Kannada Serial TRP: ತಲೆಕೆಳಗಾದ ಲೆಕ್ಕಾಚಾರ; ಪೈಪೋಟಿಗೆ ಬಿದ್ದು, ಗೆದ್ದು ಬೀಗಿದ ಸೀರಿಯಲ್‌ ಇದೇನೇ..!

Published : Sep 25, 2025, 03:07 PM ISTUpdated : Sep 25, 2025, 04:45 PM IST

Kannada Serial TRP 2025: ವಾರದಿಂದ ವಾರಕ್ಕೆ ಧಾರಾವಾಹಿಗಳ ಟಿಆರ್‌ಪಿ ಬದಲಾವಣೆ ಆಗುವುದು. ಈ ವಾರ ಕೂಡ ಸೀರಿಯಲ್‌ ಟಿಆರ್‌ಪಿಯಲ್ಲಿ ಬದಲಾವಣೆ ಆಗಿದೆ. ಆದರೆ ಎಲ್ಲ ಸೀರಿಯಲ್‌ಗಳು ಈ ಬಾರಿ ಒಳ್ಳೆಯ ಪೈಪೋಟಿ ನೀಡಿವೆ. 

PREV
110
Top Serials

ಈ ವಾರದ ಟಾಪ್‌ ಧಾರಾವಾಹಿಗಳು ಯಾವುವು? ಯಾವ ಧಾರಾವಾಹಿಗೆ ಎಷ್ಟು ಟಿಆರ್‌ಪಿ ಸಿಗ್ತು? ಮುದ್ದು ಸೊಸೆ ಧಾರಾವಾಹಿ 4.7

210
ಮುದ್ದು ಸೊಸೆ ಧಾರಾವಾಹಿ 4.7 TVR

ಮುದ್ದು ಸೊಸೆ ಧಾರಾವಾಹಿಯಲ್ಲಿ ವಿದ್ಯಾಳೇ ಭದ್ರನ ಅಕ್ಕನ ಸೀಮಂತವನ್ನು ಮಾಡಿದ್ದಾಳೆ. ಇನ್ನು ವಿದ್ಯಾ ಹೇಳಿದ ಸುಳ್ಳಿನಿಂದಲೇ ವೀರಭದ್ರನ ತಂದೆ ಜೈಲಿಗೆ ಹೋಗುವಂತೆ ಆಯ್ತು ಎನ್ನೋದು ರಿವೀಲ್‌ ಆಗಬೇಕಿದೆ.

310
ಭಾರ್ಗವಿ ಎಲ್‌ಎಲ್‌ಬಿ 4.7 TVR

ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯಲ್ಲಿ ಅರ್ಜುನ್‌ ಮನೆಯಲ್ಲಿ ಭಾರ್ಗವಿಗೆ ಒಂದಲ್ಲ, ಒಂದು ಸಮಸ್ಯೆಗಳು ಬರುತ್ತಿವೆ. ಅದನ್ನು ಅವಳು ಎದುರಿಸುತ್ತಿದ್ದು, ಸಂಧ್ಯಾಳನ್ನು ಕೊಲೆ ಮಾಡಿದವರು ಯಾರು ಎಂದು ಕೇಸ್‌ ನಡೆಸಲು ಮುನ್ನುಗ್ಗಿದ್ದಾಳೆ.

410
ಭಾಗ್ಯಲಕ್ಷ್ಮೀ 4.8 TVR

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಶ್ರೇಷ್ಠ, ಭಾಗ್ಯಳಿಂದ ಅವಳ ಮಗಳು ತನ್ವಿಯನ್ನು ದೂರ ಮಾಡಿದ್ದಾಳೆ. ಇನ್ನು ಆದೀಶ್ವರ್‌ ಕಾಮತ್‌ ಆಫೀಸ್‌ನಲ್ಲಿರುವ ಭಾಗ್ಯಳನ್ನು ಹೊರಗಡೆ ಹಾಕಬೇಕು ಅಂತ ಶ್ರೇಷ್ಠ-ಕನಿಕಾ ಪ್ಲ್ಯಾನ್‌ ಮಾಡಿದ್ದಾರೆ.

510
ನಂದಗೋಕುಲ ಧಾರಾವಾಹಿ 5.0 TVR

ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್‌ ಹಾಗೂ ಸೂರ್ಯಕಾಂತ್‌ ನಡುವಿನ ಕುಟುಂಬದ ಜಗಳ ಮುಗಿತಿಲ್ಲ. ಇನ್ನು ಅಮೂಲ್ಯಗೆ ಸಿದ್ದು ಕಡೆಯಿಂದ ಸಮಸ್ಯೆ ಆಗ್ತಿದೆ ಅಂತ ಗೊತ್ತಾದಾಗ, ವಲ್ಲಭ ಅವಳಿಗೆ ಸಹಾಯ ಮಾಡಲು ಮುಂದಾಗಿದ್ದಾನೆ. ಆಗ ಅವಳು ವಲ್ಲಭನಿಗೆ ಬೈದಿದ್ದಾಳೆ.

