'ಶ್ರಾವಣಿ ಸುಬ್ರಹ್ಮಣ್ಯ'ದ ಈ ನಟಿ ಬಿಗ್‌ಬಾಸ್‌ಗೆ ಹೋಗ್ಬೇಕು ಎಂದು ಡಿಮ್ಯಾಂಡ್ ಮಾಡಿದ ನೆಟ್ಟಿಗರು

Published : Oct 30, 2025, 01:21 PM IST

Shravani Subramanya Actress: ಜೀ ಕನ್ನಡ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ಅವರೇ ಹೇಳಿದ ಪ್ರಕಾರ, "ಇಷ್ಟು ವರ್ಷ ವಿಲನ್ ಪಾತ್ರದಲ್ಲೇ ಮಿಂಚಿದ್ದು, ಯಾವಾಗ ಹಾಸ್ಯ ನಟಿ ಆದೆ ಎಂದು ನಂಗೆ ಗೊತ್ತಿಲ್ಲ"  ಎಂದು ಹಾಸ್ಯವಾಗಿಯೇ ಮಾತನಾಡಿ ಎಲ್ಲರ ಮನ ಗೆದ್ದಿದ್ದರು.  

PREV
16
ಹಾಸ್ಯ ನಟಿ ಪ್ರಶಸ್ತಿ

ತಮಗೆ ಕೊಟ್ಟಿರುವ ಪಾತ್ರ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಬಹಳ ಬೇಗ ವೀಕ್ಷಕರ ಮನಗೆಲ್ಲುತ್ತಾರೆ ಕೆಲವು ನಟ-ನಟಿಯರು. ಈ ಬಾರಿ ‘ಜೀ ಕನ್ನಡ ಕುಟುಂಬ ಅವಾರ್ಡ್ಸ್- 2025’ ನಲ್ಲಿ ಅನೇಕ ಕಲಾವಿದರು ವಿವಿಧ ಕೆಟಗರಿಯಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಅವರಲ್ಲಿ 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯ ಕಾಂತಮ್ಮ ಒಬ್ಬರು. ಕಾಂತಮ್ಮ ಪಾತ್ರಧಾರಿ ಭವಾನಿ ಪ್ರಕಾಶ್ ಅವರು ಅತ್ಯುತ್ತಮ ಹಾಸ್ಯ ನಟಿ ಪ್ರಶಸ್ತಿ ಪಡೆದರು.

26
ಇಷ್ಟು ವರ್ಷ ವಿಲನ್ ಪಾತ್ರ

ಜೀ ಕನ್ನಡ ಕುಟುಂಬ ಅವಾರ್ಡ್ಸ್ ಸಮಾರಂಭದಲ್ಲಿ ಕಾಂತಮ್ಮ ಅವರೇ ಹೇಳಿದ ಪ್ರಕಾರ, "ಇಷ್ಟು ವರ್ಷ ವಿಲನ್ ಪಾತ್ರದಲ್ಲೇ ಮಿಂಚಿದ್ದು, ಯಾವಾಗ ಹಾಸ್ಯ ನಟಿ ಆದೆ ಎಂದು ನಂಗೆ ಗೊತ್ತಿಲ್ಲ" ಹಾಸ್ಯವಾಗಿಯೇ ಮಾತನಾಡಿ ಎಲ್ಲರ ಮನ ಗೆದ್ದಿದ್ದರು.

36
ಕ್ರಮೇಣ ವೀಕ್ಷಕರಿಗೆ ಹತ್ತಿರ

ಶ್ರಾವಣಿ ಸುಬ್ರಹ್ಮಣ್ಯ ವೀಕ್ಷಕರಿಗೆ ಕಾಂತಮ್ಮ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಕಾಂತಮ್ಮ ಇಲ್ಲದಿದ್ದರೆ ಈ ಸೀರಿಯಲ್ ನೋಡೋದಿಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಭಿಮಾನಿಗಳನ್ನ ಸಂಪಾದಿಸಿದ್ದಾರೆ. ಧಾರಾವಾಹಿಯಲ್ಲಿ ಮೊದ ಮೊದಲು ನಾಯಕ ಸುಬ್ಬುನನ್ನ ಮೂದಲಿಸುತ್ತಾ ಕಾಲಕಳೆಯುತ್ತಿದ್ದ, ಶಕುನಿ ವಿಜಯಾಂಬಿಕಾ ಚಮಚ ಎಂದೇ ಗುರತಿಸಿಕೊಂಡಿದ್ದ ಕಾಂತಮ್ಮತ್ತೆ ಕ್ರಮೇಣ ವೀಕ್ಷಕರಿಗೆ ಹತ್ತಿರವಾಗುತ್ತಾ ಹೋದರು.

