ದೇಶಿಸುತ್ತಿದ್ದೆ. 2005 ರಲ್ಲಿ, ನಾನು ಒಮ್ಮೆ ಗಿನ್ನಿ ಕಾಲೇಜಿಗೆ ವಿದ್ಯಾರ್ಥಿಗಳ ಆಡಿಷನ್ ಮಾಡಲು ಹೋಗಿದ್ದೆ ಮತ್ತು ಇಲ್ಲಿ ನಾವು ಮೊದಲ ಬಾರಿಗೆ ಭೇಟಿಯಾದೆವು' ಎಂದು ಕಪಿಲ್‌ ಗಿನ್ನಿ ಅವರನ್ನು ಮೀಟ್‌ ಆದ ಬಗ್ಗೆ ಹೇಳಿಕೊಂಡಿದ್ದಾರೆ.


 

47
Kapil Sharma and his wife Ginni Chitrah

'ನಾನು ಹುಡುಗಿಯರಿಗಾಗಿ ಆಡಿಷನ್ ಮಾಡುವಾಗ, ಗಿನ್ನಿಯ ಅಭಿವ್ಯಕ್ತಿ ಮತ್ತು ಸೌಂದರ್ಯದಿಂದ ನಾನು ಹೆಚ್ಚು ಪ್ರಭಾವಿತನಾಗಿದ್ದೆ. ಇದಾದ ನಂತರ ಉಳಿದ ಹುಡುಗಿಯರ ಆಡಿಷನ್ ಜವಾಬ್ದಾರಿಯನ್ನು ಗಿನ್ನಿಗೆ ವಹಿಸಿದ್ದೆ. ನಾಟಕದ ರಿಹರ್ಸಲ್ ಸಮಯದಲ್ಲಿ ಗಿನ್ನಿ ತನ್ನ ಮನೆಯಿಂದ ನನಗೆ ಆಹಾರವನ್ನು ತಂದಾಗ ನಾನು ಹೆಚ್ಚು ಇಂಪ್ರೆಸ್‌ ಆದೆ' ಎಂದಿದ್ದಾರೆ.
 

57
Kapil Sharma and his wife Ginni Chitrah

'ಒಮ್ಮೆ ನನ್ನ ಸ್ನೇಹಿತ ಗಿನ್ನಿ ನಿನ್ನನ್ನು  ಇಷ್ಟಪಡಲು ಪ್ರಾರಂಭಿಸಿದ್ದಾಳೆ ಎಂದು ಹೇಳಿದಾಗ ಅವನ ಮಾತು ಕೇಳಿ ನನಗೆ ನಂಬಲಾಗಲಿಲ್ಲ. ನಂತರ, ಅವಕಾಶವನ್ನು ನೋಡಿ, ಒಂದು ದಿನ ನಾನೇ ಗಿನ್ನಿಯನ್ನು ಕೇಳಿದಾಗ ಪ್ರಶ್ನೆಗೆ ಹೌದು ಎಂದು ಉತ್ತರಿಸಿದಳು'  ಎಂದು ಕಪಿಲ್ ಸಂದರ್ಶನವೊಂದರಲ್ಲಿ ಹೇಳಿದ್ದರು. 

67
Kapil Sharma and his wife Ginni Chitrah

'ಈ ಸಮಯದಲ್ಲಿ ನಾನು ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್‌ನ ಆಡಿಷನ್‌ಗೆ ಮುಂಬೈಗೆ ಹೋಗಿದ್ದೆ, ಆದರೆ ದುರದೃಷ್ಟವಶಾತ್ ನಾನು ಆಯ್ಕೆಯಾಗಲಿಲ್ಲ. ನಾನು ತುಂಬಾ ಬೇಜಾರಿನಲ್ಲಿದೆ ಮತ್ತು  ನನಗೆ ಕಾಲ್‌ ಮಾಡಬೇಡ ಎಂದು ಗಿನ್ನಿಗೆ ಹೇಳಿದೆ' ಎಂದು ಕಪಿಲ್‌ ತಮ್ಮ ಸಂಬಂಧದ ಆರಂಭದ ಬಗ್ಗೆ ಹೇಳಿಕೊಂಡಿದ್ದಾರೆ.

77
Kapil Sharma and his wife Ginni Chitrah

ಆದರೆ, ಕೆಲವು ವರ್ಷಗಳ ನಂತರ ಮತ್ತೊಮ್ಮೆ ಲಾಫ್ಟರ್ ಚಾಲೆಂಜ್‌ಗೆ ಆಡಿಷನ್‌ಗೆ ಹೋಗಿ  ಆಯ್ಕೆಯಾದೆ. ಇದಾದ ನಂತರ ಗಿನ್ನಿ ನನ್ನನ್ನು ಫೋನ್‌ನಲ್ಲಿ ಅಭಿನಂದಿಸಿದಳು ಮತ್ತು ಇಲ್ಲಿಂದ ನಮ್ಮ ಸಂಬಂಧವು ಸರಿಯಾದ  ಕಡೆಗೆ ಸಾಗಲು ಪ್ರಾರಂಭಿಸಿತು ಎಂದಿದ್ದಾರೆ ಕಪಿಲ್‌ ಶರ್ಮ.

Read more Photos on
click me!

Recommended Stories