#Happybirthday ಅನುಪಮಾ ಗೌಡ, ನಿರೂಪಕಿಯ ಮೂಗುತಿ ಕಲೆಕ್ಷನ್‌ಗಳು ನೋಡಿ...

First Published | Mar 19, 2022, 11:16 AM IST

ಇಂದು ನಿರೂಪಕಿ ಅನುಪಮಾ ಗೌಡ ಹುಟ್ಟುಹಬ್ಬ. ಕಾಮನ್ ಡಿಪಿ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳು ಅದ್ಧೂರಿಯಾಗೆ ಆಚರಣೆ ಮಾಡುತ್ತಿದ್ದಾರೆ. 
 

ಕನ್ನಡ ಕಿರುತೆರೆ ಜನಪ್ರಿಯ ನಟಿ ಕಮ್ ನಿರೂಪಕಿ ಅನುಪಮಾ ಗೌಡ ಇಂದು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಕಾಮನ್ ಡಿಪಿ ರಿಲೀಸ್ ಮಾಡಿದ್ದಾರೆ. 

ನಾಯಕಿಯಾಗಿ ಮಿಂಚೋದಕ್ಕೂ ಹೆಚ್ಚಾಗಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ. ಮಜಾ ಭಾರತ, ಹಾಡು ಕೊಗಿಲೆ, ರಾಜಾ ರಾಣಿ ಮತ್ತು ನನ್ನಮ್ಮ ಸೂಪರ್ ಸ್ಟಾರ್‌ ರಿಯಾಲಿಟಿ ಶೋ ನಿರೂಪಣೆ ಅತಿ ಹೆಚ್ಚು ಗಮನ ಸೆಳೆದಿದೆ. 

Tap to resize

ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅನುಪಮಾ ಗೌಡ ದಿನಕ್ಕೊಂದು ಡಿಫರೆಂಟ್ ಫೋಟೋಗಳನ್ನು ಅಪ್ಲೋಡ್ ಮಾಡುತ್ತಾರೆ. ಮಾಡ್ರನ್‌ಗೂ ಸೈ ಟ್ರೆಡಿಷನಲ್‌ಗೂ ಸೈ ಎನ್ನುವ ನಟಿ ಬಳಿ ಎಷ್ಟು ಮೂಗುತಿ ಇದೆ ಗೊತ್ತಾ? 

ಮೂಗುತ್ತಿ ಸುಂದರಿ ಎಂದೇ ಹೆಸರು ಪಡೆದುಕೊಂಡಿರುವ ಅನುಪಮಾ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ತಮ್ಮ ಬಳಿ ಇರುವ ಬೆಳ್ಳಿ, ಬಂಗಾರ ಮತ್ತು ವಜ್ರದ ಮೂಗುತಿಗಳನ್ನು ತೋರಿಸಿದ್ದಾರೆ. 

ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಜಡ್ಜ್‌ ಸೃಜನ್ ಲೋಕೇಶ್‌ ಅವರು ಅನುಪಮಾಗೆ ಒಂದು ಚಿನ್ನದ ಮೂಗುತಿ ಗಿಫ್ಟ್‌ ನೀಡಿದ್ದಾರೆ. ವೇದಿಕೆ ಮೇಲೆ ಅನುಪಮಾ ಭಾವುಕರಾಗಿದ್ದರು. 

ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್ ಚಾನೆಲ್ ಅರಂಭಿಸಿದ ಅನುಪಮಾ ಗೌಡ ತಮ್ಮ ಹೇರ್ ಕೇರ್, ಸ್ಕಿನ್ ಕೇರ್, ಬ್ಯೂಟಿ ಹ್ಯಾಕ್, ಪೀರಿಯಡ್ಸ್ ಹ್ಯಾಕ್ ಸೇರಿದಂತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

Latest Videos

click me!