46
ವೀಕ್ಷಕರ ಕಾಮೆಂಟ್ಸ್

ಇತ್ತೀಚೆಗಂತೂ ಕಾಂತಮ್ಮತ್ತೆಯನ್ನ ನೋಡಿದ್ರೆ ಸಾಕು ನಗುವವರೂ ಇದ್ದಾರೆ. ಅಷ್ಟರ ಮಟ್ಟಿಗೆ ಅವರು ವೀಕ್ಷಕರ ಗಮನಸಳೆದಿದ್ದಾರೆ. ಅಷ್ಟೇ ಅಲ್ಲ, ನೀವು ಬಿಗ್‌ ಬಾಸ್‌ಗೆ ಹೋಗಿ ಎಂದು ಡಿಮ್ಯಾಂಡ್‌ ಮಾಡುತ್ತಿದ್ದಾರೆ ನೆಟ್ಟಿಗರು. ಸದ್ಯ ವೀಕ್ಷಕರು ಮಾಡಿರುವ ಕಾಮೆಂಟ್ಸ್ ನೋಡುವುದಾದರೆ… "ಕಾಂತಮ್ಮ ಅವ್ರೆ ನೀವು ಬಿಗ್‌ಬಾಸ್‌ಗೆ ಬನ್ನಿ", "ಏನೇ ಕೊಟ್ರು ಅಚ್ಚು ಕಟ್ಟಾಗಿ ಮಾಡ್ತಾರೆ ನಮ್ಮ ಕಾಂತಮ್ಮ", "ಕಾಂತಮ್ಮ ಪಾತ್ರ ದ ಅಭಿನಯ ವಾವ್ಹ್", ಅಂತೆಲ್ಲಾ ಕಾಮೆಂಟ್ ಮಾಡಿರುವುದನ್ನ ನೋಡಬಹುದು.

56
ಎರಡೂವರೆ ದಶಕಗಳಿಂದ ನಟನೆ

ಕಿರುತೆರೆಯಲ್ಲಿ ಮಾತ್ರವಲ್ಲದೆ, ರಂಗಭೂಮಿ, ಸಿನಿಮಾದಲ್ಲೂ ಗುರುತಿಸಿಕೊಂಡಿದ್ದಾರೆ ಭವಾನಿ ಪ್ರಕಾಶ್. ಕಳೆದ ಎರಡೂವರೆ ದಶಕಗಳಿಂದ ನಟನೆ ಮಾಡುತ್ತಿದ್ದಾರೆ. ಸಾಕಷ್ಟು ಪ್ರಭುದ್ಧ ಪಾತ್ರಗಳಲ್ಲಿ ಅಭಿನಯಿಸಿಯೂ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನೀನಾಸಂನಲ್ಲಿ ತರಬೇತಿ ಪಡೆದಿರುವ ಇವರು ಎಂತಹದ್ದೇ ಪಾತ್ರಗಳನ್ನು ಕೊಟ್ಟರೂ ಸಲೀಸಾಗಿ ನಿಭಾಯಿಸಬಲ್ಲರು. ಸದ್ಯ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಶ್ರಾವಣಿ ಸುಬ್ರಹ್ಮಣ್ಯ'ಸೀರಿಯಲ್‌ನಲ್ಲಿ ಕಾಂತಮ್ಮ ಪಾತ್ರದಲ್ಲಿ ನಟಿಸುತ್ತಿದ್ದಾರೆ.

66
ಹೆಚ್ಚು ಹೆಸರು ತಂದುಕೊಟ್ಟ ಪಾತ್ರ

ಮೂಲತಃ ದಾವಣಗೆರೆಯವರಾದ ಭವಾನಿ ಪರಮಾತ್ಮ, ರಾಟೆ ಸೇರಿದಂತೆ ಅನೇಕ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ದೊರೆಸಾನಿ ಧಾರಾವಾಹಿ ನಂತರ 'ಶ್ರಾವಣಿ ಸುಬ್ರಹ್ಮಣ್ಯ'ಸೀರಿಯಲ್‌ ಭವಾನಿ ಅವರಿಗೆ ಹೆಚ್ಚು ಹೆಸರು ತಂದುಕೊಟ್ಟಿದೆ.

Read more Photos on
click me!

Recommended Stories