610
ನಾ ನಿನ್ನ ಬಿಡಲಾರೆ 6.0 TVR

ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ದುರ್ಗಾ, ಶರತ್‌ ಮದುವೆಯಾಗಿದೆ. ಇನ್ನು ಹಿತಾ ತನ್ನ ತಾಯಿಗೋಸ್ಕರ ಹಂಬಲಿಸುತ್ತಿದ್ದಾಳೆ. ದೈಹಿಕವಾಗಿ ಮಗಳನ್ನು ಮುದ್ದಾಡಬೇಕು ಎಂದು ಅಂಬಿಕಾ ಒದ್ದಾಡುತ್ತಿದ್ದಾಳೆ. ಶರತ್‌ ಹಾಗೂ ದುರ್ಗಾ ಒಂದಾಗಬೇಕು, ದುರ್ಗಾಳನ್ನು ತಾಯಿ ಅಂತ ಹಿತಾ ಸ್ವೀಕರಿಸಬೇಕು. ಇದೆಲ್ಲ ಯಾವಾಗ ಈಡೇರುವುದೋ ಏನೋ!

710
ಲಕ್ಷ್ಮೀ ನಿವಾಸ ಧಾರಾವಾಹಿ 8.8 TVR

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಹಾಗೂ ಭಾವನಾಳನ್ನು ದೂರ ಮಾಡಲು ನೀಲು ಪ್ರಯತ್ನಪಡುತ್ತಿದ್ದಾಳೆ. ಅತ್ತ ವಿಶ್ವ-ಜಾನುಗೆ ಸಂಬಂಧವಿದೆ ಎಂದು ತನುಗೆ ಡೌಟ್‌ ಬರ್ತಿದೆ. ಇನ್ನೊಂದು ಕಡೆ ಹರೀಶ್-ಸಂತೋಷ್‌ಗೆ ಬುದ್ಧಿ ಬಂದಂತಿಲ್ಲ.

810
ಕರ್ಣ ಧಾರಾವಾಹಿ 9.5 TVR

ಕರ್ಣ ಧಾರಾವಾಹಿಯಲ್ಲಿ ಕರ್ಣ ಹಾಗೂ ನಿಧಿ, ನಿತ್ಯಾ ಮಾರಿಗುಡಿಗೆ ಹೋಗಿದ್ದರು. ಅಲ್ಲಿ ಒಂದಿಷ್ಟು ತೊಂದರೆಗಳನ್ನು ಎದುರಿಸಿದರು. ಈ ಕುರಿತು ಎಪಿಸೋಡ್‌ ಪ್ರಸಾರ ಆಗಿತ್ತು. ಈಗ ನಿಧಿಗೆ ಕರ್ಣ ಪ್ರೇಮ ನಿವೇದನೆ ಮಾಡಿದ್ದಾನೆ.

910
ಅಣ್ಣಯ್ಯ ಧಾರಾವಾಹಿ 9.7 TVR

ಅಣ್ಣಯ್ಯ ಧಾರಾವಾಹಿಯಲ್ಲಿ ಶಾರದಮ್ಮನ ಕುರಿತು ಎಪಿಸೋಡ್‌ ಪ್ರಸಾರ ಆಗ್ತಿದೆ. ವೀರಭದ್ರನ ಕೋಟೆಯಿಂದ ಶಾರದಾ ಹೊರಗಡೆ ಬಂದಿದ್ದಾಳೆ. ಇನ್ನೊಂದು ಕಡೆ ರಾಣಿ ಜೀವನವೂ ಕಷ್ಟ ಆಗ್ತಿದೆ. ಅತ್ತ ಜಿಮ್‌ ಸೀನ, ಪಿಂಕಿ ಬೇಬಿ ಲವ್‌ ಸ್ಟೋರಿ ಮುಂದುವರೆಯುತ್ತಿದೆ.

1010
ಅಮೃತಧಾರೆ ಧಾರಾವಾಹಿ 9.2 TVR

ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಗೌತಮ್‌ ಹಾಗೂ ಭೂಮಿಕಾ ಐದು ವರ್ಷಗಳ ನಂತರ ಭೇಟಿಯಾಗಿದ್ದಾರೆ. ಈಗ ಆಕಾಶ್‌ ಕೂಡ ದೊಡ್ಡವನಾಗಿದ್ದು, ಶಾಲೆಗೆ ಹೋಗುತ್ತಿದ್ದಾನೆ. ಮುಂದೆ ಏನಾಗುವುದು ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories