Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ದೊಡ್ಮನೆಯೊಳಗಡೆ ಒಂದು ಸಿನಿಮಾ, ಸೀಕ್ರೇಟ್ ರೂಮ್‌ನಲ್ಲಿ ಇನ್ನೊಂದು ಸಿನಿಮಾ ಪ್ರಸಾರವಾಗುತ್ತಿದೆ. ಧ್ರುವಂತ್ ಹಾಗೂ ರಕ್ಷಿತಾ ಅವರು ಆಟ ಆಡಿಸಿದಂತೆ, ಸ್ಪರ್ಧಿಗಳು ಆಟ ಆಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿದ್ದವರ ಪಾಲಿಗೆ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ಅವರು ಎಲಿಮಿನೇಟ್ ಆಗಿದ್ದಾರೆ. ಈಗ ಅವರು ಸೀಕ್ರೆಟ್ ರೂಮ್‌ನಲ್ಲಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿದ್ದು, ಅವರು ದೊಡ್ಮನೆಯೊಳಗಡೆ ಆಗೋದನ್ನು ನೋಡುತ್ತಿದ್ದಾರೆ. ಇದು ಸ್ಪರ್ಧಿಗಳಿಗೆ ಗೊತ್ತಿಲ್ಲ.
25
ಹಾವು-ಮುಂಗುಸಿ ಜಗಳ
ದೊಡ್ಮನೆಯೊಳಗಡೆ ಇರುವಾಗಲೇ ಧ್ರುವಂತ್ ಹಾಗೂ ರಕ್ಷಿತಾ ಶೆಟ್ಟಿ ನಡುವೆ ಸಾಕಷ್ಟು ಬಾರಿ ಜಗಳ ಆಗಿದೆ. ರಕ್ಷಿತಾ ಕಂಡರೆ ಧ್ರುವಂತ್‌ಗೆ ಇಷ್ಟ ಇಲ್ಲ, ಧ್ರುವಂತ್ ಕಂಡರೆ ರಕ್ಷಿತಾಗೆ ಆಗೋದಿಲ್ಲ. ಈಗ ಇವರಿಬ್ಬರು ಸೀಕ್ರೆಟ್ ರೂಮ್‌ಗೆ ಹೋಗಿದ್ದು, ಪ್ರತಿ ವಿಚಾರಕ್ಕೆ ಜಗಳ ಆಡುತ್ತಿದ್ದಾರೆ.
35
ಹೊಸದಾಗಿ ಟಾಸ್ಕ್ ಕೊಟ್ರು
ಬಿಗ್ ಬಾಸ್ ಮನೆಯಲ್ಲಿ ಹೊಸದಾಗಿ ಟಾಸ್ಕ್ ನೀಡಲಾಗಿದೆ. ಕ್ಯಾಪ್ಟನ್ಸಿ ಟಾಸ್ಕ್‌ಗೆ ಜೋಡಿಗಳಾಗಿ ಆಡಬೇಕಿದೆ. ಸೂರಜ್ ಹಾಗೂ ಗಿಲ್ಲಿ, ಕಾವ್ಯ ಹಾಗೂ ರಘು ಅವರು ಆಡಲಿ ಎಂದು ಧ್ರುವಂತ್ ಹೇಳಿದ್ದರು. ಒಂದು ಕಡೆ ಯಾರು ಡಿಸರ್ವ್ ಆಗಿದ್ದಾರೋ ಅವರೇ ಇರಬೇಕು ಎಂದು ರಕ್ಷಿತಾ ಹೇಳಿದ್ದಾರೆ. ಫೇರ್ ಗೇಮ್ ಆಡು ಎಂದು ಧ್ರುವಂತ್ ಹೇಳಿದ್ದರು. ಗಿಲ್ಲಿ ನಟ ಹಾಗೂ ರಘು ಕಂಡರೆ ರಕ್ಷಿತಾಗೆ ಇಷ್ಟ, ಹೀಗಾಗಿ ಇವರಿಬ್ಬರು ಇರಬೇಕು ಎಂದು ರಕ್ಷಿತಾ ಶೆಟ್ಟಿ ಬಯಸುತ್ತಿದ್ದಾರೆ.
