ಬೋಲ್ಡ್ ಕ್ರಾಪ್ ಟಾಪ್ ಧರಿಸಿ ಬಿಂದಾಸ್ ಪೋಸ್ ಕೊಟ್ಟ ಭೂಮಿ, ‘ಸಿಡಿ ಗುಂಡು’ ಎಂದ ಫ್ಯಾನ್ಸ್!

Published : Jul 11, 2024, 05:42 PM ISTUpdated : Jul 11, 2024, 05:43 PM IST

ಬಿಗ್ ಬಾಸ್ ಸೀಸನ್ 7ರ ಮೂಲಕ ಭಾರಿ ಸದ್ದು ಮಾಡಿದ ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಮತ್ತೊಮ್ಮೆ ತಮ್ಮ ಹಾಟ್ ಲುಕ್ ನಿಂದ ಸದ್ದು ಮಾಡ್ತಿದ್ದಾರೆ.   

PREV
17
ಬೋಲ್ಡ್ ಕ್ರಾಪ್ ಟಾಪ್ ಧರಿಸಿ ಬಿಂದಾಸ್ ಪೋಸ್ ಕೊಟ್ಟ ಭೂಮಿ, ‘ಸಿಡಿ ಗುಂಡು’ ಎಂದ ಫ್ಯಾನ್ಸ್!

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಬೆಡಗಿ ಅಂದ್ರೆ ಅದು ಭೂಮಿ ಶೆಟ್ಟಿ (Bhoomi Shetty) . ತಮ್ಮ ಹಾಟೆಸ್ಟ್ ಅವತಾರದ ಮೂಲಕ ಅವರ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡ್ತಿದ್ದಾರೆ. ಇದೀಗ ಮತ್ತೊಮ್ಮೆ ತಮ್ಮ ಬೋಲ್ಡ್ ಲುಕ್ ಮೂಲಕ ಕಾಣಿಸಿಕೊಂಡಿದ್ದಾರೆ. 
 

27

ಕಿನ್ನರಿ ಧಾರಾವಾಹಿಯ (Kinnari serial) ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ನೀಡಿದ ಕುಂದಾಪುರದ ಬೆಡಗಿ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆಲ್ಲುವಲ್ಲಿ ಯಶಸ್ವಿಯಾದರು. ಇದಾದ ನಂತ್ರ ತೆಲುಗು ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರು. 
 

37

ಬಳಿಕ ಬಿಗ್ ಬಾಸ್ ಸೀಸನ್ 7ರ  (Bigg Boss Season 7) ಮೂಲಕ ಮತ್ತೆ ಕನ್ನಡ ಕಿರುತೆರೆಯಲ್ಲಿ ಧೂಳೆಬ್ಬಿಸಿದ್ದರು. ತಮ್ಮ ಆಟದ ಮೂಲಕ, ಇತರ ಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿ ನೀಡಿ, ಟಾಪ್ 5 ಸ್ಥಾನದಲ್ಲೂ ಮಿಂಚಿದ್ದರು ಭೂಮಿ. 
 

47

ಸದ್ಯಕ್ಕೆ ಕನ್ನಡ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಭೂಮಿ ಶೆಟ್ಟಿ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಇವರು ಒಂದಲ್ಲ ಒಂದು ಹೊಸ ಫೋಟೋ ಶೂಟ್ ಟ್ರಾವೆಲ್ ಫೋಟೋ, ಬೈಕ್ ರೈಡ್ ವಿಡಿಯೋ ಮೂಲಕ ನೆಟ್ಟಿಗರ ನಿದ್ದೆ ಕೆಡಿಸ್ತಿರುತ್ತಾರೆ. 
 

57

ಇದೀಗ ಭೂಮಿ ನಿಯಾನ್ ಹಸಿರು ಬಣ್ಣದ ಕ್ರಾಪ್ ಟಾಪ್ ಮತ್ತು ನಿಯಾನ್ ಪಿಂಕ್ ಬಣ್ಣದ ಮಿನಿ ಸ್ಕರ್ಟ್ ಧರಿಸಿ, Feel your soul ಎನ್ನುವ ಪೋಸ್ಟ್ ಜೊತೆ ಸಖತ್ ಬೋಲ್ಡ್ ಆಗಿ ಪೋಸ್ ಕೊಟ್ಟಿದ್ದಾರೆ. 
 

67

ಭೂಮಿ ಶೆಟ್ಟಿ ಫೋಟೋಗಳನ್ನು ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದು, ಭೂಮಿ ಸದ್ಯದಲ್ಲಿ ನಮ್ ಹೃದಯ ಬ್ಲಾಸ್ಟ್ ಆಗೋದು ಗ್ಯಾರಂಟಿ, ಸಿಡಿ ಗುಂಡು, ಕ್ರಶ್, ನೋಡೋಕೆ ಎರಡು ಕಣ್ಣು ಸಾಲಲ್ಲ. ಹಾಟ್, ಬೆಂಕಿ, ಸೆಕ್ಸಿ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
 

77

ನೆಗೆಟಿವ್ ಕಾಮೆಂಟ್ಸ್ (negative comment) ಸಹ ಬಂದಿದ್ದು, ಡ್ರಗ್ ತೆಗೆಂಡೀರೋ ಥರ ಕಾಣಿಸ್ತೀರಾ, ಎಂದು ಒಬ್ರು ಹೇಳಿದ್ರೆ, ಮತ್ತೊಬ್ಬರು ಭೂಮಿ ದಿನೇ ದಿನೇ ಬೋಲ್ಡ್ ಆಗಿ ಕಾಣಿಸೋದನ್ನು ನೋಡಿ, ಎಲ್ಲೋ ಹೋಗ್ತಾ ಇದ್ದಿಯಾಮ್ಮ ! ವಾಪಸ್ಸು ಬರೋದು ಸ್ವಲ್ಪ ಅನುಮಾನನೇ !! ದೇವರು ಒಳ್ಳೇದು ಮಾಡಲಿ ಎಂದಿದ್ದಾರೆ. 
 

Read more Photos on
click me!

Recommended Stories