ಹರ ಹರ ಮಹಾದೇವದಲ್ಲಿ ಸಂಗೀತಾ ಶೃಂಗೇರಿ ಇದ್ರು, ಬಿಗ್ ಬಾಸ್ ಸ್ಪರ್ಧಿಗಳ ಫಸ್ಟ್ ಸೀರಿಯಲ್ ಯಾವುದು?

Published : Dec 13, 2023, 05:16 PM IST

ಈ ಬಾರಿ ಬಿಗ್ ಬಾಸ್ ಗಲಾಟೆಗಳ ಮೂಲಕವೇ ಜನರಿಗೆ ಮನೋರಂಜನೆ ನೀಡಿದ್ದು ಜಾಸ್ತಿ. ಅದರಿಂದಲೇ ಹೆಚ್ಚು ಸುದ್ದಿಯಾದ ಸೀಸನ್ ಇದು. ಈ ಸೀಸನ್ ನಲ್ಲಿ ಹೆಚ್ಚಿನವರು ನಟರೇ ಆಗಿದ್ದಾರೆ. ಹಾಗಿದ್ರೆ ಬನ್ನಿ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಗಳ ಮೊದಲು ನಟಿಸಿದ ಧಾರಾವಾಹಿ ಯಾವುದೆಂದು ನೋಡಿ ಬರೋಣ.   

PREV
110
ಹರ ಹರ ಮಹಾದೇವದಲ್ಲಿ ಸಂಗೀತಾ ಶೃಂಗೇರಿ ಇದ್ರು, ಬಿಗ್ ಬಾಸ್ ಸ್ಪರ್ಧಿಗಳ ಫಸ್ಟ್ ಸೀರಿಯಲ್ ಯಾವುದು?

ಕಾರ್ತಿಕ್ ಮಹೇಶ್ (Karthik Mahesh): 
ಕಾರ್ತಿಕ್ ಮಹೇಶ್ ನಟನಾ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಗುರುತಿಸಿಕೊಂಡು ಬಂದವರು. ಇವರು ಕನ್ನಡ ಮಾತ್ರವಲ್ಲದೇ, ಇತರ ಭಾಷೆಗಳನ್ನೂ ಸೇರಿ ಸುಮಾರು 30ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇವರು ಮೊದಲು ನಾಯಕನಾಗಿ ನಟಿಸಿದ ಸೀರಿಯಲ್ ಖುಷಿ. 

210

ಸಂಗೀತ ಶೃಂಗೇರಿ (Sangeetha Sringeri)
ಸಂಗೀತ ಶೃಂಗೇರಿ ಸಹ ಕಿರುತೆರೆ ಮೂಲಕವೇ ನಟನಾ ಲೋಕಕ್ಕೆ ಕಾಲಿಟ್ಟಿದ್ದು. ಸಂಗೀತಾ ಹರಹರ ಮಹದೇವ ಸೀರಿಯಲ್ ನಲ್ಲಿ ಸತಿಯ ಪಾತ್ರ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. 

310

ತನಿಷಾ ಕುಪ್ಪಂದ (Tanisha Kuppanda)
ತನಿಷಾ ಕುಪ್ಪಂದ ಸೀರಿಯಲ್ ಮತ್ತು ಹಲವು ಸಿನಿಮಾಗಳಲ್ಲಿ ನಟಿಸಿ ಸುದ್ದಿಯಾಗಿದ್ದರು. ಇವರು ಹಳ್ಳಿ ದುನಿಯಾ ಎನ್ನುವ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಿತರಾಗಿದ್ದರು. ಅಶ್ವಿನಿ ನಕ್ಷತ್ರ, ಸಾಕ್ಷಿ ಎನ್ನುವ ಸೀರಿಯಲ್ ಗಳಲ್ಲೂ ಇವರು ನಟಿಸಿದ್ದಾರೆ. 

