ಮಗನ ಜೊತೆ ಶಾಪಿಂಗ್ ಮಾಡಿದ ಶ್ವೇತಾ ಚಂಗಪ್ಪ….. ಡೇಟಿಂಗ್ ಕಥೆ ಹೀಗಿತ್ತಂತೆ!

Published : Mar 30, 2024, 03:49 PM ISTUpdated : Mar 30, 2024, 03:51 PM IST

ನಟಿ- ನಿರೂಪಕಿಯಾಗಿ ಜನಪ್ರಿಯತೆ ಪಡೆದಿರುವ ಶ್ವೇತಾ ಚೆಂಗಪ್ಪ ಮಗನ ಜೊತೆಗೆ ಸಮಯ ಕಳೆದಿದ್ದಾರೆ. ಮಗನ ಜೊತೆಗೆ ಡೇಟಿಂಗ್ ಎಂದು ಬರೆದುಕೊಂಡಿರುವ ನಟಿ ಮುದ್ದು ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

PREV
17
ಮಗನ ಜೊತೆ ಶಾಪಿಂಗ್ ಮಾಡಿದ ಶ್ವೇತಾ ಚಂಗಪ್ಪ….. ಡೇಟಿಂಗ್ ಕಥೆ ಹೀಗಿತ್ತಂತೆ!

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ ಮತ್ತು ನಿರೂಪಕಿಯಾಗಿ ಜನಪ್ರಿಯತೆ ಪಡೆದ ಕೊಡಗಿನ ಬೆಡಗಿ ಶ್ವೇತಾ ಚಂಗಪ್ಪ (Shwetha Changappa). ಜನರು ಇವರು ನಟನೆಗೂ ಭೇಷ್ ಅಂದಿದ್ದರು, ನಿರೂಪಣೇಗೂ ಸೈ ಅಂದಿದ್ದರು. 
 

27

ಸೂಪರ್ ಕ್ವೀನ್, ಜೋಡಿ ನಂ 1, ಛೋಟಾ ಚಾಂಪಿಯನ್ ಮೊದಲಾದ ರಿಯಾಲಿಟಿ ಶೋಗಳಲ್ಲಿ ನಿರೂಪಕಿ (Anchor) ಜನಮನಗೆದ್ದ ಶ್ವೇತಾ ಚಂಗಪ್ಪ, ಸದ್ಯ ನಿರೂಪಣೆಯಿಂದ ಬ್ರೇಕ್ ಪಡೆದು ಮಗನ ಜೊತೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ. 
 

37

ನಟಿ ಶ್ವೇತಾ ಚಂಗಪ್ಪ ಮಗನ ಜೊತೆಗಿನ ಮುದ್ದು ಮುದ್ದಾದ ಫೋಟೋಗಳನ್ನು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದು, ಮಗನ ಜೊತೆ ಶಾಪಿಂಗ್ ಡೇಟ್ ಗೆ (shopping date) ಹೋಗಿರೋದಾಗಿ ತಿಳಿಸಿದ್ದಾರೆ. 
 

47

ನನ್ನ ನಗು , ನನ್ನ ಮಗ ಜಿಯಾನ್ ಅಯ್ಯಪ್ಪ. ನಾನು ಮತ್ತು ನನ್ನ ಮಗ ಜೊತೆಯಾಗಿ ಡೇಟ್ ಗೆ ಹೋದೆವು.  ನಾನು ನನ್ನ ಡೇಟ್ ನ್ನು ಶಾಪಿಂಗ್ ಪೂರ್ತಿ ಎತ್ತಿಕೊಂಡೇ ಇರ್ಬೇಕಾಗಿತ್ತು ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. 
 

57

ನಮ್ಮ ಪುಟಾಣಿಗಳ ಜೊತೆಗೆ ಸಮಯ ಕಳೇಯೋದೇ ಜೀವನದ ಬೆಸ್ಟ್ ದಿನಗಳು. ಎಲ್ಲಾ ಎಮೋಷನ್ ಗಳು ಬೆರೆತು ಹೋಗುತ್ತವೆ ಎಂದು ಬರೆದುಕೊಂಡಿದ್ದಾರೆ. ಅಮ್ಮ ಮಗನ ಜೋಡಿ ನೋಡಿ ನೆಟ್ಟಿಗರು ವಾವ್ ವಾವ್ ಎನ್ನುತ್ತಿದ್ದಾರೆ. 
 

67

ಅಮ್ಮ ಮಗ ತುಂಬಾನೆ ಮುದ್ದಾಗಿ ಕಾಣಿಸ್ತಿದ್ದೀರಿ. ಇಬ್ಬರ ಜೋಡಿ ಚೆನ್ನಾಗಿದೆ. ಮೇಡಂ ನೀವು ನಯನತಾರ ತರ ಕಾಣಿಸ್ತೀದೀರಾ… ಪ್ರಪಂಚದಲ್ಲೇ ಅತ್ಯಂತ ಸುಂದರಿ ನೀವೆ ಎಂದೆಲ್ಲಾ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. 
 

77

ಚೋಟಾ ಚಾಂಪಿಯನ್ (Chota Champion) ನಿರೂಪಣೆ ಮಾಡಿದ ಬಳಿಕ ಶ್ವೇತಾ ಎಲ್ಲೂ ಕಂಡು ಬಂದಿಲ್ಲ. ಸದ್ಯ ಟ್ರಾವೆಲ್ ಮಾಡುತ್ತಾ, ಫ್ಯಾಮಿಲಿ ಜೊತೆ ಲೈಫ್ ಎಂಜಾಯ್ ಮಾಡ್ತಿದ್ದಾರೆ. ಮುಂದೆ ಯಾವ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಲಿದ್ದಾರೆ ಕಾದು ನೋಡಬೇಕು. 
 

click me!

Recommended Stories