ಯಾರಿದು ಕನ್ಯಾಕುಮಾರಿ ಧಾರಾವಾಹಿ ಆಸಿಯಾ ಫಿರ್ದೋಸೆ?

First Published | Apr 1, 2022, 11:00 AM IST

ವಿಲನ್ ಪಾತ್ರಕ್ಕೆ ಆಡಿಷನ್ ಕೊಟ್ಟು ನಾಯಕಿ ಪಾತ್ರಕ್ಕೆ ಆಯ್ಕೆಯಾದ ಮಾಡೆಲ್ ಆಸಿಯಾ ಫಿರ್ದೋಸೆ. ಓದಿದ್ದು, ಕೆಲಸ ಮಾಡಿದ್ದು ಎಲ್ಲಿ ಗೊತ್ತಾ?

ಕಲರ್ಸ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಕನಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಆಸಿಯಾ ಫಿರ್ದೋಸೆ. 

ಬಿಬಿಎ ಪದವಿಧರೆ ಆಗಿರುವ ಆಸಿಯಾ ಫಿರ್ದೋಸೆ ಆಪ್‌ ಆಕ್ಟಿಂಗ್ ಸಂಸ್ಥೆಯಲ್ಲಿ ನಟನೆ ಕಲಿತು ಸಣ್ಣ ಪುಟ್ಟ ಪ್ರಾಜೆಕ್ಟ್‌ಗಳಲ್ಲಿ ಅಭಿನಯಿಸಿದ್ದಾರೆ. ವಿದ್ಯಾಭ್ಯಾಸ ಮತ್ತು ಮಾಡಲಿಂಗ್‌ನ ಸಮವಾಗಿ ನಿಭಾಯಿಸುತ್ತಿದ್ದರಂತೆ.

Tap to resize

 ಬಿಬಿಎ ಕೊನೆ ವರ್ಷದಲ್ಲಿ ನನಗೆ 'ನಾನು ನನ್ನ ಕನಸು' ಧಾರಾವಾಹಿಯಲ್ಲಿ ಅವಕಾಶ ಪಡೆದುಕೊಂಡೆ. ಕೊರೋನಾ ಲಾಕ್‌ಡೌನ್‌ನಿಂದ ಆ ಧಾರಾವಾಹಿ ಸಂಪೂರ್ಣವಾಗಿ ನಿಂತುಬಿಟ್ಟಿತ್ತು.

ಪದವಿ ಪಡೆದುಕೊಂಡ ನಂತರ ನ್ಯೂಸ್‌ ಚಾನೆಲ್‌ನಲ್ಲಿ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದಾರೆ. ನಿರೂಪಣೆಯಲ್ಲಿ ತೊಡಗಿಸಿಕೊಂಡ ನಂತರ ಮಾಡಲಿಂಗ್‌ನಲ್ಲಿ ಹೆಚ್ಚಿಗೆ ಗುರುತಿಸಿಕೊಂಡರಂತೆ.

ಕನ್ಯಾಕುಮಾರಿ ಧಾರಾವಾಹಿಯಲ್ಲಿ ವಿಲನ್ ಯಾಮಿನಿ ಪಾತ್ರಕ್ಕೆ ಮೊದಲು ಆಡಿಷನ್‌ ಕೊಟ್ಟು ವಿಫಲವಾಗಿ ಸುಮ್ಮನಾದರಂತೆ. ನಾಯಕಿ ಪಾತ್ರಕ್ಕೆ ಆಡಿಷನ್ ಕೊಟ್ಟ ನೂರಾರು ಹುಡುಗಿಯರಲ್ಲಿ ಆಸಿಯಾ ಫಿರ್ದೋಸೆ ಸೆಲೆಕ್ಟ್ ಆಗಿದಾರೆ.

ಕನ್ಯಾಕುಮಾರಿ ಧಾರಾವಾಹಿಯಿಂದ ತುಂಬಾನೇ ಪ್ರೀತಿ ಪಡೆದುಕೊಂಡಿದ್ದಾರೆ. ಆಸಿಯಾ ಫಿರ್ದೋಸೆ ಹುಟ್ಟುಹಬ್ಬ ದಿನ ಅಭಿಮಾನಿಯೊಬ್ಬರು ಅನಾಥಾಲಯದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದಾರೆ ಹಾಗೂ ಆಸಿಯಾಗೆ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ. 

ಆಸಿಯಾ ಫಿರ್ದೋಸೆ ಇನ್‌ಸ್ಟಾಗ್ರಾಂನಲ್ಲಿ 1 ಲಕ್ಷ ಫಾಲೋವರ್ಸ್‌ನ ಹೊಂದಿದ್ದಾರೆ. ಧಾರಾವಾಹಿ, ಫೋಟೋಶೂಟ್ ಮತ್ತು ಮಾಡಲಿಂಗ್ ಮಾಹಿತಿಗಳನ್ನು ಹಂಚಿಕೊಳ್ಳುತ್ತಾರೆ.

Latest Videos

click me!