410

ವಿನಯ್ ಗೌಡ (Vinay Gowda)
ವಿನಯ್ ಗೌಡರನ್ನು ಜನರು ಗುರುತಿಸಿದ್ದು ಶಿವನಾಗಿ. ಒಂದೆರಡು ಸೀರಿಯಲ್ ಗಳಲ್ಲಿ ಶಿವನ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದ ವಿನಯ್, ಇತ್ತೀಚಿನ ದಿನಗಳಲ್ಲಿ ನೆಗೆಟಿವ್ ಶೇಡ್ ಗಳಲ್ಲಿ ಹೆಚ್ಚಾಗಿ ಕಾಣಿಸುತ್ತಿದ್ದರು. ಆದರೆ ಇವರು ನಟಿಸಿದ ಮೊದಲ ಧಾರಾವಾಹಿ ಅಂಬಾರಿ ಅನ್ನೋದು ಹೆಚ್ಚಿನ ಜನಕ್ಕೆ ತಿಳಿದಿಲ್ಲ. 

510

ನಮ್ರತಾ ಗೌಡ (Namratha Gowda)
ಬಾಲ ನಟಿಯಾಗಿ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಮ್ರತಾ ಗೌಡ, ಹೆಚ್ಚಾಗಿ ಗಮನ ಸೆಳೆದದ್ದು, ಪುಟ್ಟ ಗೌರಿ ಮದುವೆ ಮತ್ತು ನಾಗಿಣಿ ಸೀರಿಯಲ್ ಮೂಲಕ. ಆದರೆ ಇವರು ನಟಿಸಿದ ಮೊದಲ ಧಾರಾವಾಹಿ ಕೃಷ್ಣ ರುಕ್ಮಿಣಿ. 

610

ಮೈಕಲ್ ಅಜಯ್ (Michel Ajay)
ಸದ್ಯ ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ಮೈಕೆಲ್ ಅಜಯ್ ಬಿಗ್ ಬಾಸ್ ಗೆ ಬರೋ ಮುನ್ನ ಕನ್ನಡಿಗರಿಗೆ ಅಷ್ಟಾಗಿ ಪರಿಚಯವೇ ಇಲ್ಲಾಯ್ತು. ಇವರು ಮೊದಲಿಗೆ ರೋಡೀಸ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಆಗುವ ಮೂಲಕ ಸುದ್ದಿಯಾಗಿದ್ದರು. 

710

ಸ್ನೇಹಿತ್ ಗೌಡ (Snehith Gowda)
ಸ್ನೇಹಿತ್ ಗೌಡ ಒಂದೇ ಸೀರಿಯಲ್‌ನಲ್ಲೂ ನಟಿಸಿದ್ದರೂ ಬಿಗ್ ಬಾಸ್‌ಗೆ ಬಂದ ನಂತರ ಹೆಚ್ಚು ಜನಪ್ರಿಯತೆ ಪಡೆದರು. ಇವರು ನಮ್ಮನೆ ಯುವರಾಣಿ ಸೀರಿಯಲ್‌ನಲ್ಲಿ ಪ್ರಣಮ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

810

ಸಿರಿ (Sirija)
ಕನ್ನಡದ ಹಲವಾರು ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಮಿಂಚಿದ ಸಿರಿಯವರು ಸದ್ಯ ಪೋಷಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಬಿಕಾ ಇವರು ನಟಿಸಿದ ಮೊದಲ ಧಾರಾವಾಹಿ. ರಂಗೋಲಿ ಧಾರಾವಾಹಿಯಲ್ಲಿ ಇವರು ಮಿಂಚಿದ್ದರು. 

910

ನೀತು ವನಜಾಕ್ಷಿ (Neethu Vanajakshi)
ಟ್ರಾನ್ಸ್ ಕ್ವೀನ್ ಪ್ರಶಸ್ತಿ ಪಡೆದಿದ್ದ ಮಾಡೆಲ್ ನೀತು ವನಜಾಕ್ಷಿ, ಕನ್ನಡ ಜನರಿಗೆ ಹತ್ತಿರವಾದದ್ದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಸೂಪರ್ ಕ್ವೀನ್ ಮೂಲಕ. 

1010

ತುಕಾಲಿ ಸಂತೋಷ್ (Tukali Santosh)
ತಮ್ಮ ಕಾಮಿಡಿ ಮೂಲಕವೇ ಬಿಗ್ ಬಾಸ್‌ನಲ್ಲಿ ಜನಪ್ರಿಯತೆ ಪಡೆದಿರುವ ತುಕಾಲಿ ಸಂತೋಷ್ ಮೊದಲಿಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳಲ್ಲಿ ನಟಿಸುವ ಮೂಲಕ ಪರಿಚಿತರಾದರು. 

Read more Photos on
click me!

Recommended Stories