ಗರ್ಭಿಣಿ ಜಾಹ್ನವಿಯ ಆರೈಕೆ ಮಾಡ್ತಿರೋ ಜಯಂತ್ ಕರಾಳ ಮುಖ ಅನಾವರಣ…! ಮಗುವನ್ನೇ ಇಲ್ಲವಾಗಿಸ್ತಾನ ಸೈಕೋ?!

First Published | Nov 21, 2024, 12:01 PM IST

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತನ ಒಂದೊಂದು ಅವತಾರಗಳು ವೀಕ್ಷಕರ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಇದೀಗ ಜಾಹ್ನವಿಯ ತಾಯ್ತನವನ್ನೆ ಕಿತ್ತುಕೊಳ್ಳಲು ಹೊರಟಿದ್ದಾನೆ ಜಯಂತ್. 
 

ಲಕ್ಷ್ಮಿ ನಿವಾಸ (Lakshmi Nivasa) ಧಾರಾವಾಹಿ ಅದ್ಬುತವಾಗಿ ಮೂಡಿಬರುತ್ತಿದೆ. ದಿನದಿಂದ ದಿನಕ್ಕೆ ಇಂಟರೆಸ್ಟಿಂಗ್ ಎಪಿಸೋಡ್ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ ಜಾಹ್ನವಿ ತಾಯಿಯಾಗೋ ಸಂಭ್ರಮದಲ್ಲಿದ್ದಾಳೆ. ಮನೆಯಲ್ಲಿ ಹಬ್ಬದ ವಾತಾವರಣ ಮೂಡಿದೆ. 
 

ಜಯಂತ್ ಅಂತೂ ತಾನು ತಂದೆಯಾಗೋ ಸಂಭ್ರಮದಲ್ಲಿ, ಮುದ್ದಿನ ಚಿನ್ನುಮರಿಯನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದಾನೆ. ಆಕೆಗೆ ಬೇಕಾದ್ದನ್ನೆಲ್ಲಾ ಆಕೆಯ ಮುಂದೆ ಇಡುತ್ತಾ, ಆಕೆಗೆ ತಿಂಡಿ, ಹಾಲು ಹಣ್ಣುಗಳನ್ನು ನೀಡುತ್ತಾ, ಆಕೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾನೆ. ಜೊತೆಗೆ ಆಫೀಸ್ ಕೆಲಸ ಕೂಡ ಬಿಟ್ಟು ತನ್ನ ಹೆಂಡತಿಯ ಆರೈಕೆಗೆ ನಿಂತಿದ್ದಾನೆ. 
 

Tap to resize

ನನ್ನಿಂದಾಗಿ ಗಂಡನ ಕೆಲಸಕ್ಕೆ ಅಡ್ಡಿಯಾಗೋದು ಬೇಡ ಅಂತ, ಗಂಡನಿಗೆ ಆಫೀಸಿಗೆ ಹೋಗೋದಕ್ಕೆ ಹೇಳಿ, ಯಾರದ್ರೂ ಕೇರ್ ಟೇಕರ್ ನ್ನು ನೇಮಿಸೋದಕ್ಕೂ ಹೇಳ್ತಾಳೆ ಜಾಹ್ನವಿ. ಆದರೆ ತಮ್ಮ ನಡುವೆ ಬೇರೆ ಯಾವ ವ್ಯಕ್ತಿ ಬರೋದಕ್ಕೂ ಇಷ್ಟಪಡದ ಜಯಂತ್, ಅದಕ್ಕೆ ಒಪ್ಪೋದಿಲ್ಲ. ನಮ್ಮಿಬ್ಬರ ನಡುವೆ ಬೇರೆ ಯಾರೂ ಕೂಡ ಬರಬಾರದು ಅಂತ ಖಡಾಖಂಡಿತವಾಗಿ ಹೇಳ್ತಾನೆ ಜಯಂತ್. 
 

ಒಟ್ಟಲ್ಲಿ ತನ್ನ ಗಂಡನಲ್ಲಿ ಆದ ಬದಲಾವಣೆ, ಗಂಡ ತನ್ನ ಮೇಲೆ ತೋರಿಸುವ ಪ್ರೀತಿ ಎಲ್ಲಾ ನೋಡಿ ಸಂಭ್ರಮಿಸುತ್ತಿರುವ ಜಾಹ್ನವಿ, ಇನ್ನಾದರೂ ನನ್ನ ಗಂಡ ಹೀಗೆ ಇರಲಿ, ಯಾವಾಗ್ಲೂ ಅವರು ಖುಷಿ ಖುಷಿಯಾಗಿರಲಿ, ನಮ್ಮ ಪ್ರೀತಿಯಲ್ಲಿ ಅವರ ಹಳೆ ನೆನೆಪುಗಳು ಕಳೆದು ಹೋದರೆ ಸಾಕು ಎನ್ನುವ ಯೋಚನೆಯಲ್ಲಿರುತ್ತಾಳೆ ಜಾಹ್ನವಿ. 
 

