ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾದ ಕನ್ನಡ ಕಿರುತೆರೆ ನಟ -ನಟಿಯರು

Published : Apr 16, 2025, 12:49 PM ISTUpdated : Apr 16, 2025, 12:54 PM IST

ಈ ವರ್ಷದ ಆರಂಭದಿಂದಲೂ ಕನ್ನಡ ಕಿರುತೆರೆಯ ಹಲವು ನಟ -ನಟಿಯರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ವರ್ಷ ಮುಗಿಯೋದ್ರೊಳಗೆ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.   

PREV
110
ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾದ ಕನ್ನಡ ಕಿರುತೆರೆ ನಟ -ನಟಿಯರು

ಕನ್ನಡ ಕಿರುತೆರೆಯ ನಟ -ನಟಿಯರ ಜೀವನದಲ್ಲಿ ಈ ವರ್ಷ ಸುಗ್ಗಿ ಕಾಲ. ಯಾಕಂದ್ರೆ, ಈ ವರ್ಷ ಕನ್ನಡದ ಹಲವು ನಟ ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಹಲವು ನಟ-ನಟಿಯರು ನಿಶ್ಚಿತಾರ್ಥ (engagement) ಮಾಡಿಕೊಂಡಿದ್ದು, ಶೀಘ್ರದಲ್ಲಿ ವಿವಾಹವಾಗುವ ಸೂಚನೆ ನೀಡಿದ್ದಾರೆ. 
 

210

ವೈಷ್ಣವಿ ಗೌಡ (Vaishnavi Gowda) :

ಅಗ್ನಿ ಸಾಕ್ಷಿ, ಮಹಾದೇವಿ, ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಅನುಕೂಲ್‌ ಮಿಶ್ರಾ ಜೊತೆ ಅದ್ಧೂರಿಯಾಗಿ ಇತ್ತಿಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅನುಕೂಲ್ ಮಿಶ್ರಾ ಏರ್ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮದುವೆ ಯಾವಾಗ ಅನ್ನೋದು ತಿಳಿದು ಬಂದಿಲ್ಲ. 
 

310

ಶಮಂತ್ ಬ್ರೋ ಗೌಡ : 
ಲಕ್ಷ್ಮೀ ಬಾರಮ್ಮ ಸೀರಿಯಲ್ ಹಾಗೂ ಬಿಗ್ ಬಾಸ್ ಮೂಲಕ ಸದ್ದು ಮಾಡಿದ ನಟ ಹಾಗೂ ರಾಪರ್ ಆಗಿರುವ ಶಮಂತ್ ಬ್ರೋ ಗೌಡ (Shamanth bro gowda), ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ ಮೇಘನಾ ಜೊತೆ ಇತ್ತೀಚೆಗೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. 

410

ರಂಜಿತ್ ಕುಮಾರ್  : 
ನಟ, ʼಬಿಗ್‌ ಬಾಸ್‌ ಕನ್ನಡ ಸೀಸನ್‌ 11ʼ ಸ್ಪರ್ಧಿ ರಂಜಿತ್‌ ಹಾಗೂ ಮಾನಸಾ ಗೌಡ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇವರ ವಿವಾಹ ಕೂಡ ಶೀಘ್ರದಲ್ಲೇ ಇದೆ ಎನ್ನಲಾಗುತ್ತಿದೆ. 

510

ಶೋಭಾ ಶೆಟ್ಟಿ : 
ಕನ್ನಡ ಕಿರುತೆರೆ ಹಾಗೂ ತೆಲುಗು ಕಿರುತೆರೆಯಲ್ಲಿ ಮಿಂಚಿ, ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ಮೂಲಕ ಮೋಡಿ ಮಾಡುತ್ತಿರುವ ಚೆಲುವೆ ಶೋಭಾ ಶೆಟ್ಟಿ (Shobha Shetty) ತೆಲುಗು ನಟ ಯಶವಂತ್ ಜೊತೆ ಕಳೆದ ವರ್ಷ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವರ್ಷ ಈ ಜೋಡಿ ಮದುವೆಯಾಗಲಿದೆ ಎನ್ನಲಾಗುತ್ತಿದೆ. 

610

ಸುಪ್ರೀತಾ ಸತ್ಯ ನಾರಾಯಣ್ : 
ʼಸೀತಾ ವಲ್ಲಭʼ, ‘ಸರಸು’ ಸೇರಿ ಹಲವು ಸೀರಿಯಲ್ ಹಾಗೂ ಸಿನಿಮಾಗಳ ಹೀರೋಯಿನ್ ಸುಪ್ರೀತಾ ಸತ್ಯನಾರಾಯಣ್‌ ಅವರು‌ ಸಾಫ್ಟ್‌ವೇರ್‌ ಉದ್ಯೋಗಿ ಚಂದನ್‌ ಶೆಟ್ಟಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವರ್ಷವೇ ಈ ಜೋಡಿಯ ಮದುವೆ ಇರಬಹುದು.

710

ಶೀಲಾ ಎಚ್ : 
ಗಿಣಿ ರಾಮ, ಇಂತಿ ನಿಮ್ಮ ಆಶಾ, ರಾಧಿಕಾ ಸೀರಿಯಲ್ ನಲ್ಲಿ ನಟಿಸಿ, ಸದ್ಯ ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿಯ ತಂಗಿ ಶ್ರುತಿ ಪಾತ್ರದಲ್ಲಿ ಮಿಂಚುತ್ತಿರುವ ನಟಿ ಶೀಲಾ ಎಚ್. ಇತ್ತೀಚೆಗೆ ಚಿರಂತ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

810

ಯದು ಶ್ರೇಷ್ಠಾ : 
ಮಿಥುನ ರಾಶಿ ಧಾರಾವಾಹಿಯಲ್ಲಿ ಸಮರ್ಥ್ ಪಾತ್ರದ ಮೂಲಕ ಗಮನ ಸೆಳೆದ ನಟ ಯದು ಶ್ರೇಷ್ಠ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹುಡುಗಿ ಯಾರು ಎನ್ನುವ ಕುರಿತು ಮಾಹಿತಿ ಇಲ್ಲ. 
 

910

ಐಶ್ವರ್ಯ ರಂಗರಾಜನ್ : 
ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಜನಪ್ರಿಯತೆ ಪಡೆದು, ಇಂದು ಸ್ಯಾಂಡಲ್ ವುಡ್ ನ ಮೋಸ್ಟ್ ಸೆನ್ಸೇಶನಲ್ ಗಾಯಕಿಯಾಗಿರುವ ಐಶ್ವರ್ಯ ರಂಗರಾಜನ್ (aishwarya rangarajan) ಇತ್ತೀಚೆಗೆ ಮಂಗಳೂರಿನ ಯುವಕನ ಜೊತೆ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 

1010

ಗೌತಮಿ ಜಯರಾಮ್ : 
ದೃಷ್ಟಿಬೊಟ್ಟು, ಭೂಮಿಗೆ ಬಂದ ಭಗವಂತ, ಮಹಾಕಾಳಿ ಧಾರಾವಾಹಿ ನಟಿ ಗೌತಮಿ ಜಯರಾಮ್‌ ಅವರು  ಉದಯ್‌ ರಾಜ್‌ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 

Read more Photos on
click me!

Recommended Stories