ಕೈಯಲ್ಲಿ 5 ಸಿನಿಮಾಗಳಿವೆ, ನಾನು ಫುಲ್ ಬ್ಯುಸಿ: ಜೊತೆ ಜೊತೆಯಲಿ ನಟಿ ಸೋನು ಗೌಡ

First Published | Mar 18, 2022, 2:38 PM IST

ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ಸಿಂಪಲ್ ಹುಡುಗಿ ಸೋನು ಗೌಡ. ವೃತ್ತಿ ಜೀವನ ಎಷ್ಟು ನೆಮ್ಮದಿ ಕೊಟ್ಟಿದೆ?

ಕನ್ನಡ ಚಿತ್ರರಂಗದ ಮುದ್ದು ಮುಖದ ಚೆಲುವೆ ಸೋನು ಗೌಡ ಇದೀಗ ಕನ್ನಡ ಕಿರುತೆರೆ ಮೂಲಕ ವೀಕ್ಷಕರ ಮನಸ್ಸಿಗೆ ಹತ್ತಿರವಾಗುತ್ತಿದ್ದಾರೆ. 

ಜೊತೆ ಜೊತೆಯಲಿ ಧಾರಾವಾಹಿ ಮಾತ್ರವಲ್ಲದೆ ಕಾಂತರಾಜ್ ನಿರ್ದೇಶನ ಮಾಡುತ್ತಿರುವ ಶಬ್ಧ ಸಿನಿಮಾ ಮತ್ತು ಮಹೇಶ್‌ ನಿರ್ದೇಶನದ ವಸುಂಧರಾದೇವಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Tap to resize

 'ಶಬ್ಧ ಸಿನಿಮಾದಲ್ಲಿ ನಾನು ಸೂಪರ್ ಕಾಪ್‌. ಗುಳ್ಟು ಸಿನಿಮಾದ ನಂತರ ಇದು ಎರಡನೇ ಸಲ ಪೊಲೀಸ್ ಪಾತ್ರ ಮಾಡುತ್ತಿರುವುದು' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಹೇಳಿದ್ದಾರೆ. 

 '2019ರಲ್ಲಿ ಸಿನಿಮಾ ಶುರು ಆಗಬೇಕಿತ್ತು ಆದರೆ ಕೊರೋನಾದಿಂದ ಈಗ ಆಗುತ್ತಿದೆ. ಸಿನಿಮಾ ಮತ್ತು ಸ್ಕ್ರೀನ್‌ ಪ್ಲೇ ಅದ್ಭುತವಾಗಿದೆ. ಒಂದು ಶೆಡ್ಯೂಲ್ ಚಿತ್ರೀಕರಣ ಉಳಿದುಕೊಂಡಿದೆ'

'ವಸುಂಧರಾದೇವಿ ಚಿತ್ರದಲ್ಲಿ ರಾಜಕಾರಣಿಯಾಗಿ ಕಾಣಿಸಿಕೊಳ್ಳುತ್ತಿರುವೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್‌ ಜೊತೆ ಕೆಲಸ ಮಾಡ್ತಿದ್ದೀನಿ'

 'ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ಕೈಯಲ್ಲಿ 5 ಸಿನಿಮಾಗಳಿದೆ. ಜೊತೆ ಜೊತೆಯಲಿ ಧಾರಾವಾಹಿ ಕೂಡ ಶುರುವಾಯ್ತು. ಈ ಮೂಲಕ ನನಗೆ ಹೊಸ ವೀಕ್ಷಕರು ಪರಿಚಯವಾಗುತ್ತಿದ್ದಾರೆ' ಎಂದಿದ್ದಾರೆ ಸೋನು ಗೌಡ.

Latest Videos

click me!