ಜೈಲಿನಿಂದ ಹೊರಬಂದ ಅಹಂಕಾರಿ ಜೈದೇವ್, ದಿಯಾ ಮನೆ ಮುಂದೆ ಗಲಾಟೆ ಮಾಡುತ್ತಾನೆ. ಗೆಳತಿಯ ಮಾತು ಕೇಳಿ, ಶತ್ರುವನ್ನು ಹತ್ತಿರದಲ್ಲೇ ಇಟ್ಟುಕೊಂಡು ನಿಗಾ ವಹಿಸಲು ದಿಯಾ ನಿರ್ಧರಿಸುತ್ತಾಳೆ. ಈ ಅಪಾಯಕಾರಿ ನಿರ್ಧಾರದಿಂದ ಅವಳ ಪ್ರಾಣಕ್ಕೆ ಸಂಚಕಾರ ಬರುತ್ತದೆಯೇ ಎಂಬ ಆತಂಕ ಶುರುವಾಗಿದೆ.
ಎಲ್ಲವನ್ನು ಕಳೆದುಕೊಂಡಿದ್ದರೂ ಕೆಡಿ ಜೈದೇವ್ ಅಹಂಕಾರ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ. ಜೈಲಿನಿಂದ ಹೊರಗಡೆ ಬರುತ್ತಲೇ ದಿಯಾ ಮನೆ ಮುಂದೆ ಕೂಗಾಡುತ್ತಿದ್ದಾನೆ. ಈ ಎಲ್ಲಾ ಘಟನೆ ನೋಡಿದ ದಿಯಾಗೆ ಆಕೆ ಗೆಳತಿ ಭಯಂಕರವಾದ ಸಲಹೆ ನೀಡಿದ್ದಾಳೆ. ಅದುವೇ ಕಂಕುಳಿಗೆ ವಿಷ ಸರ್ಪವನ್ನು ಕಟ್ಟಿಕೊಳ್ಳೋದು
25
ದಿಯಾ ಬದುಕು
ಈ ಹಿಂದೆ ಜೈದೇವ್ ಜೊತೆಯಲ್ಲಿದ್ದಾಗ ದಿಯಾಗೆ ಯಾವುದೇ ಸ್ವಾತಂತ್ರ್ಯವಿರಲಿಲ್ಲ. ಜೈದೇವ್ ಹೇಳಿದ ಎಲ್ಲದಕ್ಕೂ ದಿಯಾ ತಲೆಯಾಡಿಸುವ ಗೊಂಬೆಯಾಗಿದ್ದಳು. ಪದೇ ಪದೇ ಮಲ್ಲಿ ಬಗ್ಗೆ ಮಾತನಾಡೋದರಿಂದ ಜೈದೇವ್ ಮೇಲೆ ದಿಯಾಗೆ ಕೋಪ ಬಂದ್ರೂ ಹೇಳಿಕೊಳ್ಳದ ಸ್ಥಿತಿಯಲ್ಲಿದ್ದಳು. ಈ ಹಿಂದೆ ಎಲ್ಲಾ ವಿಷಯವನ್ನು ಜೈದೇವ್ ಮುಂದೆಯೇ ದಿಯಾ ಹೇಳಿಕೊಂಡಿದ್ದಳು.
35
ಏನದು ಭಯಂಕರವಾದ ಸಲಹೆ?
ನೀನು ಅನುಭವಿಸಿದ ನೋವು, ನರಕವನ್ನು ಜೈದೇವ್ ಸಹ ನೋಡಬೇಕು. ಆಗ ಮಾತ್ರ ನಿನ್ನ ಲೆಕ್ಕವೆಲ್ಲಾ ಟ್ಯಾಲಿ ಆಗೋದು. ಅವನು ಹೊರಗಡೆ ಇದ್ರೆ ಜೈದೇವ್ ಟಾರ್ಚರ್ ನೀನೇ ಸಹಿಸಿಕೊಳ್ಳಬೇಕು. ಅದೇ ಅವನು ನಿಮ್ಮ ಕಣ್ಣಳತೆಯಲ್ಲಿ ಫ್ರೆಂಡ್ ಅಥವಾ ಬಾಡಿಗಾರ್ಡ್ ಆಗಿ ಇದ್ರೆ ಅವನ ಮೇಲೆ ನಿಗಾ ಇರಿಸಬಹುದು.
ಶತ್ರು ದೂರವಿದ್ರೆ ಕಣ್ಣಿಡೋದು ತುಂಬಾ ಕಷ್ಟ. ಕಣ್ಮುಂದೆ ಇದ್ರೆ ಆತನ ಪ್ರತಿಯೊಂದು ಚಲನವಲನ ಗಮನಿಸಬಹುದು. ಗಂಡನಾಗಿ ಅಲ್ಲ, ನೀನು ಸಾಕುವ ಗುಲಾಮ ನಾಯಿ ಹಾಗೆ ನಿನ್ನ ಜೊತೆಯಲ್ಲಿರಲಿ ಎಂದು ಸಲಹೆ ನೀಡಿದ್ದಾಳೆ. ಗೆಳತಿಯ ಮಾತುಗಳನ್ನು ಕೇಳಿಸಿಕೊಂಡು ದಿಯಾ ಸಹ ಜೈದೇವ್‌ನನ್ನು ಮನೆಯೊಳಗೆ ಕರೆದುಕೊಳ್ಳಲು ನಿರ್ಧರಿಸಿದ್ದಾಳೆ.
ಗೆಳತಿ ಮಾತು ಕೇಳಿಸಿಕೊಂಡು ಜೈದೇವ್ ವಿಷಸರ್ಪ ಅನ್ನೋದನ್ನು ದಿಯಾ ಮರೆತಂತೆ ಕಾಣಿಸುತ್ತಿದೆ. ಈಗಾಗಲೇ ತನ್ನ ಈ ದರಿದ್ರ ಸ್ಥಿತಿಗೆ ದಿಯಾ ಸಹ ಕಾರಣ ಎಂದು ಜೈದೇವ್ ಹಲ್ಲುಕಡಿಯುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ದಿಯಾ ತೆಗೆದುಕೊಳ್ಳುತ್ತಿರುವ ನಿರ್ಧಾರ ಆಕೆಯ ಪ್ರಾಣಕ್ಕೆ ಅಪಾಯವನ್ನುಂಟು ಮಾಡುತ್ತಾ ಎಂದು ವೀಕ್ಷಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.