ನಿಶ್ಚಿತಾರ್ಥ ವಾರ್ಷಿಕೋತ್ಸವದ ಫೋಟೋ ಹಂಚಿಕೊಂಡ ನಟಿ ಶೋಭಾ ಶೆಟ್ಟಿ

Published : Apr 25, 2025, 03:54 PM ISTUpdated : Apr 25, 2025, 03:59 PM IST

ಕನ್ನಡ ನಟಿ ಶೋಭಾ ಶೆಟ್ಟಿ ತಮ್ಮ ನಿಶ್ಚಿತಾರ್ಥದ ವಾರ್ಷಿಕೋತ್ಸವವನ್ನು ಸಾಮಾಜಿಕ ಮಾಧ್ಯಮದಲ್ಲಿ ಆಚರಿಸಿಕೊಂಡಿದ್ದಾರೆ. ಐದು ವರ್ಷಗಳ ಹಿಂದೆ ಭೇಟಿಯಾದ ಈ ಜೋಡಿ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

PREV
16
ನಿಶ್ಚಿತಾರ್ಥ ವಾರ್ಷಿಕೋತ್ಸವದ ಫೋಟೋ ಹಂಚಿಕೊಂಡ ನಟಿ ಶೋಭಾ ಶೆಟ್ಟಿ

ತೆಲುಗು ಭಾಷೆಯಲ್ಲಿ ಬ್ಯುಸಿಯಾಗಿರುವ ಕನ್ನಡ ನಟಿ ಶೋಭಾ ಶೆಟ್ಟಿ ಅವರ ನಿಶ್ಚಿತಾರ್ಥವಾಗಿ ಒಂದುವರ್ಷವಾಗಿದ್ದು, ಈ ಹಿನ್ನೆಲೆಯಲ್ಲಿ ವಾರ್ಷಿಕೋತ್ಸವದ ಫೋಟೋಗಳು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಹೇ! ಪಾಪು, ನಮ್ಮ ಮೊದಲ ವರ್ಷದ ನಿಶ್ಚಿತಾರ್ಥ ವಾರ್ಷಿಕೋತ್ಸವ! ಭೇಟಿಯಾಗಿ ಸುಮಾರು 5 ವರ್ಷಗಳಾಗಿವೆ!ಅನಂತ ಪ್ರೀತಿ. ದಿನವಿಡೀ ವಾತ್ಸಲ್ಯ ಮತ್ತು ಪ್ರತಿದಿನ ಆರಾಧನೆ! ಮೊದಲ ವರ್ಷದ ನಿಶ್ಚಿತಾರ್ಥ ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿ! ಎಂದು ಬರೆದುಕೊಂಡಿದ್ದಾರೆ
 

26

ಕನ್ನಡದ ಹಿಟ್‌ ಸೀರಿಯಲ್‌ ಅಗ್ನಿಸಾಕ್ಷಿ ಮೂಲಕ ಪರಿಚಯವಾದ ನಟಿ ಆ ಬಳಿಕ ಸಿನೆಮಾಗಳಲ್ಲಿ ಕಾಣಿಸಿಕೊಂಡು ತೆಲುಗು ಕಿರುತೆರೆಯಲ್ಲಿ ಫೇಮಸ್‌ ನಟಿಯಾಗಿ ಬೆಳೆದರು. ತೆಲುಗು ಬಿಗ್‌ಬಾಸ್‌ ಬಳಿಕ ಮತ್ತಷ್ಟು ಹೆಸರು ಮಾಡಿದ ನಟಿ ಬಳಿಕ ಕನ್ನಡ ಬಿಗ್ಬಾಸ್‌ 11 ನಲ್ಲೂ ಕಾಣಿಸಿಕೊಂಡಿದ್ದರು. ಈಗ ಕಲರ್ಸ್ ಕನ್ನಡದಲ್ಲಿ ಬರುತ್ತಿರುವ ರಿಯಾಲಿಟಿ ಶೋ ಬಾಯ್ಸ್ ವರ್ಸಸ್‌ ಗರ್ಲ್ ನಲ್ಲೂ ಕನ್ನಡದವರಿಗೆ ಹತ್ತಿರವಾಗಿದ್ದಾರೆ.

