ಕನ್ನಡ ಕಿರುತೆರೆಯಲ್ಲಿ ಹಿಸ್ಟರಿ ಕ್ರಿಯೇಟ್ ಮಾಡಿರುವ ಕಾಮಿಡಿ ಶೋ ಮಜಾ ಟಾಕೀಸ್‌ನಲ್ಲಿ ರಾಣಿ ಮತ್ತು ವರಲಕ್ಷ್ಮಿ ಎಲ್ಲರಿಗೂ ಇಷ್ಟವಾದ ಕಾಂಬಿನೇಷನ್.
ಕಳೆದೆರಡು ವರ್ಷಗಳಿಂದ ಶ್ವಾಸಕೋಶದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡದ ಖ್ಯಾತ ನಿರೂಪಕಿ ಅಪರ್ಣಾ(58) ಗುರುವಾರ(ಜು.11) ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಅಪರ್ಣಾ ಸಾವಿನ ಸುದ್ದಿಯಿಂದ ಕನ್ನಡಿಗರು ಆಘಾತಕ್ಕೆ ಒಳಗಾಗಿದ್ದಾರೆ. ಅರ್ಪಣ ಜೊತೆ ತುಂಬಾ ಕ್ಲೋಸ್ ಆಗಿದ್ದ ಶ್ವೇತಾ ಚಂಗಪ್ಪ ಭಾವುಕ ಪೋಸ್ಟ್ ಬರೆದುಕೊಂಡಿದ್ದಾರೆ.
ಅಪರ್ಣ ಅಕ್ಕ RIP. ಬಹುಶ ನಿಮ್ಮನ್ನು ಅಕ್ಕ ಅಂತ ಕರೆದಷ್ಟು ನಾನು ಯಾರನ್ನೂ ಅಕ್ಕ ಅಂತ ಕರೆದಿಲ್ಲ ಎಂದು ಶ್ವೇತಾ ಚಂಗಪ್ಪ ಬರೆದುಕೊಂಡಿದ್ದಾರೆ.
'ನಿಮ್ಮ ಜೊತೆ ಕಳೆದ ಪ್ರತಿ ಕ್ಷಣ ನಗುವಿನ ಅಲೆ. ಪ್ರತಿಯೊಂದು ನೆನಪು ನನ್ನ ಕೊನೆಯ ಉಸಿರಿನವರೆಗೂ ಶಾಶ್ವತವಾಗಿ ನ್ನ ಜೊತೆ ಇರುತ್ತದೆ'
'ತುಂಬಾ ಬೇಗ ಹೊರಟ್ ಬಿಟ್ರಿ. ಹೋಗಿ ಬನ್ನಿ ನಮ್ಮ ಪ್ರೀತಿಯ ಕನ್ನಡತಿ' ಎಂದು ಬರೆದು ಅಪರ್ಣ ಜೊತೆಗಿರುವ ಪ್ರತಿಯೊಂದು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ ಶ್ವೇತಾ.
ಮಜಾ ಟಾಕೀಸ್ ಚಿತ್ರೀಕರಣದ ಸಮಯದಲ್ಲಿ ತುಂಬಾ ಕ್ಲೋಸ್ ಆದ ಅಪರ್ಣ ಮತ್ತು ಶ್ವೇತಾ...ಆಗಾಗ ಶೂಟಿಂಗ್ ಹೊರತಾಗಿಯೂ ಸುತ್ತಾಡುತ್ತಿದ್ದರು.
ಈ ಹಿಂದೆ ಶ್ವೇತಾ ಚಂಗಪ್ಪ ತಮ್ಮ ಯೂಟ್ಯೂಬ್ ವ್ಲಾಗ್‌ಗಳಲ್ಲಿ ಅಪರ್ಣ ಜೊತೆ ಸುತ್ತಾಡಿರುವ, ರುಚಿ ರುಚಿಯಾದ ಊಟ ಸವಿದಿರುವ ವಿಡಿಯೋಗಳನ್ನು ಮಾಡಿದ್ದರು. ಈ ಮತ್ತೆ ವೈರಲ್ ಆಗುತ್ತಿದೆ.