ಗೌತಮ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮಾತಿನ ಮಲ್ಲ ಸೃಜನ್… ಭೂಪತಿ ಕಡೆಯವನಾ? ವೀಕ್ಷಕರಿಗೆ ಹೀಗೊಂದು ಸಂಶಯ!

Published : Mar 28, 2025, 01:36 PM ISTUpdated : Mar 28, 2025, 04:15 PM IST

ಅಮೃತಧಾರೆ ಧಾರಾವಾಹಿಗೆ ಹೊಸದಾಗಿ ಎಂಟ್ರಿ ಕೊಟ್ಟ ಮಾತಿನ ಮಲ್ಲ ಸೃಜನ್, ಭೂಮಿಕಾಗೆ ಇಷ್ಟೊಂದು ಕ್ಲೋಸ್ ಆಗಿರೋದು ನೋಡಿದ್ರೆ, ಇವನು ಭೂಪತಿ ಕಡೆಯವನು ಇರಬಹುದು ಎನ್ನುವ ಸಂಶಯ ವೀಕ್ಷಕರಿಗೆ ಮೂಡಿದೆ.   

PREV
17
ಗೌತಮ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಮಾತಿನ ಮಲ್ಲ ಸೃಜನ್… ಭೂಪತಿ ಕಡೆಯವನಾ? ವೀಕ್ಷಕರಿಗೆ ಹೀಗೊಂದು ಸಂಶಯ!

ಅಮೃತಧಾರೆಯಲ್ಲಿ (Amruthadhaare Serial) ಹೊಸ ಪಾತ್ರವೊಂದರ ಎಂಟ್ರಿಯಾಗಿದೆ. ಭೂಮಿಕಾ, ಸುಧಾ ಮತ್ತು ಲಚ್ಚಿಯನ್ನು ರೌಡಿಗಳಿಂದ ರಕ್ಷಿಸಿ, ಮನೆಗೆ ಸೇಫ್ ಆಗಿ ಮುಟ್ಟಿಸಿದ ಕ್ಯಾಬ್ ಡೈವರ್ ಸೃಜನ್ ಸೀರಿಯಲ್ ನ ಹೊಸ ಎಂಟ್ರಿ. ಈತ ಮಾತಿನ ಮಲ್ಲ, ಮಾತಿನಲ್ಲೆ ಮನೆಕಟ್ಟುವ ಈತನನ್ನು ನೋಡಿ ಸುಧಾಗಂತೂ ಕೋಪ, ಆದರೆ ಭೂಮಿಕಾಗೆ ಈತನ ಗುಣ ಇಷ್ಟವಾಗಿದೆ. 
 

27

ಅಷ್ಟೇ ಅಲ್ಲದೇ ಭೂಮಿಕಾಗೆ ಸೃಜನ್ ಹೇಳಿದ ರೌಡಿಗಳ ಕಥೆ ಕೇಳಿ ಶಾಕ್ ಆಗಿದ್ದು, ಜೊತೆಗೆ ಸೃಜನ್, ಜಾಗರೂಕತೆ ಇರುವಂತೆಯೂ, ಮನೆಯಲ್ಲಿಯೇ ನಿಮಗೆ ದುಷ್ಮನ್ ಇದ್ದಾರೆ, ನಿಮ್ಮ ನೆರಳನ್ನು ಸಹ ನೀವು ನಂಬಬೇಡಿ ಎಂದು ಹೇಳಿದ್ದು, ಎಲ್ಲಾ ಕೇಳಿ ಬೆಚ್ಚಿ ಬಿದ್ದಿದ್ದಳು. ಕನಸಿನಲ್ಲೂ ತಮ್ಮನ್ನು ಕೊಲೆ ಮಾಡಲು ಕಾರು ಬರುವಂತಾಗಿ ಬೆಚ್ಚಿ ಎದ್ದಿದ್ದಳು ಭೂಮಿಕಾ. 
 

37

ಈಗ ಗೌತಮ್ ಬಳಿ ಹೇಳಿ ಮಾತಿನ ಮಲ್ಲ ಹಾಗೂ ತಮ್ಮನ್ನು ಅಪಾಯದಿಂದ ಕಾಪಾಡಿದ ಅಪಾದ್ಭಾಂಧವ ಸೃಜನ್ ಗೆ ಕೆಲಸ ಕೊಡಿಸಿದ್ದಾರೆ. ಆ ಖುಷಿಯಲ್ಲಿ ಮನೆಗೆ ಬಂದು ಭೂಮಿಕಾಗೆ ಸ್ವೀಟ್ ನೀಡಿ, ನಿಮ್ಮ ಪಾದದ ಧೂಳನ್ನು ಹಣೆ ಹಚ್ಚಬೇಕು. ನೀವು ನನ್ನ ಪಾಲಿನ ದೇವರು ಎಂದು ಹೇಳಿ ಹೊಗಳಿ ಅಟ್ಟಕ್ಕೇರಿಸುತ್ತಿದ್ದಾನೆ. 
 

