ಮೂರು ತಿಂಗಳ ಕಾಲ ಪರಸ್ಪರ ತಿಳಿದ ನಂತರ ಜುಲೈ 2022ರಲ್ಲಿ ರಿಜಿಸ್ಟ್ರರ್ ಮ್ಯಾರೇಜ್ ಮಾಡಿಕೊಂಡಿದ್ದೇನೆ., ETimesಗೆ ರಾಖಿ ತಿಳಿಸಿದರು. 'ನಾವು ನಿಕಾಹ್ ಸಮಾರಂಭವನ್ನೂ ಮಾಡಿಕೊಂಡಿದ್ದೇವೆ. ಅವರು ಅದನ್ನು ಬಹಿರಂಗಪಡಿಸದಂತೆ ನನ್ನನ್ನು ತಡೆದ ಕಾರಣ, ನಾನು ಕಳೆದ ಏಳು ತಿಂಗಳಿಂದ ಬಾಯಿ ಮುಚ್ಕೊಂಡಿದ್ದೆ. ನಮ್ಮ ಮದುವೆ ಬಗ್ಗೆ ಜನರಿಗೆ ತಿಳಿದಿದ್ದರೆ, ಅವರ ಸಹೋದರಿಗೆ ಹುಡುಗ ಹುಡುಕುವುದು ಕಷ್ಟ ಎಂದು ಅವರು ಭಾವಿಸಿದರು. ಅವರ ಪ್ರಕಾರ.ರಾಖಿ ಸಾವಂತ್ ಅವರೊಂದಿಗೆ ಅವರ ಹೆಸರು ಸೇರಿದರೆ, ಅವಮಾನವನ್ನು ಆಹ್ವಾನಿಸಿದ್ದೀರಿ ಎಂದರ್ಥ ಎಂದು ನಟಿ ಹೇಳಿದ್ದಾರೆ.