ಬಿಗ್ ಬಾಸ್ ಮನೆಯಲ್ಲಿ ಕಾವ್ಯಾ ಶೈವ ಜೊತೆಗಿನ ಗಿಲ್ಲಿ ನಟನ ಸ್ನೇಹ ಚರ್ಚೆಯಾಗುತ್ತಿರುವಾಗಲೇ, ಗಗನಾ ಜೊತೆಗಿನ ಅವರ ರೊಮ್ಯಾಂಟಿಕ್ ವಿಡಿಯೋ ವೈರಲ್ ಆಗಿದೆ. ಈ ಹಿಂದೆ ಮಹಾನಟಿ ಶೋನಿಂದಲೂ ಫೇಮಸ್ ಆಗಿದ್ದ ಈ ಜೋಡಿಯ ವಿಡಿಯೋ ನೋಡಿ, ನೆಟ್ಟಿಗರು ಗಗನಾಗೆ ಮೋಸ ಮಾಡುತ್ತಿದ್ದೀರಾ ಎಂದು ಕಾಲೆಳೆಯುತ್ತಿದ್ದಾರೆ.
ಸದ್ಯ ಬಿಗ್ಬಾಸ್ (Bigg Boss)ನಲ್ಲಿ, ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಅಷ್ಟಕ್ಕೂ ಗಿಲ್ಲಿ ನಟಿ ಮೊದಲಿನಿಂದಲೂ ಕಾಮಿಡಿ ಮಾಡುವುದರಲ್ಲಿ ಫೇಮಸ್ಸು. ಸದ್ಯ ಕಾವ್ಯಾ ಶೈವ ಮತ್ತು ಗಿಲ್ಲಿ ನಡುವೆ ಲವ್ ಶುರುವಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದೇನು ನಿಜಕ್ಕೂ ಪ್ರೀತಿ-ಪ್ರೇಮ ಏನೂ ಅಲ್ಲ. ಇವರಿಬ್ಬರೂ ತುಂಬಾ ಕ್ಲೋಸ್ ಸ್ನೇಹಿತರು ಅಷ್ಟೇ. ಆದರೂ ಇವರಿಬ್ಬರನ್ನು ಆಡಿಕೊಳ್ಳಲಾಗುತ್ತಿದೆ. ಎಂಥ ಸಂದರ್ಭದಲ್ಲಿ ಕೂಡ ಕಾವ್ಯ ಅವರನ್ನು ಗಿಲ್ಲಿ ಬಿಟ್ಟುಕೊಡುವುದಿಲ್ಲ.
27
ಗಿಲ್ಲಿಯಿಂದ ಸಪೋರ್ಟ್
ಮಿಡ್ ಸೀಸನ್ ಫಿನಾಲೆ ತಲುಪಲು ಬಿಗ್ ಬಾಸ್ ಸರಣಿ ಟಾಸ್ಕ್ ನೀಡುತ್ತಿದ್ದ ಸಂದರ್ಭದಲ್ಲಿಯೂ ಇವರ ಫ್ರೆಂಡ್ಷಿಪ್ ತಿಳಿದಿತ್ತು. ಆಗ ಕಾವ್ಯಾ ಶೈವ ಮತ್ತು ರಾಶಿಕಾ ಶೆಟ್ಟಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಹುತೇಕರು ರಾಶಿಕಾ ಶೆಟ್ಟಿಗೆ ಬೆಂಬಲ ನೀಡಿದರು. ಕಾವ್ಯ ಶೈವ ಅವರಿಗೆ ಕೆಲವರ ಬೆಂಬಲ ಮಾತ್ರ ಸಿಕ್ಕಿತು. ನಿರೀಕ್ಷೆಯಂತೆ ಗಿಲ್ಲಿ ನಟ ಅವರು ಕಾವ್ಯ ಪರವಾಗಿಯೇ ನಿಂತವರು.
37
ರಾಶಿಕಾ ಶೆಟ್ಟಿಗೆ ಗೆಲುವು
ಈ ಟಾಸ್ಕ್ನಲ್ಲಿ ರಾಶಿಕಾ ಶೆಟ್ಟಿಗೆ ಗೆಲುವಾಗಿತ್ತು. ಅದು ಗಿಲ್ಲಿ ಅವರಿಗೆ ನೋವು ತಂದಿತ್ತು. ‘ಇಷ್ಟು ದಿನ ಎಲ್ಲರೂ ನಿನ್ನ ಜೊತೆ ಚೆನ್ನಾಗಿದ್ದರು. ಈಗ ಬಂದು ರಾಶಿಕಾಗೆ ಸಪೋರ್ಟ್ ಮಾಡಿದರು. ಅದು ನನಗೆ ಉರಿಯಿತು’ ಎಂದು ಗಿಲ್ಲಿ ನಟ ಹೇಳಿದ್ದರು. ಹೀಗಿದೆ ಅವರ ಸ್ನೇಹ.
