ಅಮ್ಮಂದಿರ ಜನ್ಮದಿನ ಆಚರಿಸಿದ ಶ್ರುತಿ, ಹಿರಿಯ ನಟಿಯರು ಭಾಗಿ!

Published : Apr 16, 2025, 11:59 AM ISTUpdated : Apr 16, 2025, 12:05 PM IST

ನಟಿ ಶ್ರುತಿ ತಮ್ಮ ಅಮ್ಮಂದಿರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಚಿತ್ರರಂಗದ ಹಿರಿಯ ನಟಿಯರು ಕೂಡ ಈ ಸಂಭ್ರಮದಲ್ಲಿ ಭಾಗವಹಿಸಿದ್ದರು. ಮಾಳವಿಕಾ ಅವಿನಾಶ್, ಹೇಮಾ ಚೌಧರಿ, ಜಯಮಾಲಾ ಮುಂತಾದವರು ಉಪಸ್ಥಿತರಿದ್ದರು.

PREV
15
ಅಮ್ಮಂದಿರ ಜನ್ಮದಿನ ಆಚರಿಸಿದ ಶ್ರುತಿ, ಹಿರಿಯ ನಟಿಯರು ಭಾಗಿ!

ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಶ್ರುತಿ ಮಂಗಳವಾರ ತಮ್ಮ ಅಮ್ಮಂದಿರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ. ಈ ವೇಳೆ ಚಿತ್ರರಂಗದ ಹಿರಿಯ ನಟಿಯುರು ಕೂಡ ಭಾಗವಹಿಸಿದ್ದಾರೆ.

25

ಮನೆಯಲ್ಲಿಯೇ ನಡೆದ ಕಾರ್ಯಕ್ರಮದಲ್ಲಿ ಕೇಕ್‌ ಕತ್ತರಿಸಿ ಅಮ್ಮಂದಿರರಾದ ರಾಧಾ ಹಾಗೂ ರುಕ್ಷ್ಮಿಣಿ ಅವರ ಜನ್ಮದಿನವನ್ನು ಶ್ರುತಿ ಆಚರಿಸಿದ್ದಾರೆ. ಈ ವೇಳೆ ಅವರ ಪುತ್ರಿ ಗೌರಿ ಕೂಡ ಹಾಜರಿದ್ದರು.

35

ಸಿನಿಮಾ, ರಾಜಕೀಯಾ ಹಾಗೂ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯರಾಗಿದ್ದು, ತಮ್ಮ ವೈಯಕ್ತಿಕ ಜೀವನದ ಬಗ್ಗೆ, ಅವಳಿ ತಾಯಿಯಂದಿರ ಬಗ್ಗೆ ಅಪರೂಪದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

45

ಜನ್ಮದಿನದ ಸಂಭ್ರಮದಲ್ಲಿ ಮಾಳವಿಕಾ ಅವಿನಾಶ್‌, ಹೇಮಾ ಚೌಧರಿ ಹಾಗೂ ಹಿರಿಯ ನಟಿ ಜಯಮಾಲಾ ಅವರು ಕೂಡ ಈ ಕಾರ್ಯಕ್ರಮದಲ್ಲಿದ್ದರು. ಬಳಿಕ ಮನೆಯಲ್ಲಿ ಜೊತೆಯಲ್ಲಿಯೇ ಊಟ ಮಾಡಿ ಖುಷಿಪಟ್ಟಿದ್ದಾರೆ.

ವಿಡಿಯೋ ಲೀಕ್‌ ಬಳಿಕ ಸಾರ್ವಜನಿಕವಾಗಿ ಕಾಣಿಸಿದ ನಟಿ ಶ್ರುತಿ!

55

ಎಲ್ಲರಿಗೂ ಗೊತ್ತಿರುವಂತೆ ಶ್ರುತಿ ಅವರ ತಂದೆ ಜಿವಿ ಕೃಷ್ಣ ಹಾಗೂ ತಾಯಿಯಂದಿರರಾದ ರಾಧಾ ಹಾಗೂ ರುಕ್ಷ್ಮಿಣಿ ರಂಗಭೂಮಿ ಹಿನ್ನಲೆಯುಳ್ಳವರಾಗಿದ್ದಾರೆ. ಎರಡು ವರ್ಷಗಳ ಹಿಂದೆ ತಂದೆ-ತಾಯಿಯರ ಐವತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನೂ ಶ್ರುತಿ ಆಚರಿಸಿದ್ದರು.

ಕಾಸ್ಟಿಂಗ್ ಕೌಚ್‌ ವೀಡಿಯೊ ಲೀಕ್ ಆದ ನಟಿ ಶ್ರುತಿ ನಾರಾಯಣನ್‌ ಅವರ ಚಂದದ 10 ಫೋಟೊಗಳು!

Read more Photos on
click me!

Recommended Stories