ರಘು, ರಜತ್, ಗಿಲ್ಲಿ ನಟ ಅವರನ್ನು ಕಂಡರೆ ರಕ್ಷಿತಾಗೆ ಶೆಟ್ಟಿಗೆ ತುಂಬ ಇಷ್ಟ. ಈ ಹಿಂದಿನ ಟಾಸ್ಕ್‌ನಲ್ಲಿ ಕೂಡ ಇವರಿಗೆ ಫೇವರ್ ಆಗೋ ಥರ ರಕ್ಷಿತಾ ಆಯ್ಕೆ ಮಾಡಿದ್ದರು. ತನಗೆ ಯಾರೇ ಶತ್ರುವಾಗಿರಲಿ, ಧ್ರುವಂತ್ ಮಾತ್ರ ಟೀಂ ಕಟ್ಟುವಾಗ ಸ್ಟ್ರಾಂಗ್, ವೀಕ್ ಎಂದುಕೊಂಡು ಸಮಾನವಾಗಿ ಟೀಂ ಹಂಚಿದ್ದರು. ಒಟ್ಟಿನಲ್ಲಿ ಧ್ರುವಂತ್ ಅವರು ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಆಗೋ ಥರ ಟೀಂ ರಚನೆ ಮಾಡಿದ್ದರು. ಆದರೆ ರಕ್ಷಿತಾ ಮಾತ್ರ ತನಗೆ ಇಷ್ಟವಿದ್ದವರೆ ಗೆಲ್ಲಬೇಕು ಎಂದು ಪಟ್ಟು ಹಿಡಿದಿದ್ದರು.
55
ಹುಚ್ಚಾಟ ಮೆರೆದ ರಕ್ಷಿತಾ ಶೆಟ್ಟಿ
ಈಗ ರಕ್ಷಿತಾ ಶೆಟ್ಟಿ ಅವರು ಸೀಕ್ರೆಟ್ ರೂಮ್‌ನಲ್ಲಿ ಕೂಗಾಡಿದ್ದು, “ನಿಮಗೆ ಬಿಗ್ ಬಾಸ್ ಮನೆಯಲ್ಲಿ ಇರೋಕೆ ಅರ್ಹತೆ ಇಲ್ಲ. ಮರ್ಯಾದೆ ಕ್ರಾಸ್ ಮಾಡ್ತೀನಿ” ಎಂದು ಕೂಗಾಡಿದ್ದಾರೆ. ಧ್ರುವಂತ್ ಕೂಡ ಕೂಗಾಡಿದ್ದಾರೆ. ತನಗೆ ಬೇಕಾದವರು ಗೆಲ್ಲಬೇಕು ಎಂದು ರಕ್ಷಿತಾ ಆಟದ ವಿಚಾರದಲ್ಲಿ ತಾರತಮ್ಯ ಮಾಡಿದ್ದು ನೋಡಿ ವೀಕ್ಷಕರಿಗೂ ಬೇಸರ ಆಗಿದೆ. ಸೀಕ್ರೆಟ್ ರೂಮ್‌ನಲ್ಲಿ ರಕ್ಷಿತಾ ನಿಜವಾದ ಮುಖ ಹೊರಬಂದಿದೆ ಎಂದು ವೀಕ್ಷಕರು ಹೇಳಿದ್ದಾರೆ.
ಅಂದಹಾಗೆ ಈ ಬಾರಿ ಬೆಡ್ ಮೇಲಿದ್ದ ಬೆಡ್‌ಶೀಟ್‌ನ್ನು ತಗೊಂಡು ಎಲ್ಲ ಕಡೆ ಬಿಸಾಕಿದ್ದಾರೆ. ಈ ರೀತಿ ಸಿಟ್ಟು ಮಾಡಿ ಕೂಗಾಡಿದ್ದಾರೆ.