47

ನಿಮ್ಮನ್ನು ಕೇವಲ ಮನೆಗೆ ಬಿಡೋದಕ್ಕೆ ಬಂದಿದ್ದು ನಾನು, ಈಗ ಕೆಲಸ ಸಿಕ್ಕಿದೆ. ನಿಮ್ಮನ್ನ ಮನೆಗೆ ಡ್ರಾಪ್ ಮಾಡೋದಕ್ಕೆ ಬಂದು ನನ್ನ ಜೀವನ ಪಿಕ್ ಅಪ್ ಆಗ್ತಿದೆ. ನಿಮ್ಮನ್ನು ಹೊಗಳದೇ ಇನ್ಯಾರನ್ನು ಹೊಗಳಲಿ ಎಂದೆಲ್ಲಾ ಹೇಳ್ತಿದ್ದಾನೆ ಸೃಜನ್. ಸೃಜನ್ ಮಾತು ಕೇಳಿ, ಭೂಮಿಗೆ ನಗು ಜೊತೆಗೆ ಅಯ್ಯೋ ಅನಿಸುತ್ತಿದೆ. ಭೂಮಿಕಾ ಜೊತೆ ವೀಕ್ಷಕರಿಗೂ ಹಾಗೆ ಅನಿಸ್ತಿದೆ. 
 

57

ಸೃಜನ್ ಮಾತು ಕೇಳಿದ ವೀಕ್ಷಕರು, ಈ ಸೀರಿಯಲ್ ನಲ್ಲಿ ಎಲ್ಲಾರೂ ಸೇರಿದ್ರೂ ಇವನಷ್ಟು ಮಾತನಾಡೋರು ಯಾರು ಇಲ್ಲಪ್ಪ ಎಂದಿದ್ದಾರೆ.  ಹೆಚ್ಚಿನ ವೀಕ್ಷಕರಿಗೆ ಇವನು ಇಷ್ಟು ಬೋಲ್ಡ್ ಆಗಿ, ವಟ ವಟ ಮಾತನಾಡೋದು ನೋಡಿ, ಇವನು ಭೂಪತಿ ಕಡೆಯವರು ಎನ್ನುವ ಸಂಶಯ ಕೂಡ ಬಂದಿದೆ. ಅದಕ್ಕಾಗಿ ಯಾರೋ ಪುಣ್ಯಾತ್ಮ ನೀನು ನೀನೇನು ನಾಟಕ ಮಾಡೋಕೆ ಬಂದಿದಿಯಪ್ಪ ಅನ್ನ ಕೊಟ್ಟ ಮನೆಗೆ ಕನ್ನ ಹಾಕ್ಬೇಡ ಅಂದಿದ್ದಾರೆ. 
 

67

ಯಾರ್ ಗುರು ಇವ್ನು 50ರೂಪಾಯಿಗೆ ಆಕ್ಟಿಂಗ್ ಮಾಡು ಅಂದ್ರೆ 500ರೂಪಾಯಿಗೆ ಆಕ್ಟಿಂಗ್ ಮಾಡತವನಲ್ಲ ಇದರಲ್ಲಿ ಏನೋ ಸಂಚ್ ಇದೆ ಅನ್ನಿಸ್ತಿದೆ  ಎಂದು ಒಬ್ಬರು ಹೇಳಿದ್ರೆ, ಇನ್ನೊಬ್ಬರು ಭೂಪತಿ ಕಡೆ ಅವ್ರು ಇರಬೇಕು ಆದಷ್ಟು ಹುಷಾರು ಭೂಮಿ ಅವ್ರೆ ಎಂದಿದ್ದಾರೆ. ಯಾಕೋ ಇವನು ವಿಲನ್ ಭೂಪತಿ (villain Bhupathi) ಕಡೆಯವನು ಅನಿಸುತ್ತೆ ಗೌತಮ್ ತಂಗಿ ಲೈಫ್ ಹಾಳು ಮಾಡೋಕ್ಕೆ ಬಂದಿರ್ಬಹುದು ಅಂತಾನೂ ಹೇಳ್ತಿದ್ದಾರೆ. 
 

77

ಇನ್ನೂ ಕೆಲವರು ಅತಿ ವಿನಯಂ ಧೂರ್ತ ಲಕ್ಷಣಂ ಅಂತಾನೂ ಹೇಳಿದ್ದಾರೆ. ಮತ್ತೆ ಕೆಲವರು ಇವನು ಒಳ್ಳೆಯವನೇ ಇರಬೇಕು, ಸುಧಾಗೆ ಜೋಡಿ ಮಾಡೋದಕ್ಕೆ ಡೈರೆಕ್ಟರ್ ಇವನ ಎಂಟ್ರಿ ಮಾಡಿಸಿದ್ದಾರೆ ಅಂತಾನೂ ಹೇಳ್ತಿದ್ದಾರೆ. ಯಾವುದಕ್ಕೂ ನಿಜಾ ಏನು ಅನ್ನೋದನ್ನು ಕಾದು ನೋಡಬೇಕು. 
 

Read more Photos on
click me!

Recommended Stories