Telugu Bigg Boss: ತೆಲುಗು ಬಿಗ್ ಬಾಸ್ ಸೀಸನ್ 9 ಇದೀಗ ಕೊನೆಯ ಹಂತವನ್ನು ತಲುಪಿದೆ. ಮೂರು ತಿಂಗಳ ಸ್ಪರ್ಧೆ, ಆಟ ಮುಗಿಯುತ್ತಾ ಬಂದಿದ್ದು, ಕನ್ನಡತಿ ತನುಜಾ ಪುಟ್ಟಸ್ವಾಮಿಗೆ ತೆಲುಗು ಹಾಗೂ ಕನ್ನಡ ವೀಕ್ಷಕರ ಬೆಂಬಲ ಸಿಗುತ್ತಿದ್ದು, ಇವರೇ ಈ ಬಾರಿಯ ವಿನ್ನರ್ ಎನ್ನುತ್ತಿದ್ದಾರೆ.
ತೆಲುಗು ಬಿಗ್ ಬಾಸ್ ಮೂರು ತಿಂಗಳು ಭರ್ಜರಿ ಮನರಂಜನೆ ನೀಡಿ, ಟಾಸ್ಕ್, ಗೇಮ್, ಎಮೋಷನ್ ಮೂಲಕ ಜನರ ಮನರಂಜಿಸಿದೆ. ಇದೀಗ ಬಿಗ್ ಬಾಸ್ ಕೊನೆಯಾಗಲು ಕೆಲವೇ ದಿನಗಳು ಬಾಕಿ ಇವೆ. ಈಗಾಗಲೇ ಐವರು ಸ್ಪರ್ಧಿಗಳು ಬಿಗ್ ಬಾಸ್ ಫಿನಾಲೆ ತಲುಪಿಯಾಗಿದೆ.
26
ಲುಗು ಬಿಗ್ ಬಾಸ್ ಫಿನಾಲೆ
ಇನ್ನು ತೆಲುಗು ಬಿಗ್ ಬಾಸ್ ಫಿನಾಲೆ ತಲುಪಿದ ಐವರಲ್ಲಿ ಕನ್ನಡಿಗರೂ ಕೂಡ ಇದ್ದು, ಹಾಗಾಗಿ ಕನ್ನಡಿಗರೂ ಸಹ ತೆಲುಗು ಬಿಗ್ ಬಾಸ್ ಗೆ ಬೆಂಬಲ ನೀಡುತ್ತಿದ್ದಾರೆ. ಸಂಜನಾ ಗಲ್ರಾನಿ ಮತ್ತು ತನುಜಾ ಪುಟ್ಟಸ್ವಾಮಿ ಬಿಗ್ ಬಾಸ್ ಫಿನಾಲೆ ತಲುಪಿದ್ದಾರೆ. ತನುಜಾಗೆ ಕನ್ನಡಿಗರ ಬೆಂಬಲ ಸಿಗುತ್ತಿದೆ.
36
ಯಾರ್ಯಾರಿದ್ದಾರೆ ಫಿನಾಲೆಯಲ್ಲಿ
ತನುಜಾ, ಸಂಜನಾ, ಕಲ್ಯಾಣ್, ಇಮಾನ್ಯುವೆಲ್ ಮತ್ತು ಪವನ್ ಇಷ್ಟು ಜನ ಈಗ ಫಿನಾಲೆ ಸ್ಪರ್ಧಿಗಳಾಗಿದ್ದಾರೆ. ಡಿಸೆಂಬರ್ 21ರಂದು ಫಿನಾಲೆ ನಡೆಯಲಿದ್ದು ಅಂದು ಯಾರಾಗಲಿದ್ದಾರೆ ವಿನ್ನರ್ ಎನ್ನುವ ಕುತೂಹಲ ಹೆಚ್ಚಾಗಿದೆ.
ಕನ್ನಡಿಗರು ಸದ್ಯ ತೆಲುಗು ಬಿಗ್ ಬಾಸ್ ನೋಡುತ್ತಿರುವುದೇ ಕನ್ನಡತಿಯರು ಬಿಗ್ ಬಾಸ್ ನಲ್ಲಿ ಇರೋದಕ್ಕೆ. ಸಂಜನಾ ಮತ್ತು ತನುಜಾ ಇಬ್ಬರೂ ಕೂಡ ಅದ್ಭುತವಾಗಿ ಆಡುತ್ತಿದ್ದು, ಕೊಟ್ಟ ಟಾಸ್ಕ್ ಗಳನ್ನೆಲ್ಲಾ ಚಾಲೆಂಜಿಂಗ್ ಆಗಿ ಆಡುತ್ತಿದ್ದಾರೆ. ಇಬ್ಬರಲ್ಲಿ ತನುಜಾಗೆ ಕನ್ನಡಿಗರ ಹೆಚ್ಚಿನ ಬೆಂಬಲ ಸಿಕ್ಕಿದೆ.
56
ತನುಜಾ ಹೇಗೆ ಆಡ್ತಿದ್ದಾರೆ?
ತನುಜಾ ಬಿಗ್ ಬಾಸ್ ಆರಂಭವಾದಾಗಿನಿಂದಲೂ ತಮ್ಮ ಆಟದಿಂದ ಗಮನ ಸೆಳೆದಿದ್ದಾರೆ. ಸಖತ್ ಮನರಂಜನೆಯನ್ನೂ ನೀಡುತ್ತಾರೆ. ತ್ಯಾಗ ಮಾಡುವ ಸಂದರ್ಭ ಬಂದಾಗ ತ್ಯಾಗವನ್ನು ಮಾಡ್ತಾರೆ, ಟಾಸ್ಕ್ ಅಂತ ಬಂದಾಗ ಎಂತಹ ಕಷ್ಟದ ಟಾಸ್ಕನ್ನೂ ಸಖತ್ತಾಗಿ ಆಡುತ್ತಾರೆ. ಹಾಗಾಗಿ ತೆಲುಗು, ಸೇರಿ ಕನ್ನಡಿಗರಿಗೂ ತನುಜಾ ಫೇವರಿಟ್, ಅವರೇ ವಿನ್ ಆಗಲಿ ಎಂದು ಆಶಿಸುತ್ತಿದ್ದಾರೆ.
66
ತನುಜಾ ಕರಿಯರ್
ತನುಜಾ ಪುಟ್ಟಸ್ವಾಮಿ ಕನ್ನಡದಲ್ಲಿ ‘6-5=3’ ಮತ್ತು ‘ದಂಧೆ ಬಾಯ್ಸ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಜನಪ್ರಿಯತೆ ತಂದುಕೊಟ್ಟಿದ್ದು, ತೆಲುಗು ಮತು ತಮಿಳು ಕಿರುತೆರೆ. ತೆಲುಗು ಮತ್ತು ತಮಿಳಿನಲ್ಲಿ ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಾ ಬಂದಿರುವ ತನುಜಾ, ಬಿಗ್ ಬಾಸ್ ಗೆ ಬರೋದಕ್ಕೂ ಮುನ್ನ ತೆಲುಗು ಸೀರಿಯಲ್ ನಲ್ಲಿ ನಟಿಸಿದ್ದರು.