ಹುಟ್ಟುಹಬ್ಬಕ್ಕೆ ಗಿಫ್ಟ್ ಆಗಿ ಬಂದಿದ್ದ ಶ್ವಾನ ನಿಧನ; ಕಿರುತೆರೆ ನಟಿ ಐಶ್ವರ್ಯ ಭಾವುಕ ಪತ್ರ

First Published Jan 3, 2023, 12:06 PM IST

ಲಿಯಾ ಜೊತೆ ಕಳೆದ ಪ್ರತಿಯೊಂದು ಕ್ಷಣವನ್ನು ನೆನಪಿಸಿಕೊಂಡು ಭಾವುಕ ಪತ್ರ ಬರೆದ ಕಿರುತೆರೆ ನಟಿ ಬಾಸ್ಪುರೆ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯ ಬಾಸ್ಪುರೆ ಅವರ 2023 ಹೊಸ ವರ್ಷ ತುಂಬಾನೇ ಎಮೋಷನಲ್ ಅಗಿ ಆರಂಭವಾಗಿದೆ. ತಮ್ಮ ಪ್ರೀತಿಯ ಶ್ವಾನವನ್ನು ಕಳೆದುಕೊಂಡಿದ್ದಾರೆ. 

 'ನನ್ನ ಮನೆ ಸಂತೋಷ ನನ್ನ ಮುದ್ದು ಮಗು ಲಿಯಾ, ಆಕೆ ನನ್ನ 2013ರ ಹುಟ್ಟುಹಬ್ಬಕ್ಕೆ ಗಿಫ್ಟ್‌ ಆಗಿ ಬಂದ ವ್ಯಕ್ತಿ. ಕಲ್ಪನೆ ಮಾಡಿಕೊಳ್ಳದ ಮಟ್ಟಕ್ಕೆ ನಮ್ಮ ಮನೆಗೆ ಖುಷಿ ತಂದುಕೊಟ್ಟಿರುವೆ' ಎಂದು ಐಶ್ವರ್ಯ ಬರೆದುಕೊಂಡಿದ್ದಾರೆ.

'ನಾಯಿ ಅಂದ್ರೆ ಭಯ ಎನ್ನುತ್ತಿದ್ದವರು ಕೂಡ ನಿನ್ನ ಜೊತೆ ಆತ್ಮೀಯವಾದ್ದರು. ನಿನ್ನ ತುಂಟ ನಗುವಿಗೆ ಪ್ರತಿಯೊಬ್ಬರು ಸೋಲುತ್ತಿದ್ದರು'

'ನನ್ನ ಜೀವನ ಬಂದು ಸೂರ್ಯ ಕಿರಣ ನೀನು. ಈ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಿನ್ನ 10 ವರ್ಷದ ಹುಟ್ಟುಹಬ್ಬವನ್ನು ಆಚರಿಸಲು ನಾನು ಕಾಯುತ್ತಿದ್ದೆ' 

'ನಾವಿಬ್ಬರೂ ಒಂದೇ ತಿಂಗಳಿನಲ್ಲಿ ಹುಟ್ಟಿದ್ದವರು. ಆ ಸ್ವರ್ಗ ನಿನ್ನನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಿತ್ತು ಅನಿಸುತ್ತದೆ. ಅದಿಕ್ಕೆ ಇಷ್ಟು ಬೇಗ ಕರೆದುಕೊಂಡಿರುವುದು'

'ನನ್ನ ಜೀವನದಲ್ಲಿ ಸಂತೋಷ ತಂದಂತೆ ನೀನು ಸ್ವರ್ಗದಲ್ಲೂ ಅಷ್ಟೇ ಖುಷಿಯಾಗಿ ಸಂತೋಚ ಹರಡಿಸುತ್ತಿರುವ ಎಂದುಕೊಂಡಿರುವೆ. ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ'

'ನಾವು ದಿನ ತರುತ್ತಿದ್ದ ಬೇಕರಿ ಬನ್ ಮತ್ತು ರುಚಿ ರುಚಿಯಾದ ಟ್ರೀಟ್‌ಗಳು ನಿನಗೆ ಅಲ್ಲಿ ಸಿಗುತ್ತಿರಬೇಕು ಎಂದು ಭಾವಿಸಿರುವೆ. ನಮ್ಮ ಜೀವನದ ಅದೃಷ್ಟ ನೀನು ಲಿಯಾ' ಎಂದು ಐಶ್ವರ್ಯ ಭಾವುಕರಾಗಿದ್ದಾರೆ.

click me!