ಡಿಸಿಎಂ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿಕೆಎಸ್ ಹೆಗಡೆ ಅವರ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ವಿಟಿಯು ಯೂಥ್ ಫೆಸ್ಟ್‌ನ ಬಡ್ಡಿ ಬೆಂಚ್ ಕಾನ್ವರ್ಷೇಷನ್‌ನಲ್ಲಿ ನಾಲ್ಕನೇ ಎಪಿಸೋಡ್‌ನ ಅತಿಥಿಯಾಗಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದದಲ್ಲಿ ನಟಿ ರಮ್ಯಾ ಮಾತನಾಡಿ ಹಲವಾರು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಐಶ್ವರ್ಯಾ ಡಿಕೆಎಸ್ ಹೆಗ್ಡೆ ಕೂಡ ವೇದಿಕೆಯಲ್ಲಿ ಜೊತೆಯಾಗಿದ್ದರು.
ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿರುವ ರಮ್ಯಾ, ಐಶ್ವರ್ಯಾ ಡಿಕೆಎಸ್ ಹೆಗ್ಡೆ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡು, ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನನ್ನ ಮುದ್ದು, ಕರುಣೆಯ ಮೂರ್ತಿಯಾಗಿರುವ ಐಶು, ನೀನು ಅದ್ಭುತ ಮಹಿಳೆಯಾಗಿ ರೂಪುಗೊಂಡಿದ್ದಕ್ಕೆ ನನಗೆ ಬಹಳ ಹೆಮ್ಮೆ ಇದೆ ಎಂದು ರಮ್ಯಾ ಬರೆದುಕೊಂಡಿದ್ದಾರೆ.
ನಿನಗೆ ಈಜುವುದನ್ನು ಕಲಿಸಿದ್ದು, ಒಟ್ಟಿಗೆ ಶಾಪಿಂಗ್ ಮಾಡಿದ್ದು, ನನ್ನ ಸಿನಿಮಾಗಳ ಸಮಯದಲ್ಲಿ ಥಿಯೇಟರ್‌ನಲ್ಲಿ ಕೂಗಿದ್ದು, ಕೊನೆಗೆ ಇಂದು ನಿನ್ನೊಂದಿಗೆ ವೇದಿಕೆ ಹಂಚಿಕೊಂಡಿದ್ದನ್ನು ನೋಡಿ ಖುಷಿಯಾಗಿದೆ.
ನೀನು ಇಂದು ಅನೇಕ ಯುವತಿಯರಿಗೆ ಸ್ಫೂರ್ತಿ ನೀಡುವುದನ್ನು ನೋಡುವುದು ಎಲ್ಲವೂ ಲೈಫ್ ಒಂದು ಪೂರ್ಣ ಸರ್ಕಲ್ ಪಡೆದ ಮೂವ್‌ಮೆಂಟ್ ಎಂದು ನನಗೆ ಅನಿಸಿದೆ. ನಿನಗೆ ನನ್ನಲ್ಲಿ ಯಾವಾಗಲೂ ಒಬ್ಬ ಸ್ನೇಹಿತೆ ಇರುತ್ತಾಳೆ ಐಶು ಎಂದು ರಮ್ಯಾ ಬರೆದುಕೊಂಡಿದ್ದಾರೆ.
ಇದಕ್ಕೆ ಐಶ್ವರ್ಯಾ ಕೂಡ ಪ್ರತಿಕ್ರಿಯೆ ನೀಡಿ, ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ತುಂಬಾ ಧನ್ಯವಾದ. ನಿಜವಾಗಿಯೂ ಬಹಳಷ್ಟು ಅರ್ಥವನ್ನು ನೀಡುತ್ತದೆ. ಇಷ್ಟು ವರ್ಷಗಳಲ್ಲಿ ನಾವು ಹೆಚ್ಚು ಮಾತುಕತೆ ನಡೆಸಿಲ್ಲ ಅನ್ನೋದು ನನಗೆ ತಿಳಿಸಿದೆ. ಆದರೆ ಇಂದಿನ ಮಾತುಕತೆ ಬಹಳ ಸಮಯದಿಂದ ಉಂಟಾಗಿದ್ದ ಹಲವು ಅಂತರವನ್ನು ತೆಗೆದುಹಾಕಿದೆ ಎಂದು ಬರೆದಿದ್ದಾರೆ.
ರಮ್ಯಾ ಹಂಚಿಕೊಂಡ ಪೋಸ್ಟ್‌ಗೆ ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದು, ಇವರಿಬ್ಬರ ನಡುವೆ ಇಂಥದ್ದೊಂದು ಸ್ನೇಹವಿರುವ ಬಗ್ಗೆ ನಮಗೆ ಇಂದೇ ಗೊತ್ತಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ರಮ್ಯಾ ಧರಿಸಿದ್ದ ಡ್ರೆಸ್‌ನ ಬಗ್ಗೆ ಮೆಚ್ಚುಗೆಯ ಕಾಮೆಂಟ್ ಮಾಡಿದ್ದಾರೆ.