ನಟ ಶಿಶಿರ್ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ ಅವರು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಭಾಗವಹಿಸಿದ್ದರು. ಆ ವೇಳೆ ಇವರಿಬ್ಬರ ಮಧ್ಯೆ ಸ್ನೇಹ ಹುಟ್ಟಿಕೊಂಡಿದ್ದು, ಈಗಲೂ ಮುಂದುವರೆಯುತ್ತಿದೆ. ʼಬಿಗ್ ಬಾಸ್ʼ ಮನೆಯಲ್ಲಿ ಸ್ನೇಹಿತರಾಗಿದ್ದವರು, ಹೊರಗಡೆ ಬಂದ್ಮೇಲೆ ಸಂಬಂಧವೇ ಇಲ್ಲ ಎನ್ನೋ ರೀತಿಯಲ್ಲಿ ಇರುತ್ತಾರೆ. ಆದರೆ ಶಿಶಿರ್, ಐಶ್ವರ್ಯಾ ಅವರು ಪಾರ್ಟ್ನರ್‌ಗಳಾಗಲಿದ್ದಾರಂತೆ.
ಶಿಶಿರ್ ಶಾಸ್ತ್ರೀ, ಐಶ್ವರ್ಯಾ ಶಿಂಧೋಗಿ, ಮೋಕ್ಷಿತಾ ಪೈ ಅವರು ಇತ್ತೀಚೆಗೆ ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಟ್ಟಿದ್ದರು. ಇನ್ನು ಕೆಲ ಕಾರ್ಯಕ್ರಮಗಳಿಗೂ ಕೂಡ ಒಟ್ಟಿಗೆ ಹೋಗಿದ್ದರು.
ಶಿಶಿರ್ ಶಾಸ್ತ್ರೀ, ಐಶ್ವರ್ಯಾ ಅವರು ಟ್ರಿಪ್ ಮಾಡುತ್ತಿರುವ ವಿಡಿಯೋವನ್ನು ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.
ಶಿಶಿರ್ ಶಾಸ್ತ್ರೀ, ಐಶ್ವರ್ಯಾ ಅವರು ಇತ್ತೀಚೆಗೆ ಯಶಸ್ವಿನಿ ಆನಂದ್ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆ ವೇಳೆ ಇವರಿಬ್ಬರ ಮಧ್ಯೆ ಲವ್ ಇದೆಯಾ ಎನ್ನುವ ಪ್ರಶ್ನೆ ಬಂದಿದೆ.
ಶಿಶಿರ್, ಐಶ್ವರ್ಯಾಗೆ ಈಗ ಸಾಕಷ್ಟು ಮದುವೆ ಪ್ರಪೋಸಲ್‌ಗಳು ಬರುತ್ತಿವೆ. ಶಿಶಿರ್ ಹಾಗೂ ಐಶ್ವರ್ಯಾ ಅವರು ನಾವು ಬ್ಯುಸಿನೆಸ್ ಪಾರ್ಟ್ನರ್ಸ್ ಆಗಬಹುದು, ಆದರೆ ಸಂಗಾತಿಗಳಾಗೋದಿಲ್ಲ ಎಂದು ಹೇಳಿದ್ದಾರೆ.
ಈ ಮೂಲಕ ಇವರಿಬ್ಬರು ಲವ್ ಮಾಡ್ತಿಲ್ಲ, ಮದುವೆಯೂ ಆಗೋದಿಲ್ಲ ಎಂದು ಅವರು ಹೇಳಿದ್ದಾರೆ. ಈ ಗಾಸಿಪ್‌ಗಳಿಗೆ ಅವರು ಬ್ರೇಕ್ ಹಾಕಿದ್ದಾರೆ.
ಐಶ್ವರ್ಯಾ ಶಿಂಧೋಗಿ ಹಾಗೂ ಶಿಶಿರ್ ಶಾಸ್ತ್ರೀ ಅವರು ಮುಂದಿನ ದಿನಗಳಲ್ಲಿ ಯಾವುದಾದರೂ ಪ್ರಾಜೆಕ್ಟ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರಾ ಎಂದು ಕಾದು ನೋಡಬೇಕಿದೆ.