ಕಲರ್ಸ್ ಕನ್ನಡದಲ್ಲಿ (COlors Kannada) ಪ್ರಸಾರವಾಗುತ್ತಿದ್ದ ತುಂಬು ಕುಟುಂಬದ ಕತೆಯಾಗಿದ್ದ ಬೃಂದಾವನ (Brundavana) ಸೀರಿಯಲ್ ಇದ್ದಕ್ಕಿದ್ದಂತೆ ಕಥೆ ಮುಗಿಸಿ, ಪ್ರಸಾರ ನಿಲ್ಲಿಸಿಯೇ ಬಿಟ್ಟಿದೆ. ಈ ಬಗ್ಗೆ ಸೀರಿಯಲ್ ವೀಕ್ಷಕರಲ್ಲಿ ಹಲವಾರು ಪ್ರಶ್ನೆಗಳು ಮೂಡಿದ್ದವು? ಅವೆಲ್ಲವುದಕ್ಕೂ ಇದೀಗ ರಾಮ್ ಜೀಯವರು ಉತ್ತರಿಸಿದ್ದಾರೆ.
ರಾಮ್ ಜೀಯವರು (KS Ramji) ಕನ್ನಡ ಕಿರುತೆರೆಯ ಜನಪ್ರಿಯ ಮತ್ತು ಹಿಟ್ ನಿರ್ದೇಶಕರು ಅಂದ್ರೆ ತಪ್ಪಲ್ಲ. ಯಾಕಂದ್ರೆ ಕನ್ನಡಿಗರ ಹೊಸ ಹೊಸ ಕಥೆಗಳನ್ನು ನೀಡಿ, ಹೊಸ ಹೊಸ ನಾಯಕ, ನಾಯಕಿಯರನ್ನು ಪರಿಚಯಿಸಿದ ಕೀರ್ತಿ ಇವರದ್ದು, ಇವರು ಅದೆಷ್ಟೋ ಹಿಟ್ ಸೀರಿಯಲ್‌ಗಳನ್ನು ನೀಡಿದ್ದಾರೆ.
ನಾಗಕನ್ನಿಕೆ, ಪುಟ್ಟಗೌರಿ ಮದುವೆ, ಅಕ್ಕ, ಓಂ ಶಕ್ತಿ ಓಂ ಶಾಂತಿ, ನಾಗಿಣಿ 2, ಗೀತಾ, ರಂಗನಾಯಕಿ, ಮಂಗಳಗೌರಿ ಮದುವೆ, ರಾಮಾಚಾರಿ ಮೊದಲಾದ ಸೀರಿಯಲ್ಸ್ ನಿರ್ದೆಶಕ ಇವರೇ. ಇವೆಲ್ಲವೂ ಜನಮನ ಗೆದ್ದವು. ಬೃಂದಾವನವೂ ಇದೇ ಹಾದಿ ಹಿಡಿಯುತ್ತೆ ಎಂದೇ ಎಲ್ಲರೂ ನಂಬಿದ್ದರು.
ಬೃಂದಾವನ ಸೀರಿಯಲ್ 32 ಜನರುಳ್ಳ ತುಂಬು ಕುಟುಂಬದ ಕತೆಯಾಗಿದ್ದು, ಕುಟುಂಬದ ಮೊಮ್ಮಗನಿಗೆ ಹುಡುಗಿ ಹುಡುಕುವ ಮೂಲಕ ಈ ಕಥೆ ಆರಂಭವಾಯಿತು, ಇದೇ ಮೊದಲ ಬಾರಿ ದೊಡ್ಡ ಕುಟುಂಬದ ಕಥೆ ಬಂದಿದ್ದು, ವೀಕ್ಷಕರು ಕೂಡ ಖುಷಿಯಾಗಿದ್ದರು, ಸೀರಿಯಲ್ ಬಗ್ಗೆ ಅಪಾರ ನಿರೀಕ್ಷೆಯೂ ಇಟ್ಟಿದ್ದರು. ಆದರೆ ಆಗಿದ್ದೇ ಬೇರೆ.
ಸೀರಿಯಲ್ ದಿಢೀರ್ ಆಗಿ ನಿಲ್ಲಿಸಿರುವ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿರುವ ರಾಮ್ ಜೀ, ಬೃಂದಾವನ ಕಥೆ ಬರೆದಾಗಲೇ 1000 ಎಪಿಸೋಡ್ ಇತ್ತು, ಆದರೆ ಟೆಕ್ನಿಕಲ್ ಸಮಸ್ಯೆಯಿಂದ (Technical Problem) ಸೀರಿಯಲ್ ನಿಲ್ಲಿಸುವಂತಾಯಿತು. ನಾನು ಬರೆದ ಟಾಪ್ 5 ಬೆಸ್ಟ್ ಕಥೆಗಳಲ್ಲಿ ಇದು ಕೂಡ ಒಂದು, ಎಂದು ಹೇಳಿದ್ದಾರೆ.
ಇನ್ನು ನಾಯಕನ ದಿಢೀರ್ ಬದಲಾವಣೆ ಬಗ್ಗೆ ಕೂಡ ಮಾತನಾಡಿರುವ ರಾಮ್ ಜೀ, ಈ ಸೀರಿಯಲ್‌ಗೆ ಮೊದಲು ಗಾಯಕರಾಗಿರುವ ವಿಶ್ವನಾಥ್ ಹಾವೇರಿ ನಾಯಕರಾಗಿದ್ದರು, ಆದರೆ ಆರೋಗ್ಯ ಸಮಸ್ಯೆಯಿಂದ ಅವರು ತುಂಬಾ ಸಣ್ಣಗಾದರು, ಮದುವೆ ಎಪಿಸೋಡ್ ಸಮಯದಲ್ಲಿ ಅವರ ಆರೋಗ್ಯ ತುಂಬಾ ಕೆಟ್ಟಿದ್ದರಿಂದ, ನಾಯಕನ ಬದಲಾವಣೆ ಮಾಡಲೇಬೇಕಾಯಿತು, ಅದಕ್ಕಾಗಿಯೇ ನಾವು ವರುಣ್ ಅವರನ್ನು ನಾಯಕನನ್ನಾಗಿ ಮಾಡಿದ್ದು ಎಂದು ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್ 23 ರಂದು ‘ಬೃಂದಾವನ’ ಧಾರಾವಾಹಿ ಆರಂಭವಾಗಿತ್ತು, ಇದಾಗಿ ಏಳೇ ತಿಂಗಳಿಗೇ ಅಂದ್ರೆ ಮೇ 24, 2024 ರಂದು ‘ಬೃಂದಾವನ’ ಕೊನೆಗೊಂಡಿತ್ತು, ಇಷ್ಟು ಬೇಗ ಕೊನೆಯಾಗಿದ್ದಕ್ಕೆ ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ. 60-70ನೇ ಎಪಿಸೋಡ್ ಗೆ ಸೀರಿಯಲ್ ನಿಲ್ಲಿಸಲು ನಿರ್ಧರಿಸಿದ್ದೆ, ಆದರೆ ಏಕಾಏಕಿ ನಿಲ್ಲಿಸಲು ಸಾಧ್ಯ ಇಲ್ಲ ಎಂದು, 167 ಎಪಿಸೋಡ್‌ವರೆಗೂ ಮಾಡಿ, ಸೀರಿಯಲ್ ಗೆ ಹ್ಯಾಪಿ ಎಂಡಿಂಗ್ ನೀಡಿರೋದಾಗಿ ರಾಮ್ ಜೀ ಹೇಳಿದ್ದಾರೆ.