36

ಇನ್ನು ತೆಲುಗು ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿಯಾಗಿ ಅದ್ಭುತವಾಗಿ ಸ್ಪರ್ಧಿಸಿದ್ದಲ್ಲದೇ ಉಳಿದ ಸ್ಪರ್ಧಿಗಳಿಗೆ ಟಫ್ ಕಾಂಪಿಟೀಶನ್ ಕೊಟ್ಟಿದ್ದರು. ಟಾಪ್ ಏಳು ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಶೋಭಾ ಶೆಟ್ಟಿ ಫಿನಾಲೆಗೆ ಕೇವಲ ಒಂದು ವಾರ ಇರುವಾಗ ಹೊರಬಂದಿದ್ದರು. ಬಿಬಿಕೆ 11 ರಲ್ಲೂ ಒಂದುವಾರ ಇದ್ದು ಅನಿವಾರ್ಯ ಕಾರಣಗಳಿಂದ ಹೊರ ಬಂದಿದ್ದರು.

46

ಕನ್ನಡ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕಿ ಸನ್ನಿಧಿ ತಂಗಿ ತನು ಪಾತ್ರದಲ್ಲಿ ಅಭಿನಯಿಸಿದ್ದರು. ಇದಲ್ಲದೆ ಕನ್ನಡದಲ್ಲಿ ‘ನಮ್ಮ ರುಕ್ಕು’ ಧಾರಾವಾಹಿಯಲ್ಲಿ ನಟಿಸಿದ್ದ ಶೋಭಾ ಶೆಟ್ಟಿ ಅವರು ತಮ್ಮ ಸಹ ನಟ ಯಶವಂತ್ ರೆಡ್ಡಿ ಎಂಬವರ ಜೊತೆಗೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

56

ಶೋಭಾ ಶೆಟ್ಟಿ, ಯಶವಂತ್ ರೆಡ್ಡಿ ಅವರದ್ದು ಲವ್ ಮ್ಯಾರೇಜ್. ತೆಲುಗಿನಲ್ಲಿ  ಇಬ್ಬರೂ ಕೂಡ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದರು. ಈ ವೇಳೆ ಶೋಭಾ, ಯಶವಂತ್‌ ಮಧ್ಯೆ ಸ್ನೇಹ ಬೆಳೆದು, ಅದು ಪ್ರೀತಿಗೆ ತಿರುಗಿತ್ತು. ಆ ನಂತರ ಈ ಜೋಡಿ ಕುಟುಂಬದ ಒಪ್ಪಿಗೆ ಪಡೆದು  ವಿವಾಹಕ್ಕೆ ತಯಾರಾಗಿದೆ. ಕಾರ್ತಿಕ ದೀಪಂ' ಧಾರಾವಾಹಿಯಲ್ಲಿ ಆದಿತ್ಯ ಪಾತ್ರದಲ್ಲಿ ಯಶವಂತ್ ನಟಿಸಿದ್ದರು. ಅದೇ ಧಾರಾವಾಹಿಯಲ್ಲಿ ಶೋಭಾ ಶೆಟ್ಟಿ ನಾಯಕಿಯಾಗಿದ್ದರು. ಇಬ್ಬರ ಪ್ರೀತಿಯನ್ನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ತೆಲುಗು ಬಿಗ್‌ಬಾಸ್ ಶೋ ನಲ್ಲಿ ನಿರೂಪಕ ನಾಗಾರ್ಜುನ ಅವರು ಶೋಭಾರ ತಂದೆ ಜೊತೆಗೆ ಯಶವಂತ್‌ರನ್ನು ವೇದಿಕೆಗೆ ಕರೆದಾಗ. ಅವರ ಲವ್ ಸೀಕ್ರೆಟ್ ರಿವೀಲ್ ಆಯ್ತು.
 

66

ಕನ್ನಡದಲ್ಲಿ ಪಡುವಾರಹಳ್ಳಿ ಪಡ್ಡೆಗಳು ಧಾರಾವಾಹಿ ಮೂಲಕ ಶೋಭಾ ಶೆಟ್ಟಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಕನ್ನಡದಲ್ಲಿ ಶೋಭಾ ಶೆಟ್ಟಿ ಅವರು ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಶೋಭಾ ಶೆಟ್ಟಿ ಅವರು ಹೈದರಾಬಾದ್‌ನಲ್ಲಿಯೇ ಸ್ವಂತ ಮನೆ ಖರೀದಿಸಿದ್ದು ಮದುವೆಯಾದ ಮೇಲೆ ಅಲ್ಲೇ ಇರಲಿದ್ದಾರಂತೆ. ಇನ್ನು ಎರಡು ಭಾಷೆಗಳಲ್ಲಿ ಯೂಟ್ಯೂಟ್‌ ನಡೆಸುತ್ತಿದ್ದಾರೆ. ಸ್ವಂತ ಸಲೂನ್, ಬ್ಯೂಟಿ, ಮೇಕಪ್ ಬಿಸಿನೆಸ್ ಕೂಡ ಹೊಂದಿದ್ದಾರೆ.
 

Read more Photos on
click me!

Recommended Stories