ಮಜಾ ಟಾಕೀಸ್‌ನ ಒನ್ ಆಂಡ್ ಓನ್ಲಿ ವರು ಧ್ವನಿ ಇನ್ನು ಕೇಳೋಕೆ‌ ಸಿಗದು..‌ ಜೇನಿನಂತೆ‌ ಕನ್ನಡ‌ ಮಾತಾಡ್ತಿದ್ದ ಅಪರ್ಣಾ ‌ಇನ್ನು ನೆನಪು!

First Published | Jul 11, 2024, 11:03 PM IST

ನಟಿ ಅಪರ್ಣಾ ಅವರನ್ನು ನಟಿ ಎಂಬುದಕ್ಕಿಂತ ಹೆಚ್ಚಾಗಿ ಜನ ಗುರುತಿಸಿದ್ದು ಅಚ್ಚಗನ್ನಡದ ನಿರೂಪಕಿಯಾಗಿ. 
 

ಬೆಂಗಳೂರು ಮೆಟ್ರೋದಲ್ಲಿ ಕಿವಿಗೆ ಬೀಳುವ ಅಚ್ಚಗನ್ನಡದ ಮುದ್ರಿತ ಧ್ವನಿ ಅಪರ್ಣಾ ಅವರದು ಎಂಬುದು ಬಹಳಷ್ಟು ಮಂದಿಗೆ ಗೊತ್ತಿಲ್ಲ. 
 

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣ ಇಂದು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಇಂದು ಸಂಜೆ ಅಪರ್ಣ ಬನಶಂಕರಿ ಸೆಕೆಂಡ್ ಸ್ಟೇಜ್‌ನಲ್ಲಿರುವ ಅವರ ನಿವಾಸದಲ್ಲಿ ಕೊನೆಯುಸಿರೆಳಿದ್ದಾರೆ.  

Tap to resize

90ರ ದಶಕದಲ್ಲಿ ಚಂದನ ವಾಹಿನಿಯಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದರು. ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದರು.

ಇದಕ್ಕಿಂತಲೂ ಹೆಚ್ಚು ಜನಪ್ರಿಯತೆಯನ್ನು ತಂದುಕೊಟ್ಟಿದ್ದು ಮಜಾ ಟಾಕೀಸ್ ಶೋ. ಇದರಲ್ಲಿ ಒನ್ ಅಂಡ್ ಒನ್ಲಿ ವರಲಕ್ಷ್ಮಿಯಾಗಿ ಅಪರ್ಣಾ ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. 

ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸಣದ ಹೂವು' ಧಾರಾವಾಹಿ ಮೂಲಕ ಬೆಳ್ಳಿಪರದೆಗೆ ಅಡಿಯಿಟ್ಟ ಅಪರ್ಣಾ ಅವರು ಬಳಿಕ ಇನ್ಸ್‌ಪೆಕ್ಟರ್ ವಿಕ್ರಂ, ನಮ್ಮೂರ ರಾಜ, ಒಂದಾಗಿ ಬಾಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

ಕಿರುತೆರೆಯಲ್ಲಿ ಮೂಡಲಮನೆ, ಮುಕ್ತ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದರು. 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ ಅಪರ್ಣಗೆ ಆ ಸಮಯದಲ್ಲಿ ಮಧ್ಯಮ ಕ್ಷೇತ್ರ ಹೊಸತು.

ನನಗೆ ಇವತ್ತಿಗೂ ಹೆಮ್ಮೆ ಏನೆಂದರೆ ಕರ್ನಾಟಕದಲ್ಲಿ ದೂರದರ್ಶನ ಆರಂಭವಾದಗಿನಿಂದಲೂ ಇವತ್ತಿನವರೆಗೂ ದೂರದರ್ಶನ ಜೊತೆಗಿನ ನನ್ನ ನಂಟು ಬಿಗಿಯಾಗಿದೆ. ಆಗಾಗಿ ಟೆಲಿವಿಷನ್ ಅಂದ್ರೆ ನನಗೆ ತುಂಬಾ ಅಭಿಮಾನ ಎಂದು ತಿಳಿಸಿದ್ದರು.