ಇಷ್ಟೆಲ್ಲಾ ಸಂಭ್ರಮದ ನಡುವೆ ಜಾಹ್ನವಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಕಾದಿದೆ. ಅದೇನೆಂದರೆ ಜಾಹ್ನವಿ ಮತ್ತು ಜಯಂತ್ ಜೊತೆಯಲ್ಲಿ ಮಲಗುವಾಗ, ಜಯಂತ್ ಜಾನು ಹೊಟ್ಟೆ ಮೇಲೆ ಕೈ ಇಡುತ್ತಾನೆ, ಸಡನ್ ಆಗಿ ಮಗು ಇದೆ ಅನ್ನೋದು ನೆನಪಾಗಿ  ಕೈ ಹಿಂತೆಗೆದುಕೊಳ್ಳುತ್ತಾನೆ. ಮಗುವಿಗೆ ಅಲ್ವಾ ಹಾಗೆ ಮಗುವಿಗೆ ತೊಂದ್ರೆ ಆಗಬಾರದು ಅಂತ ಕೈ ತೆಗೆದಿರೋದಾಗಿ ಹೇಳುತ್ತಾನೆ. 
 

ಅದಕ್ಕೆ ಜಾಹ್ನವಿ ಹಾಗೇನೂ ಆಗಲ್ಲ, ಮಗು ಇನ್ನೂ ಬೆಳೆದೇ ಇಲ್ಲ ಎನ್ನುತ್ತಾಳೆ, ಈವಾಗ ಯೋಚನೆಗೆ ಇಳಿಯುವ ಜಯಂತ್, ನಮ್ಮಿಬ್ಬರ ನಡುವೆ ಮೂರನೇ ವ್ಯಕ್ತಿ ಬರಬಾರದು ಅಂತಾನೆ ಅಂದುಕೊಂಡಿರೋದು, ಇದೀಗ ಮಗು ಬಂದ್ರೆ, ಅದು ಮೂರನೇ ವ್ಯಕ್ತಿಯಾಗುತ್ತಾನೆ. ಇದರಿಂದ ನಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತೆ ಎನ್ನುತ್ತಾನೆ ಜಯಂತ್. 
 

ಅಷ್ಟೇ ಅಲ್ಲ, ಮಗುವಾದ ಬಳಿಕ ಜಾನು ಮಗುವಿನ ಕಡೆಗೆ ಹೆಚ್ಚಿನ ಗಮನ ನೀಡುತ್ತಾಳೆ. ಇದರಿಂದ ನನ್ನ ಬಗ್ಗೆ ಕೇರ್ ಕಡಿಮೆಯಾಗುತ್ತೆ, ಚಿನ್ನುಮರಿ ಮಗುವಿನ ಜೊತೆ ಇರೋವಾಗ, ನನಗೆ ಸಮಯ ಕೊಡೋದಕ್ಕೂ ಸಾಧ್ಯವಿಲ್ಲ ಎನ್ನುವ ಯೋಚನೆ ಬಂದು ಮಗುವನ್ನು ತೆಗೆಸಿಬಿಡುವ ಬಗ್ಗೆ ಮಾತನಾಡುತ್ತಾನೆ ಜಯಂತ್. ಜಾಹ್ನವಿ ಹಾಗೇನೂ ಹಾಗಲ್ಲ ನೀವೇ ನನ್ನ ಮೊದಲ ಮಗು ಅಂತ ಅಂದ್ರೂನೂ ಅದನ್ನ ಒಪ್ಪಿಕೊಳ್ಳೋಕೆ ಜಯಂತ್ ರೆಡಿ ಇಲ್ಲ. 
 

ಹಾಗಿದ್ರೆ ಜಯಂತ್ ಮುಂದಿನ ಯೋಚನೆ ಜಾಹ್ನವಿಯ ಗರ್ಭಪಾತ. ಇಂಥ ಸೈಕೋ ಇದ್ರೆ ಮುಂದೆ ಮಗುವಿಗೆ ಒಂದಲ್ಲ ಒಂದು ಅಪಾಯ ಉಂಟಾದ್ರೂ ಅದರಲ್ಲಿ ಸಂಶಯವೇ ಇಲ್ಲ. ಹಾಗಾಗಿ ಮುಂದೇನು ಅಘಾತ ಕಾದಿದೆ ಅನ್ನೋದನ್ನ ಕಾದು ನೋಡಬೇಕು. 
 

Latest Videos

click me!