ಇದೀಗ ಗಿಲ್ಲಿ ನಟ (Gilli Nata) ಗಗನಾ ಜೊತೆ ರೊಮಾನ್ಸ್ ಮಾಡಿರೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಇದು ʻಭರ್ಜರಿ ಬ್ಯಾಚುಲರ್ಸ್ ಸೀಸನ್ 2ನಲ್ಲಿ ಮಾಡಿರುವ ವಿಡಿಯೋ. ಅಷ್ಟಕ್ಕೂ ಮಹಾನಟಿಯ ಸಂದರ್ಭದಲ್ಲಿ ಇವರಿಬ್ಬರ ಜೋಡಿ ಫೇಮಸ್ ಆಗಿತ್ತು.
57
ಗಿಲ್ಲಿ-ಗಗನಾ ಜೋಡಿ
ಒಂದು ಸೀರಿಯಲ್ ಅಥವಾ ರಿಯಾಲಿಟಿ ಷೋನಲ್ಲಿ ಒಂದು ಜೋಡಿ ಫೇಮಸ್ ಆಗಿಬಿಡ್ತು ಎಂದ್ರೆ ಸಾಕು, ಅವರ ಮದುವೆಯನ್ನೇ ಮಾಡಿಸಿಬಿಡ್ತಾರೆ ವೀಕ್ಷಕರು. ಮಹಾನಟಿ ಸಂದರ್ಭದಲ್ಲಿಯೂ ಗಿಲ್ಲಿ ಮತ್ತು ಗಗನಾ ಜೋಡಿ ಮದ್ವೆ ಆಗುತ್ತದೆ ಎನ್ನುವ ಸುದ್ದಿ ಹರಡಿತ್ತು.
67
ಸಪ್ಪಗಾಗಿದ್ದ ಗಿಲ್ಲಿ
ಅಷ್ಟಕ್ಕೂ, ಗಿಲ್ಲಿ ಯಾವಾಗಲೂ ಗಗನಾ ಕಾಲು ಎಳೆಯುತ್ತಲೇ ಇರುತ್ತಾರೆ. ಇಬ್ಬರೂ ಹಲವು ಷೋನಲ್ಲಿ ಒಟ್ಟಿಗೇ ಕಾಣಿಸಿಕೊಮಡಿದ್ದರು. ʻಭರ್ಜರಿ ಬ್ಯಾಚುಲರ್ಸ್ʼ ಶುರುವಿನ ಎಪಿಸೋಡ್‌ಗಳಲ್ಲಿ ಡ್ರೋನ್ ಪ್ರತಾಪ್, ಗಗನಾಗೆ ವಿಶೇಷವಾಗಿ ಪ್ರಪೋಸ್ ಮಾಡಿದ್ದನ್ನು ನೋಡೋಕಾಗದೇ, ಗಿಲ್ಲಿ ಸಪ್ಪಗಾದಂತೆ ನಟಿಸಿದ್ದರು. ಆದ್ದರಿಂದ ಇವೆಲ್ಲವೂ ನಿಜ ಎಂದೇ ಅಂದುಕೊಂಡಿದ್ದಾರೆ ವೀಕ್ಷಕರು.
77
ಗಿಲ್ಲಿ ಕಾಲೆಳೆಯುತ್ತಿರೋ ನೆಟ್ಟಿಗರು
ಇದೇ ಕಾರಣಕ್ಕೆ ಗಗನಾ ಜೊತೆಗಿನ ರೊಮಾನ್ಸ್ ವಿಡಿಯೋ ಶೇರ್ ಮಾಡಲಾಗಿದೆ. ಗಗನಾಗೆ ಮೋಸ ಮಾಡಿ ಕಾವ್ಯಾ ಜೊತೆ ಲವ್ವಿಡವ್ವಿ ಮಾಡೋದಾ, ಇದು ಸರಿಯಲ್ಲ ಎಂದು ನೆಟ್ಟಿಗರು ಗಿಲ್ಲಿಯ ಕಾಲೆಳೆಯುತ್ತಿದ್ದಾರೆ. ಆದರೆ, ಇವ್ಯಾವುದೂ ಸದ್ಯ ಗಿಲ್ಲಿಗೆ ಗೊತ್ತಿಲ್ಲ. ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ನೋಡಬೇಕಷ್ಟೇ.