ಒಬ್ಬ ಕಲಾವಿದನಿಗೆ ಎಲ್ಲವೂ ಇಷ್ಟ. ಯಾವುದು ಮೇಲು ಕೀಳು ಎಂಬ  ಪ್ರಶ್ನೆಯೇ ಬರುವುದಿಲ್ಲ. ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡುವ ಪ್ರತಿಯೊಂದು ಕೆಲಸವೂ ಉತ್ತಮ ಪ್ರತಿಫಲ ಕೊಡುತ್ತದೆ. 

ಹಾಗೆನೇ ನನಗೆ ಬರೆಯುವುದು, ಹಾಡು ಕೇಳುವುದು, ಓದುವುದು, ನಿರೂಪಣೆ, ನಟನೆ ಜೊತೆಗೆ ಮನೆ ಕೆಲಸ ಮಾಡುವುದು ಕೂಡ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ ಎಂದಿದ್ದರು.

ನಮ್ಮ ಭಾಷೆಯನ್ನ ಗೌರವಿಸಿ ಪ್ರೀತಿಸಿದಾಗ ಭಾಷೆಯು ನಮ್ಮನ್ನು ಪ್ರೀತಿಸುತ್ತದೆ. ಭಾಷೆಯನ್ನ ಸ್ಪಷ್ಟವಾಗಿ ಮಾತನಾಡುತ್ತಾ ಕೇಳುತ್ತಾ ಓದುತ್ತಾ ಇದಷ್ಟು ಸಹಜವಾಗಿ ಭಾಷೆಯಲ್ಲಿ ಹಿಡಿತ ಬರುತ್ತದೆ. 

ಪದಗಳಿಗಾಗಿ ತಡಕಾಡುವ ಪ್ರಮೇಯ ಬರುವುದಿಲ್ಲ. ನಾವು ಯಾವ ಕೆಲಸ ಮಾಡಿದರು ನಿಷ್ಠೆಯಿಂದ ಮಾಡುವ ಪ್ರತಿಯೊಂದು ಕೆಲಸವು ನಮ್ಮಗೆ ಯಶಸ್ಸನ್ನ ತಂದುಕೊಡುತ್ತದೆ ಎಂದು ಹೇಳಿದ್ದರು.

ಮೊದಲು ನಾನು ಬೆಂಗಳೂರಿನಲ್ಲಿ ದೂರದರ್ಶನಕ್ಕೆ ಪಾದಾರ್ಪಣೆ ಗೊಂಡಿದ್ದು. ಡ್ರಾಮಾ ಆಡಿಷನ್ ಮೂಲಕ ಕಲಾವಿದೆಯಾಗಬೇಕೆಂಬ ಕನಸನ್ನ ಹೊತ್ತು ಸಾಗಿದ ಸಂದರ್ಭ ಕನಸ್ಸಿನ ಹಕ್ಕಿಗೆ ರೆಕ್ಕೆ ಕಟ್ಟಿ ಹಾರುವಂತೆ ಸಹಾಯ ಮಾಡಿದವರು ಶ್ರೀನಿವಾಸ ಪ್ರಭು ಅವರು. 

ಭಯ ಪ್ರತಿಯೊಬ್ಬ ವ್ಯಕ್ತಿಯು ವೇದಿಕೆ ಮೆಟ್ಟಿಲೇರಿದಾಗ ಆಗುವುದು ಸಹಜ. ಭಯ ಆಗಬೇಕು! ಆವಾಗ ಮಾತ್ರ ತಪ್ಪು ಮಾಡಬಾರದು ಎಂಬ ಯೋಚನೆ ತಲೆಗೆ ಬರುವುದು ಪದ ಬಳಕೆ ಸ್ಪಷ್ಟವಾಗಿರುತ್ತದೆ, ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದು ಅಪರ್ಣ ತಿಳಿಸಿದ್ದರು.

1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದರು. 

ಕಿರಿತೆರೆಯ ಅನೇಕ ಕಾರ್ಯಕ್ರಮಗಳನ್ನು ಅಪರ್ಣಾ ನಡೆಸಿಕೊಟ್ಟಿದ್ದರು. ನಮ್ಮ ಮೆಟ್ರೋ ಅನೌನ್ಸ್​ಮೆಂಟ್​ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಅವರು ಧ್ವನಿ ನೀಡಿದ್ದರು.

Latest Videos

click me!