ನಟಿ ಜಾಹ್ನವಿ ತಮ್ಮ ವೃತ್ತಿಜೀವನದಿಂದ ರಾಜಕೀಯಕ್ಕೆ ಬಂದ ಹಾದಿ, ಜನಸೇವೆಗಾಗಿ ಜೆಡಿಎಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡ ಕಾರಣ ಮತ್ತು ತಮ್ಮ ಮೇಲಿನ ಟೀಕೆಗಳಿಗೆ ನೀಡಿದ ಸ್ಪಷ್ಟನೆಗಳ ಬಗ್ಗೆ ಮಾತನಾಡಿದ್ದಾರೆ. ಸಮಾಜಸೇವೆಯೇ ತಮ್ಮನ್ನು ರಾಜಕೀಯಕ್ಕೆ ಕರೆತಂದಿದ್ದು ಎಂದು ಹೇಳಿದ್ದಾರೆ.
ಸುದ್ದಿ ವಾಹಿನಿಗಳಲ್ಲಿ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿ, ಆ ನಂತರ ಕಿರುತೆರೆಯ ಹಲವು ರಿಯಾಲಿಟಿ ಶೋಗಳು ಹಾಗೂ 'ಬಿಗ್ ಬಾಸ್ ಕನ್ನಡ ಸೀಸನ್ 12' ಸ್ಪರ್ಧಿಯಾಗಿ ಅಪಾರ ಜನಪ್ರಿಯತೆ ಗಳಿಸಿದ್ದ ಜಾಹ್ನವಿ, ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಜನಸೇವೆಯ ಉದ್ದೇಶದಿಂದ ರಾಜಕೀಯಕ್ಕೆ ಧುಮುಕಿರುವ ಅವರು 'ಜೆಡಿಎಸ್' ಪಕ್ಷದ ಮೂಲಕ ತಮ್ಮ ಹೊಸ ರಾಜಕೀಯ ಪಯಣವನ್ನು ಆರಂಭಿಸಿದ್ದಾರೆ. ಇತ್ತೀಚೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ತಮ್ಮ ಈ ರಾಜಕೀಯ ನಡಿಗೆ ಹಾಗೂ ಭವಿಷ್ಯದ ಕನಸುಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
25
ನೆಗೆಟಿವ್ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದ ಜಾಹ್ನವಿ; 'ಚುನಾವಣೆಯಲ್ಲಿ ವೋಟ್ ಮಾಡಿ' ಎಂದ ನಟಿ
ಬಿಗ್ ಬಾಸ್ ಮನೆಯಲ್ಲಿದ್ದಾಗ ತಮ್ಮ ವಿರುದ್ಧ ಎದುರಾದ ನೆಗೆಟಿವ್ ಕಾಮೆಂಟ್ಸ್ ಹಾಗೂ ಟ್ರೋಲ್‌ಗಳ ಕುರಿತು ಮಾತನಾಡಿದ ಜಾಹ್ನವಿ, "ನನ್ನ ವಿರುದ್ಧದ ನೆಗೆಟಿವ್ ಇಮೇಜ್ ಅನ್ನು ಪಾಸಿಟಿವ್ ಮಾಡಿಕೊಳ್ಳಲು ನಾನೇನೂ ವಿಶೇಷ ಪ್ರಯತ್ನ ಮಾಡಲಿಲ್ಲ. ಬಿಗ್ ಬಾಸ್ ಮನೆಯೊಳಗೂ ನನಗೆ ಸರಿ ಅನಿಸಿದ್ದನ್ನೇ ಮಾಡಿದೆ. ದೊಡ್ಮನೆಯಿಂದ ಆಚೆ ಬಂದಾಗ ಸಣ್ಣಪುಟ್ಟ ವಿಷಯಗಳಿಗೆ ಜನರು ತಲೆಕೆಡಿಸಿಕೊಳ್ಳುವುದನ್ನು ನೋಡಿ ನಗು ಬರ್ತಿತ್ತು. ಇಂತಹ ಸಣ್ಣ ವಿಷಯಗಳ ಬದಲು ಎಲೆಕ್ಷನ್ ಟೈಮ್‌ನಲ್ಲಿ ತಲೆಕೆಡಿಸಿಕೊಂಡು ಸರಿಯಾಗಿ ವೋಟ್ ಮಾಡಿದರೆ ನಮ್ಮ ದೇಶ ಉದ್ದಾರ ಆಗುತ್ತದೆ ಎಂದು ಅವತ್ತೇ ಯೋಚಿಸುತ್ತಿದ್ದೆ" ಎಂದಿದ್ದಾರೆ.
