ಕಿರುತೆರೆ ನಟಿ ಕಾವ್ಯಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟೀವ್ ಆಗಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ 1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಕೆಲವು ದಿನಗಳ ಹಿಂದೆ ಕ್ಯಾವ್ಯಾ ಗೌಡ ಅವರ ಇನ್‌ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಲಾಗಿತ್ತು. ಹ್ಯಾಕ್ ಮಾಡಿ ಕಿಡಿಗೇಡಿಗಳು ಅಪರಿಚಿತರಿಗೆ ಮೆಸೇಜ್ ಮಾಡಿದ್ದಾರೆ.
ಕಾವ್ಯಾ ಗೌಡ ಅವರ ಸಹೋದರಿ ಭವ್ಯಾ ನಡೆಸುವ ಸುಮಯಾ ಫ್ಯಾಷನ್‌ನ ಇನ್‌ಸ್ಟಾಗ್ರಾಂ ಪೇಜ್ ಕೂಡ ಹ್ಯಾಕ್ ಮಾಡಲಾಗಿತ್ತು. ಪೋಸ್ಟ್ ಬರೆಯುವ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ.
ಹಾಯ್ ನನ್ನ ಇನ್‌ಸ್ಟಾಗ್ರಾಂ ಫ್ಯಾಮಿಲಿ ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ಹ್ಯಾಕ್ ಮಾಡಿಕೊಂಡು ಕೆಲವರು ದುರುಉಪಯೋಗ ಮಾಡಿಕೊಂಡಿದ್ದಾರೆ. ಇದನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಿದಕ್ಕೆ ಧನ್ಯವಾದಗಳು.
ಈಗ ನನ್ನ ಇನ್‌ಸ್ಟಾಗ್ರಾಂ ಖಾತೆಯನ್ನು ರಿಕವರ್ ಮಾಡಿಕೊಂಡಿರುವೆ. ಎಲ್ಲಾ ರೀತಿಯ security measureಗಳನ್ನು ತೆಗೆದುಕೊಂಡಿರುವೆ ಈಗ ಸೇಫ್ ಆಗಿದೆ.
ದುರಾದೃಷ್ಟ ಏನೆಂದರೆ ನಮ್ಮ ಸುಮಯಾ ಡಿಸೈನರ್ ಸ್ಟುಡಿಯೋ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ನನ್ನ ಮೊಬೈಲ್ ನಂಬರ್ ಬಳಸಿರುವುದೇ ಇದಕ್ಕೆ ಕಾರಣವಾಗಿದೆ.
ಸುಮಯಾ ಖಾತೆಯನ್ನು ಶೀಘ್ರದಲ್ಲಿ ಹಿಂಪಡೆದುಕೊಳ್ಳುತ್ತೀವಿ. ದಯವಿಟ್ಟು ಆದಷ್ಟು ಈ ವಿಚಾರವನ್ನು ಎಲ್ಲರ ಜೊತೆ ಹಂಚಿಕೊಳ್ಳಿ ಎಂದು ಕಾವ್ಯಾ ಬರೆದುಕೊಂಡಿದ್ದರು.