ಗರ್ಭಿಣಿ ಆಗಿದ್ದಾಗಲೆ ಮಗುವಿನ ಲಿಂಗ ತಿಳಿದುಕೊಂಡ್ರಾ?;ನಟಿ ಕಾವ್ಯಾ ಗೌಡ ಸಹೋದರಿ ಮೇಲೆ ನೆಟ್ಟಿಗರ ಆಕ್ರೋಶ

First Published | Jun 2, 2024, 12:22 PM IST

ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ಫ್ಯಾಷನ್ ಡಿಸೈನರ್. ಕಾಮೆಂಟ್ಸ್‌ನಲ್ಲಿ ನೆಟ್ಟಿಗರು ಎಷ್ಟೇ ಪ್ರಶ್ನೆ ಮಾಡಿದರೂ ಉತ್ತರ ಕೊಡದ ಕುಟುಂಬಸ್ಥರು....

ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ ಮಾರ್ಚ್‌ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅದರ ಬೆನ್ನಲೆ ಅಕ್ಕ ಕೂಡ ಪ್ರೆಗ್ನೆಂಟ್ ಅನ್ನೋ ವಿಚಾರ ಅನೌನ್ಸ್ ಮಾಡಿಬಿಟ್ಟರು.

ಜೂನ್ 1ರಂದು ಕಾವ್ಯಾ ಗೌಡ ಸಹೋದರಿ ಭವ್ಯಾ ಗೌಡ ಗಂಡು ಮಗವಿಗೆ ಜನ್ಮ ನೀಡಿದ್ದಾರೆ. ಭವ್ಯಾ ಗೌಡ ಖ್ಯಾತ ಫ್ಯಾಷನ್ ಡಿಸೈನರ್ ಕೂಡ.

Tap to resize

ಜೂನ್ 1ರಂದು ನಮ್ಮ ಬೇಬಿ ಬಾಯ್‌, ಆಧ್ಯಾಳ ಮುದ್ದು ತಮ್ಮನನ್ನು ಬರ ಮಾಡಿಕೊಂಡಿದ್ದೀವಿ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ ಎಂದು ಭವ್ಯಾ ಬರೆದುಕೊಂಡಿದ್ದಾರೆ.

ಈ ಹಿಂದೆ ಅನೇಕ ಬಾರಿ ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿದಾಗಲೆಲ್ಲಾ #Arya ಅಥವಾ ಆರ್ಯಾ ಎಂದು ಭವ್ಯಾ ಬರೆದುಕೊಳ್ಳುತ್ತಿದ್ದರು.

ಗಂಡು ಮಗು ಎಂದು ಮೊದಲೇ ಲಿಂಗ ತಿಳಿದುಕೊಂಡಿದ್ದೀರಾ ಎಂದು ನೆಟ್ಟಿಗರು ಹಲವು ಸಲ ಪ್ರಶ್ನೆ ಮಾಡಿದ್ದರೂ ಸಹೋದರಿಯರಿಬ್ಬರೂ ಯಾವುದಕ್ಕೂ ಉತ್ತರ ಕೊಡುತ್ತಿರಲಿಲ್ಲ. 

ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಂತೆ ಬಹುತೇಕ ಪೋಸ್ಟ್‌ಗಳಲ್ಲಿ ಅರ್ಯ ಎಂದು ಬರೆದುಕೊಂಡಿರುವುದನ್ನು ಡಿಲೀಟ್ ಮಾಡಿಬಿಟ್ಟರು. 

ಈಗ ಅಕ್ಕನಿಂಗೆ ವಿಶ್ ಮಾಡಿರುವ ಕಾವ್ಯಾ ಕೂಡ ಆರ್ಯ ಎಂದು ಮೆನ್ಶನ್ ಮಾಡಿದ್ದಾರೆ. ಅರ್ಯ ಅನ್ನೋ ಹೆಸರನ್ನು ಗಂಡು ಅಥವಾ ಹೆಣ್ಣು ಯಾವ ಮಗುವಿಗೆ ಬೇಕಿದ್ದರೂ ಇಡಬಹುದು ಎನ್ನುತ್ತಾರೆ ಫ್ಯಾನ್ಸ್‌. 

Latest Videos

click me!