35
'ಗ್ಲಾಮರ್ ಪ್ರೊಫೆಷನ್, ಕಾಂಪಿಟೇಷನ್‌ಗಾಗಿ ಈ ಬಟ್ಟೆ': ಟೀಕೆಗಳಿಗೆ ಜಾಹ್ನವಿ ಖಡಕ್ ಉತ್ತರ
ತಮ್ಮ ಉಡುಪಿನ (ಡ್ರೆಸ್ ಕೋಡ್) ಕುರಿತು ಬಂದ ಟೀಕೆಗಳಿಗೆ ಸ್ಪಷ್ಟನೆ ನೀಡಿದ ಅವರು, "ನಾನಿದ್ದದ್ದು ಆಂಕರಿಂಗ್ ಹಾಗೂ ಸಿನಿಮಾಗಳ ಗ್ಲಾಮರ್ ವರ್ಲ್ಡ್‌ನಲ್ಲಿ. ಇವತ್ತಿಗೂ ನಾನು ಯಂಗ್‌ಸ್ಟರ್ಸ್‌ಗೆ ಕಾಂಪೀಟ್ ಮಾಡಲು ರೆಡಿ ಇದ್ದೇನೆ. ನನಗೆ ಅವಕಾಶಗಳು ಹುಡುಕಿಕೊಂಡು ಬರಲಿ ಮತ್ತು ಪ್ರೊಫೆಷನಲಿ ನಾನು ಇನ್ನೂ ಫಿಟ್ ಆಗಿದ್ದೀನಿ ಎಂದು ತೋರಿಸಿಕೊಳ್ಳಲು ನನ್ನ ಖುಷಿಗೆ ಹಾಗೆ ಡ್ರೆಸ್ ಮಾಡುತ್ತಿದ್ದೆ ಹೊರತು ಯಾರನ್ನೋ ಆಕರ್ಷಿಸುವುದಕ್ಕಲ್ಲ. ಜಗತ್ತಿಗೆ ನನ್ನ ಬಗ್ಗೆ ಗೊತ್ತಿಲ್ಲದೇ ಇರುವುದು ತುಂಬಾ ಇರುತ್ತದೆ. ನನ್ನ ಪರ್ಸನಲ್ ಲೈಫ್ ಬಗ್ಗೆ ಆ ಸಂದರ್ಭದಲ್ಲಿ ಇದ್ದ ಕೋಪವನ್ನು ಹೊರಹಾಕಿದ್ದೆ, ಅದಕ್ಕೆ ಈಗ ತಾರ್ಕಿಕ ಅಂತ್ಯ ಸಿಕ್ಕಿದೆ, ಈಗ ಯಾವುದೇ ಕೋಪ-ತಾಪಗಳಿಲ್ಲ" ಎಂದು ವಿವರಿಸಿದ್ದಾರೆ.
ದುಡಿಮೆಯ ಶೇ.10ರಷ್ಟು ಸಮಾಜಸೇವೆ; ಜೆಡಿಎಸ್ ಪಕ್ಷದಿಂದ ಬಂತು ಕರೆ
ತಮ್ಮ ಸಮಾಜಸೇವೆಯ ಬಗ್ಗೆ ಮಾತನಾಡುತ್ತಾ, ನನ್ನ ದುಡಿಮೆಯ ಶೇ.10ರಷ್ಟು ಹಣವನ್ನು ಜನರಿಗೆ ನೀಡಬೇಕು ಎಂದು ನಿರ್ಧರಿಸಿದ್ದೆ. ಚಿಕ್ಕಪುಟ್ಟ ಸಹಾಯ ಮಾಡುವ ವೀಡಿಯೋಗಳನ್ನು ಪೋಸ್ಟ್ ಮಾಡಿದರೆ ಅದನ್ನು ನೋಡಿ ಇನ್ನೊಬ್ಬರು ಸ್ಪೂರ್ತಿ ಪಡೆದು ನಾಲ್ಕು ಜನರಿಗೆ ಹೆಲ್ಪ್ ಮಾಡುತ್ತಾರೆ ಎಂಬುದು ನನ್ನ ಉದ್ದೇಶ. ನಾವು ಹಸಿದವರಿಗೆ 'ಬಿರಿಯಾನಿ ಹಂಚುವ' ವೀಡಿಯೋಗಳನ್ನು ನೋಡಿಯೇ ಜೆಡಿಎಸ್ ಪಕ್ಷದವರಿಂದ ನನಗೆ ರಾಜಕೀಯಕ್ಕೆ ಆಹ್ವಾನದ ಕರೆ ಬಂದಿತ್ತು ಎಂದು ಜೆಡಿಎಸ್ ಸೇರ್ಪಡೆಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
55
ಜೆಡಿಎಸ್‌ಗೂ ಮುನ್ನ ಬಿಜೆಪಿಯಿಂದ ಬಂದಿತ್ತು ಆಫರ್!
ರಾಜಕೀಯ ಆಯ್ಕೆಯ ಕುರಿತು ಸತ್ಯಾಸತ್ಯತೆ ಹಂಚಿಕೊಂಡ ಜಾಹ್ನವಿ, ಜೆಡಿಎಸ್ ಪಕ್ಷ ಸೇರುವ ಮುನ್ನ ನನಗೆ ನಿಜವಾಗಿ 'ಬಿಜೆಪಿ' ಪಕ್ಷದಿಂದಲೂ ಆಫರ್ ಬಂದಿತ್ತು. ಜೆಡಿಎಸ್‌ನಿಂದ ಆಫರ್ ಬಂದಾಗಲೂ ನಾನು ಈಗಾಗಲೇ ಸಿನಿಮಾಗಳನ್ನು ಮಾಡುತ್ತಿದ್ದೇನೆ, ರಾಜಕೀಯ ಬೇಕಾ ಅಥವಾ ಬೇಡ್ವಾ ಎಂದು ಸಾಕಷ್ಟು ಯೋಚನೆ ಮಾಡಿದ್ದೆ. ಅಂತಿಮವಾಗಿ ಜನಸೇವೆಗಾಗಿ ಜೆಡಿಎಸ್ ಪಕ್ಷವನ್ನು ಆಯ್ಕೆ ಮಾಡಿಕೊಂಡೆ ಎಂದು ತಮ್ಮ ರಾಜಕೀಯ ನಡೆಗೆ ಸ್ಪಷ್ಟನೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.